ಮಲಪ್ಪುರಂ(ಕೇರಳ) : ಶಬರಿಮಲೆಗೆ ತೆರಳಿ ಅಲ್ಲಿನ ಚಿಕ್ಕ ಪಂಪಾ ನದಿ ಪಾಲಾಗಿದ್ದ ಅಯ್ಯಪ್ಪ ಭಕ್ತನ ಮೃತದೇಹ ಪತ್ತೆಯಾಗಿದೆ.
ಶಬರಿಮಲೆಗೆ ತೆರಳಿದ್ದ ಅಯ್ಯಪ್ಪ ಸ್ವಾಮಿ ಭಕ್ತ ಪಂಪಾ ನದಿಯಲ್ಲಿ ಶವವಾಗಿ ಪತ್ತೆ - Ayyappa devotee body found in river
ಕರ್ನಾಟಕ ಮೂಲದ 11 ಜನ ಅಯ್ಯಪ್ಪ ಭಕ್ತರು ಸೋಮವಾರ ರಾತ್ರಿ ಪಂಪಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ಪ್ರದೀಪ್ ನೀರುಪಾಲಾಗಿದ್ದರು. ಇದೀಗ ಪ್ರದೀಪ್ ಶವವಾಗಿ ಪತ್ತೆಯಾಗಿದ್ದಾರೆ.
![ಶಬರಿಮಲೆಗೆ ತೆರಳಿದ್ದ ಅಯ್ಯಪ್ಪ ಸ್ವಾಮಿ ಭಕ್ತ ಪಂಪಾ ನದಿಯಲ್ಲಿ ಶವವಾಗಿ ಪತ್ತೆ Ayyappa devotee body found in mini pamba](https://etvbharatimages.akamaized.net/etvbharat/prod-images/768-512-5477573-thumbnail-3x2-hrs.jpg)
ಮೃತನನ್ನು ಪ್ರದೀಪ್ ಎಂದು ಗುರುತಿಸಲಾಗಿದೆ. ಕರ್ನಾಟಕ ಮೂಲದ 11 ಜನ ಅಯ್ಯಪ್ಪ ಭಕ್ತರು ಸೋಮವಾರ ರಾತ್ರಿ ಪಂಪಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ಪ್ರದೀಪ್ ನೀರುಪಾಲಾಗಿದ್ದರು. ಇದೀಗ ಪ್ರದೀಪ್ ಶವವಾಗಿ ಪತ್ತೆಯಾಗಿದ್ದಾರೆ.
ಪೊನ್ನಾನಿಯಲ್ಲಿ ತಾವು ತಂಗಿದ್ದ ಹೋಟೆಲ್ ಸಮೀಪವೇ ಇರುವ ಚಿಕ್ಕ ನದಿಯಲ್ಲಿ ಸ್ನಾನಕ್ಕೆ ಹೋದಾಗ ಈ ದುರ್ಘಟನೆ ಸಂಭವಿಸಿದೆ. ಅಗ್ನಿಶಾಮ ಸಿಬ್ಬಂದಿ ಮತ್ತು ಸ್ಥಳೀಯರು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ನದಿಯಿಂದ ಹೊರತೆಗೆದಿದ್ದಾರೆ. ಮೃತದೇಹವನ್ನು ಪೊನ್ನಾನಿ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಇನ್ನು, ಪ್ರದೀಪ್ ಯಾವ ಊರಿನವರು, ಯಾರೊಂದಿಗೆ, ಎಷ್ಟು ದಿನಗಳ ಹಿಂದೆ ಶಬರಿಮಲೆಗೆ ತೆರಳಿದ್ದರು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.