ಶಾಮ್ಲಿ(ಉತ್ತರ ಪ್ರದೇಶ):ಜಿಲ್ಲೆಯ ಕೈರಾನ ಬೈಪಾಸ್ ರಸ್ತೆಯಲ್ಲಿ ನಿಲ್ಲಿಸಿದ್ದ ತನ್ನ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದ ವ್ಯಕ್ತಿ ಆಜಾದ್ ಸಮಾಜ ಪಕ್ಷದ ನಾಯಕ ಮುರಾಸ್ಲೀನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶ: ತನ್ನ ಕಾರಿನಲ್ಲೇ ಶವವಾಗಿ ಪತ್ತೆಯಾದ ಎಎಸ್ಪಿ ಮುಖಂಡ - Property dealer
ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನ ಬೈಪಾಸ್ ರಸ್ತೆಯಲ್ಲಿ ನಿಲ್ಲಿಸಿದ್ದ ತನ್ನ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದ ವ್ಯಕ್ತಿ ಆಜಾದ್ ಸಮಾಜ ಪಕ್ಷದ ನಾಯಕ ಮುರಾಸ್ಲೀನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಮ್ಲಿಯಲ್ಲಿ ತನ್ನ ಕಾರಿನಲ್ಲೇ ಶವವಾಗಿ ಪತ್ತೆಯಾದ ಆಜಾದ್ ಸಮಾಜ ಪಕ್ಷದ ಮುಖಂಡ
ಕಾರಿನಲ್ಲಿ ಶವ ಪತ್ತೆಯಾಗಿರುವ ಸುದ್ದಿ ತಲುಪುತ್ತಲೇ ಪೊಲೀಸರು ಸ್ಥಳಕ್ಕೆ ತಲುಪಿ ಕಾರಿನಲ್ಲಿ ದೊರೆತ ಚಾಲನಾ ಪರವಾನಗಿಯಿಂದ ಆತನನ್ನು ಗುರುತಿಸಿದ್ದಾರೆ. ಕಾರ್ಯಾಚರಣೆಯ ವೇಳೆ ವ್ಯಕ್ತಿಯು ಆಸ್ತಿ ಮಾರಾಟಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದರು ಹಾಗೂ ಇತ್ತೀಚೆಗೆ ಆಜಾದ್ ಪಕ್ಷಕ್ಕೆ ಸೇರಿದ್ದರು ಎಂದು ತಿಳಿದುಬಂದಿದೆ.
ಇನ್ನೂ ಮೃತ ದೇಹದಲ್ಲಿ ಯಾವುದೇ ಗಾಯದ ಲಕ್ಷಣಗಳಿಲ್ಲ. ಸಧ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.