ಐತಿಹಾಸಿಕ ಅಯೋಧ್ಯೆ ತೀರ್ಪು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಮುಸ್ಲಿಮರಿಗೆ ಪರ್ಯಾಯ 5 ಎಕರೆ ಭೂಮಿ - ಬಾಬರಿ ಮಸೀದಿ ಕೇಸ್
09:41 November 09
ನವದೆಹಲಿ: ಅಯೋಧ್ಯೆಯಲ್ಲಿನ ರಾಮ ಜನ್ಮಭೂಮಿ- ಬಾಬರಿ ಮಸೀದಿ ಸಂಬಂಧಿಸಿದ ಶತಮಾನದಷ್ಟು ಹಳೆಯದಾದ ವಿವಾದಿತ ತೀರ್ಪನ್ನು ಸುಪ್ರೀಂಕೋರ್ಟ್ ಶನಿವಾರ ನೀಡಿತು.
ಅಯೋಧ್ಯೆಯಲ್ಲಿನ 2.77 ಎಕರೆ ವಿವಾದಿತ ಭೂಮಿ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರಾ ಹಾಗೂ ರಾಮ್ ಲಲ್ಲಾ ನಡುವೆ ಸಮಾನವಾಗಿ ಹಂಚಿಕೆ ಮಾಡಲು ಅಲಹಬಾದ್ ಹೈಕೋರ್ಟ್ ಆದೇಶಿಸಿತ್ತು. ಆಗಸ್ಟ್ 6ರಿಂದ ಸುಪ್ರೀಂಕೋರ್ಟ್ ನಿತ್ಯ ವಿಚಾರಣೆ ನಡೆಸಿ 40 ದಿನಗಳ ಬಳಿಕ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠವು ಇಂದು ತನ್ನ ಐತಿಹಾಸಿಕ ತೀರ್ಪುನ್ನು ಪ್ರಕಟಿಸಿದೆ.
- ಸುಪ್ರೀಂಕೋರ್ಟ್ನ ತೀರ್ಪು ಹೊರಬಿದ್ದಿದೆ. ನಾವು ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡಲಿದ್ದೇವೆ. ಈ ತೀರ್ಪು ಕೇವಲ ಮಂದಿರ ನಿರ್ಮಾಣಕ್ಕೆ ಬಾಗಿಲೆ ತೆರದಿಲ್ಲ. ಜೊತೆಗೆ ಇದನ್ನು ರಾಜಕೀಯಗೊಳಿಸಿದ ಬಿಜೆಪಿ ಬಾಗಿಲು ಮುಚ್ಚಿದಂತಾಗಿದೆ- ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲ
- ನ್ಯಾಯಾಲಯದ ತೀರ್ಪ ಬಗ್ಗೆ ನಮಗೆ ಗೌರವಿದೆ. ಆದರೆ ತೀರ್ಪು ನಮಗೆ ತೃಪ್ತಿಕರವಾಗಿಲ್ಲ. ನಮ್ಮ ಸಮಿತಿ ಒಪ್ಪಿದರೆ ನಾವು ಪರಿಶೀಲನಾ ಅರ್ಜಿಯನ್ನು ಸಲ್ಲಿಸುತ್ತೇವೆ. ಇದು ನಮ್ಮ ಹಕ್ಕು ಮತ್ತು ಇದು ಸುಪ್ರೀಂ ಕೋರ್ಟ್ನ ನಿಯಮಗಳಲ್ಲೂ ಇದೆ- ಸುನ್ನಿ ವಕ್ಫ್ ಮಂಡಳಿ ಪರ ವಕೀಲ ಜಾಫರ್ಯಾಬ್ ಜಿಲಾನಿ
- ದಶಕದಷ್ಟು ಹಳೆಯದಾದ ವಿವಾದ ಇಂದು ಅಂತ್ಯವಾಗಿದೆ. ಶಾಂತಿ ಮತ್ತು ಸಹಿಷ್ಣುತೆ ಕಾಪಾಡಬೇಕು ಎಂದು ನಾನು ಜನರಲ್ಲಿ ಕೋರಿಕೊಳ್ಳುತ್ತೇನೆ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
- ನ್ಯಾಯಾಲಯದ ತೀರ್ಪನ್ನು ಎಲ್ಲರೂ ಗೌರವದಿಂದ ಸ್ವಾಗತಿಸಬೇಕು. ಇದು ಸಮಾಜದ ಸಹಿಷ್ಣುತೆಗೆ ನೆರವಾಗಲಿದೆ: ಬಿಹಾರ ಸಿಎಂ ನಿತೀಶ್ ಕುಮಾರ್
- ಪ್ರತಿಯೊಬ್ಬರು ಸುಪ್ರೀಂಕೋರ್ಟ್ ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು ಹಾಗೂ ಶಾಂತಿಯನ್ನು ಕಾಪಾಡಬೇಕು: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ
- ಅಯೋಧ್ಯ ತೀರ್ಪು ಒಂದು ಐತಿಹಾಸಿಕವಾದದ್ದು. ಜನತೆ ಶಾಂತಿ ಕಾಪಾಡುವಂತೆ ನಾನು ಮನವಿ ಮಾಡಿಕೊಳ್ಳುತ್ತೇನೆ: ರಕ್ಷಣಾ ಸಚಿಬ ರಾಜನಾಥ್ ಸಿಂಗ್
- ಮುಂದೇ ಏನ್ ಮಾಡಬೇಕು ಎಂಬುದರ ಬಗ್ಗೆ ಕೆಲ ಸಮಯದ ಬಳಿಕ ನಿರ್ಧಾರ ಮಾಡುತ್ತೇವೆ- ಸುನ್ನಿ ವಕ್ಫ್ ಬೋರ್ಡ್
- ನಾವು ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಆದರೆ ತೀರ್ಪು ಸಮಾಧಾನ ತಂದಿಲ್ಲ- ಸುನ್ನಿ ವಕ್ಫ್ ಬೋರ್ಡ್
- ಅಯೋಧ್ಯ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ಅಂತಿಮ ತೀರ್ಪಿನಿಂದ ನನಗೆ ಸಂತಸವಾಗಿದೆ. ನ್ಯಾಯಾಲಯದ ಈ ತೀರ್ಪನ್ನು ನಾನು ಗೌರವಿಸುತ್ತೇನೆ: ಸುನ್ನಿ ವಕ್ಫ್ ಮಂಡಳಿ ಪರ ಅರ್ಜಿ ಸಲ್ಲಿಸಿದ ಇಕ್ಬಲ್ ಅನ್ಸಾರಿ
- ಸುನ್ನಿ ವಕ್ಫ್ ಮಂಡಳಿಗೆ 5 ಎಕರೆ ಜಮೀನು ನೀಡಲು ಸೂಚನೆ
- ಕೇಂದ್ರ ಅಥವಾ ಉತ್ತರ ಪ್ರದೇಶ ರಾಜ್ಯ ಸರ್ಕಾರ ವಿಶೇಷ ಅಧಿಕಾರ ಬಳಸಿಕೊಂಡು ಅಯೋಧ್ಯೆಯಲ್ಲಿ ಜಮೀನು ನೀಡಬೇಕು
- ಮೂರು ತಿಂಗಳ ಒಳಗೆ ಮಂದಿರ ನಿರ್ಮಾಣದ ಟ್ರಸ್ಟ್ ರಚನೆ ಮಾಡಬೇಕು
- ವಿವಾದಿತ ಭೂಮಿ ಕೇಂದ್ರದ ಅಧೀನದಲ್ಲಿ ಇರಲಿ
- ವಿವಾದಿತ ರಚನೆಯ ಒಳ ಮತ್ತು ಹೊರ ಪ್ರಾಂಗಣವನ್ನು ಟ್ರಸ್ಟ್ಗೆ ನೀಡಬೇಕು
- ಅಲಹಬಾದ್ ಹೈಕೋರ್ಟ್ ಮೂರು ಭಾಗ ಮಾಡಿ ತೀರ್ಪು ನೀಡಿದ್ದು ತಾರ್ಕಿಕವಲ್ಲ
- ಮಸೀದಿ ಒಳಭಾಗದಲ್ಲಿ ಹಿಂದೂಗಳು ಕೂಡಾ ಪೂಜೆ ಸಲ್ಲಿಸಿದ್ದರು
- ಮಸೀದಿಯಲ್ಲಿ ಮುಸ್ಲಿಮರಿಂದ ಸತತವಾಗಿ ನಮಾಜ್ ನಡೆಯುತ್ತಲೇ ಬಂದಿದೆ
- 1856- 57ಕ್ಕೂ ಮುಂಚೆ ಹಿಂದೂಗಳು ಪೂಜೆ ಮಾಡಲು ಯಾವುದೇ ಅಭ್ಯಂತರ ಇರಲಿಲ್ಲ ಎಂಬುದಕ್ಕೆ ಸಾಕ್ಷ್ಯ ಇದೆ
- ಕಾನೂನಿನ ಸಾಕ್ಷ್ಯದ ಆಧಾರದ ಮೇಲೆ ಭೂಮಿ ಮಾಲೀಕನನ್ನ ಅಥವಾ ಹಕ್ಕನ್ನ ನಿರ್ಧರಿಸಲಾಗುತ್ತದೆ
- ಪುರಾಣಗಳಲ್ಲೂ ರಾಮ ಲಲ್ಲಾ ಉಲ್ಲೇಖ ಇದೆ
- ರಾಮನ ಇರುವಿಕೆ ನಂಬಿಕೆ ಅವರವರ ವೈಯಕ್ತಿಕ
- ವಿವಾದಿತ ಜಾಗದಲ್ಲಿ ಎರಡೂ ಸಮುದಾಯಗಳು ಅವರವರ ನಂಬಿಕೆಯಂತೆ ಪೂಜೆ ಸಲ್ಲಿಸುತ್ತಿವೆ
- ಕೇವಲ ನಂಬಿಕೆ ಇದ್ದ ಮಾತ್ರಕ್ಕೇ ಹಕ್ಕು ಸಾಬೀತು ಮಾಡಲು ಆಗಲ್ಲ
- ಕಲಾಕೃತಿಗಳು ಇಸ್ಲಾಮಿಕ್ ರಚನೆ ಆಗಿರಲಿಲ್ಲ: ಸುಪ್ರೀಂ
- ಮಂದಿರ ಒಡೆದು ಮಸೀದಿ ಕಟ್ಟಿದ ಬಗ್ಗೆ ಸಾಕ್ಷ್ಯಗಳೂ ಇಲ್ಲ
- ಹಳೆಯ ಕಟ್ಟಡದ ಅಡಿ ವಿಶಾಲವಾದ ರಚನೆಯ ಕಲಾ ಕೃತಿಗಳಿವೆ
- ಕಂದಾಯ ದಾಖಲೆ ಪ್ರಕಾರ ಸರ್ಕಾರಿ ಜಮೀನು ಆಗಿದೆ
- ಬಾಬ್ರಿ ಮಸೀದಿ ಖಾಲಿ ಸ್ಥಳದಲ್ಲಿ ನಿರ್ಮಾಣ ಆಗಿರಲಿಲ್ಲ
- ‘ಪುರಾತತ್ವ ಇಲಾಖೆ ಸಾಕ್ಷ್ಯಗಳನ್ನು ಪುರಸ್ಕರಿಸಲಾಗಿದೆ- ಸುಪ್ರೀಂ
- ನಿರ್ಮೋಹಿ ಅಖಾರ ಅರ್ಜಿಯೂ ವಜಾ
- ಸುನ್ನಿ ವಕ್ಫ್ ಮಂಡಳಿ ಅರ್ಜಿ ವಜಾ: ಇದು ಸರ್ವಾನುಮತ್ತದ ತೀರ್ಪು ನೀಡುತ್ತಿರುವ ಮುಖ್ಯನ್ಯಾಯಮೂರ್ತಿಗಳು
- ಉತ್ತರ ಪ್ರದೇಶದಾದ್ಯಂತ ಧಾರ್ಮಿಕ ಮುಖಂಡರ ಹಾಗೂ ರಾಜಕೀಯ ನಾಯಕರೊಂದಿಗೆ 10,000 ಸಭೆ ನಡೆಸಲಾಗಿದೆ: ಯುಪಿ ಡಿಜಿಪಿ ಒ.ಪಿ. ಸಿಂಗ್
- ಶ್ರೀರಾಮ್ ಲಿಲಾ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ದೇಗುಲ ಭೇಟಿಗೆ ಯಾವುದೇ ರೀತಿಯ ನಿರ್ಬಂಧ ವಿಧಿಸಿಲ್ಲ. ಇಲ್ಲಿನ ಪರಿಸ್ಥಿತಿ ಸಾಮಾನ್ಯವಾಗಿದೆ: ಸಿಂಗ್