ಅಜಂಘಡ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ತರಬೇತಿ ವಿಮಾನವೊಂದು ಪತನ ಆಗಿದೆ. ಅಜಂಘಡ ಜಿಲ್ಲೆಯ ಕುಶ್ವಾಪುರವಾ ಗ್ರಾಮದಲ್ಲಿ ತರಬೇತಿ ವಿಮಾನ ಪತನವಾಗಿದ್ದು, ಪೈಲಟ್ ಸಾವನ್ನಪ್ಪಿದ್ದಾರೆ.
ಅಜಂಘಡದಲ್ಲಿ ತರಬೇತಿ ವಿಮಾನ ಪತನ, ಪೈಲಟ್ ದುರ್ಮರಣ - ಉತ್ತರ ಪ್ರದೇಶದ ಅಜಂಘಡ ಸುದ್ದಿ
ಉತ್ತರ ಪ್ರದೇಶದ ಅಜಂಘಡದಲ್ಲಿ ಭೀಕರ ಅಪಘಾತ ಸಂಭವಿಸಿ, ಪೈಲಟ್ ಮೃತಪಟ್ಟಿದ್ದಾರೆ. ಕುಶ್ವಾಪುರವಾ ಗ್ರಾಮದಲ್ಲಿ ತರಬೇತಿ ವಿಮಾನ ಪತನವಾಗಿ ಈ ದುರಂತ ಸಂಭವಿಸಿದೆ.
ವಿಮಾನ ಅಪಘಾತ
ಬೆಳಗ್ಗೆ 11:30ರ ಸುಮಾರಿಗೆ ವಿಮಾನ ಹಠಾತ್ತನೆ ನಿಯಂತ್ರಣ ಕಳೆದುಕೊಂಡು ಪತನವಾಯಿತು ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ವಿಮಾನ ನೆಲಕ್ಕಪ್ಪಳಿಸುತ್ತಿದ್ದಂತೆ ಛಿದ್ರವಾಯಿತು. ಇಬ್ಬರು ಪ್ಯಾರಾಚೂಟ್ ಮೂಲಕ ಕೆಳಗೆ ಜಿಗಿದಿದ್ದರು. ಇವರಲ್ಲಿ ಪೈಲಟ್ ಮೃತದೇಹ ಸಿಕ್ಕಿದೆ. ಇನ್ನೊಬ್ಬರ ಸುಳಿವು ಸಿಕ್ಕಿಲ್ಲ ಎಂದು ಗ್ರಾಮದ ನಿವಾಸಿಗಳು ಹೇಳಿದ್ದಾರೆ ಅಂತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated : Sep 21, 2020, 4:54 PM IST