ಕರ್ನಾಟಕ

karnataka

ETV Bharat / bharat

ಶನಿವಾರವೇ ಏಕೆ ಅಯೋಧ್ಯೆ ತೀರ್ಪು ಹೊರಬೀಳುತ್ತಿದೆ..? ಇಲ್ಲಿದೆ ಕುತೂಹಲಭರಿತ ಸಂಗತಿ..!

ಅಯೋಧ್ಯೆಯಲ್ಲಿ 2.77 ಎಕರೆ ವಿವಾದಿತ ಭೂಮಿ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರಾ ಹಾಗೂ ರಾಮ್ ಲಲ್ಲಾ ನಡುವೆ ಸಮಾನವಾಗಿ ಹಂಚಿಕೆ ಮಾಡಲು ಅಲಹಬಾದ್ ಹೈಕೋರ್ಟ್ ಆದೇಶಿಸಿತ್ತು. ಈ ತೀರ್ಪು ಪ್ರಶ್ನಿಸಿ ಇವರೆಲ್ಲ ಸುಪ್ರೀಂಕೋರ್ಟ್​​ಗೆ ಹೋಗಿದ್ದವು. ಆ ಬಳಿಕ ವಿವಾದ ಬಗೆಹರಿಸಲು ನ್ಯಾಯಾಂಗೇತರ ಸಮಿತಿಯನ್ನು ಸುಪ್ರೀಂಕೋರ್ಟ್​ ರಚನೆ ಮಾಡಿತ್ತು. ಆದರೆ, ಅದು ಒಮ್ಮತದ ಪರಿಹಾರ ಕಂಡು ಹಿಡಿಯಲು ಸಾಧ್ಯವಾಗದೇ ಇರುವುದರಿಂದ ಆಗಸ್ಟ್ 6ರಿಂದ ಸುಪ್ರೀಂಕೋರ್ಟ್​ ನಿತ್ಯ ವಿಚಾರಣೆ ನಡೆಸಿ 40 ದಿನಗಳ ಬಳಿಕ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠ ಇಂದು ತೀರ್ಪು ನೀಡಲಿದೆ.

ಅಯೋಧ್ಯೆ

By

Published : Nov 9, 2019, 10:00 AM IST

Updated : Nov 9, 2019, 10:38 AM IST

ನವದೆಹಲಿ: ಅಯ್ಯೋಧ್ಯೆಯಲ್ಲಿನ ರಾಮ ಜನ್ಮಭೂಮಿ- ಬಾಬರಿ ಮಸೀದಿ ಸಂಬಂಧಿಸಿದ ಬಹುಕಾಲದ ವಿವಾದದ ತೀರ್ಪನ್ನು ಸುಪ್ರೀಂಕೋರ್ಟ್​ ಶನಿವಾರ ಬೆಳಗ್ಗೆ 10.30ಕ್ಕೆ ಪ್ರಕಟಿಸಲಿದೆ.

ಅಯೋಧ್ಯೆಯಲ್ಲಿ 2.77 ಎಕರೆ ವಿವಾದಿತ ಭೂಮಿ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರಾ ಹಾಗೂ ರಾಮ್ ಲಲ್ಲಾ ನಡುವೆ ಸಮಾನವಾಗಿ ಹಂಚಿಕೆ ಮಾಡಲು ಅಲಹಬಾದ್ ಹೈಕೋರ್ಟ್ ಆದೇಶಿಸಿತ್ತು. ಆಗಸ್ಟ್ 6ರಿಂದ ಸುಪ್ರೀಂಕೋರ್ಟ್​ ನಿತ್ಯ ವಿಚಾರಣೆ ನಡೆಸಿ 40 ದಿನಗಳ ಬಳಿಕ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠ ಇಂದು ತೀರ್ಪು ನೀಡಲಿದೆ.

ನ್ಯಾಯಮೂರ್ತಿ ಗೊಗೊಯ್ ಅವರು ನವೆಂಬರ್ 17ರಂದು ನಿವೃತ್ತರಾಗಲಿದ್ದಾರೆ. ನ್ಯಾಯಾಲಯವು ಯಾವುದೇ ದಿನ ವಿಚಾರಣೆ ನಡೆಸಬಹುದು, ಪ್ರಕರಣವನ್ನು ಆಲಿಸಬಹುದು ಮತ್ತು ಅವುಗಳಿಗೆ ಸಂಬಂಧಿಸಿದ ತೀರ್ಪು ಸಹ ನೀಡಬಹುದು. ಆದರೆ, ಪ್ರಮುಖವಾದ ಪ್ರಕರಣದ ತೀರ್ಪನ್ನು ರಜಾ ದಿನಗಳಲ್ಲಿ ಘೋಷಿಸಲು ಆಗುವುದಿಲ್ಲ.

ನ್ಯಾಯಾಧೀಶರು ನಿವೃತ್ತರಾಗುವ ಒಂದು ದಿನ ಮೊದಲು ಸಹ ನ್ಯಾಯಾಲಯದ ತೀರ್ಪುಗಳನ್ನು ನೀಡುವಂತಿಲ್ಲ. ಹೀಗಾಗಿ, ನವೆಂಬರ್ 16 ಕೂಡ ಶನಿವಾರ ಬಂದಿದೆ. ಇದಲ್ಲದೇ ನ್ಯಾಯಮೂರ್ತಿ ಗೊಗೊಯ್ ಅವರ ಕೊನೆಯ ಕೆಲಸದ ದಿನ ನವೆಂಬರ್ 15 ಆಗಿದ್ದು, ಅಯೋಧ್ಯೆ ಪ್ರಕರಣದ ತೀರ್ಪನ್ನು ನವೆಂಬರ್ 14 ಅಥವಾ ನವೆಂಬರ್ 15ರಂದು ನ್ಯಾಯಮೂರ್ತಿ ಗೊಗೊಯಿ ನೇತೃತ್ವದ ನ್ಯಾಯಪೀಠದಿಂದ ವಿಚಾರಣೆಗೆ ಒಳಪಡಿಸಬಹುದು ಎಂದು ವಿಶ್ವಾಸವಿದೆ.

ಸಾಮಾನ್ಯವಾಗಿ ನ್ಯಾಯಾಲಯವು ತೀರ್ಪನ್ನು ಪ್ರಕಟಿಸಿದರೆ, ಮರುದಿನ ಫಿರ್ಯಾದಿ ಅಥವಾ ಪ್ರತಿವಾದಿಗಳಲ್ಲಿ ಒಬ್ಬರು ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ನ್ಯಾಯಾಲಯವನ್ನು ಕೋರುತ್ತಾರೆ. ಈ ಪ್ರಕ್ರಿಯೆಯು ಒಂದು ಅಥವಾ ಎರಡು ದಿನ ತೆಗೆದುಕೊಳ್ಳಬಹುದು.

ಅಯೋಧ್ಯೆ ಪ್ರಕರಣದ ತೀರ್ಪು ನವೆಂಬರ್ 14-15ರ ಮೊದಲು ಬರಬಹುದು ಎಂದು ನ್ಯಾಯಾಲಯ ಆಗಲಿ ಅಥವಾ ಸರ್ಕಾರ ಈ ಹಿಂದೆ ಸೂಚಿಸಿರಲಿಲ್ಲ. ಇದ್ದಕ್ಕಿದ್ದಂತೆ ಶುಕ್ರವಾರ ರಾತ್ರಿ ಅಯೋಧ್ಯೆ ಪ್ರಕರಣದ ತೀರ್ಪನ್ನು ಶನಿವಾರ ಬೆಳಿಗ್ಗೆ 10.30ಕ್ಕೆ ಪ್ರಕಟಿಸಲಾಗುವುದು ಎಂದು ಘೋಷಿಸಲಾಯಿತು.

ಈ ಹಠಾತ್ ನಿರ್ಧಾರ ಸಾಮಾಜಿಕ ವಿರೋಧಿ ಶಕ್ತಿಗಳನ್ನು ಹತ್ತೋಟ್ಟಿಯಲ್ಲಿ ಇಟ್ಟುಕೊಳ್ಳವ ಕಾರ್ಯತಂತ್ರದ ಭಾಗವಾಗಿದೆ. ಯಾವುದೇ ರೀತಿಯ ಪಿತೂರಿಗೆ ಇಲ್ಲಿ ಅವಕಾಶ ನೀಡದಿರುವುದು. ಧಾರ್ಮಿಕ ಸೂಕ್ಷ್ಮ ಭಾವನೆಗಳ ಮೇಲೆ ನಿಗಾ ಇರಿಸಲಾಗುತ್ತಿದೆ.

Last Updated : Nov 9, 2019, 10:38 AM IST

ABOUT THE AUTHOR

...view details