ಪಣಜಿ: ಬೆಂಗಳೂರು ಮೂಲದ ಆಸ್ಪತ್ರೆಯೊಂದು ಆಯುರ್ವೇದ ಮತ್ತು ಹೋಮಿಯೋಪತಿ ಚಿಕಿತ್ಸೆಯ ಮೂಲಕ ಬ್ರಿಟನ್ ರಾಜಕುಮಾರ ಚಾರ್ಲ್ಸ್‌ಗೆ ತಗುಲಿದ್ದ ಕೋವಿಡ್ -19 ಸೋಂಕನ್ನು ಗುಣಪಡಿಸಿದೆ ಎಂದು ಕೇಂದ್ರ ಆಯುಷ್ ಇಲಾಖೆ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ಹೇಳಿದ್ದಾರೆ.
ಆಯುರ್ವೇದ, ಹೋಮಿಯೋಪತಿಯಿಂದ ಕೊರೊನಾ ಮುಕ್ತರಾದ ಬ್ರಿಟನ್ ರಾಜಕುಮಾರ ಚಾರ್ಲ್ಸ್, ಪ್ರಾಣ ಉಳಿಸಿದ ಬೆಂಗಳೂರು ಆಸ್ಪತ್ರೆ
ಬೆಂಗಳೂರು ಮೂಲದ ಆರ್ಯುವೇದ ಆಸ್ಪತ್ರೆಯೊಂದು ಬ್ರಿಟನ್ ರಾಜಕುಮಾರ ಚಾರ್ಲ್ಸ್ ಅವರಿಗೆ ತಗುಲಿದ್ದ ಕೋವಿಡ್ ಸೋಂಕನ್ನು ಗುಣಪಡಿಸಿದೆ ಎಂದು ಕೇಂದ್ರ ಆಯುಷ್ ಇಲಾಖೆ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸೌಖ್ಯ ಆಯುರ್ವೇದ ರೆಸಾರ್ಟ್ ನಡೆಸುತ್ತಿರುವ ಡಾ. (ಐಸಾಕ್) ಮಥೈ ಅವರು ನನಗೆ ಕರೆ ಮಾಡಿ, ಆಯುರ್ವೇದ ಮತ್ತು ಹೋಮಿಯೋಪತಿ ಮೂಲಕ ಚಾರ್ಲ್ಸ್ ಅವರ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ ಎಂದು ಶ್ರೀಪಾದ್ ನಾಯ್ಕ್ ಹೇಳಿದರು.
ಆಯುಷ್ ಇಲಾಖೆಯಿಂದ ವಿಶೇಷ ಕಾರ್ಯಪಡೆ ರಚಿಸಿ ಡಾ.ಮಥೈ ಅವರು ಬ್ರಿಟನ್ ರಾಜಕುಮಾರ ಚಾರ್ಲ್ಸ್ ಅವರಿಗೆ ಚಿಕಿತ್ಸೆ ನೀಡಲು ಬಳಸಿದ ಆರ್ಯುವೇದ ಚಿಕಿತ್ಸಾ ವಿಧಾನದ ಬಗ್ಗೆ ಅಧ್ಯಯನ ಮಾಡುತ್ತೇವೆ. ಹೀಗಾಗಿ ಚಿಕಿತ್ಸೆಯ ವರದಿಯನ್ನು ಸಲ್ಲಿಸುವಂತೆ ಡಾ.ಮಥೈ ಅವರಿಗೆ ತಿಳಿಸಲಾಗಿದೆ ಎಂದು ಸಚಿವರು ತಿಳಿಸಿದರು. ಪ್ರಿನ್ಸ್ ಚಾರ್ಲ್ಸ್‌ಗೆ ಕಳೆದ ತಿಂಗಳು ಕೊರೊನಾ ವೈರಸ್ ತಗುಲಿತ್ತು ಈಗ ಅವರು ಅದರಿಂದ ಮುಕ್ತರಾಗಿದ್ದಾರೆ.