ಕರ್ನಾಟಕ

karnataka

ETV Bharat / bharat

ಅಯೋಧ್ಯೆ ತೀರ್ಪು: ಹಿರಿಯ ಅಧಿಕಾರಿಗಳ ಜೊತೆ ಶಾ ಉನ್ನತಮಟ್ಟದ ಭದ್ರತಾ ಸಭೆ - ಉನ್ನತ ಮಟ್ಟದ ಭದ್ರತಾ ಸಭೆ ಸುದ್ದಿ

ವಿವಾದಿತ ಅಯೋಧ್ಯೆ ತೀರ್ಪುನ್ನು ಸುಪ್ರೀಂಕೋರ್ಟ್​ ಪ್ರಕಟಿಸುತ್ತಿದ್ದು, ಇದಕ್ಕೂ ಮುನ್ನ ಗೃಹ ಸಚಿವ ಅಮಿತ್​ ಶಾ ಉನ್ನತಮಟ್ಟದ ಸಭೆ ನಡೆಸಿದ್ದಾರೆ.

ಉನ್ನತ ಮಟ್ಟದ ಭದ್ರತಾ ಸಭೆ

By

Published : Nov 9, 2019, 10:57 AM IST

ಅಯೋಧ್ಯೆಯಲ್ಲಿ 2.77 ಎಕರೆ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರಾ ಹಾಗೂ ರಾಮ್ ಲಲ್ಲಾ ನಡುವೆ ಸಮಾನವಾಗಿ ಹಂಚಿಕೆ ಮಾಡಲು ಅಲಹಬಾದ್ ಹೈಕೋರ್ಟ್ ಆದೇಶಿಸಿತ್ತು. ಈ ತೀರ್ಪು ವಿರುದ್ಧ ಕೆಲವರು ಸುಪ್ರಿಂನ ಕದ ತಟ್ಟಿದ್ದರು. 2019 ಆಗಸ್ಟ್ 6ರಿಂದ ಸುಪ್ರೀಂಕೋರ್ಟ್ ದಿನನಿತ್ಯ ವಿಚಾರಣೆ ಆರಂಭ ಮಾಡಿತ್ತು. 40 ದಿನಗಳ ಕಾಲ ಕೋರ್ಟ್‌ ನಿರಂತರ ವಿಚಾರಣೆ ನಡೆಸಿ ಇಂದು ತೀರ್ಪು ಪ್ರಕಟಿಸುತ್ತಿದೆ.

ತೀರ್ಪು ಬರುವ ಮುನ್ನ ಗೃಹ ಸಚಿವ ಅಮಿತ್​ ಶಾ, ತಮ್ಮ ನಿವಾಸದಲ್ಲಿ ಉನ್ನತಮಟ್ಟದ ಭದ್ರತಾ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​, ಗುಪ್ತಚಾರ ಇಲಾಖೆ ಮುಖ್ಯಸ್ಥ ಅರವಿಂದ್​ ಕುಮಾರ್​ ಮತ್ತು ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದು, ಅಯೋಧ್ಯೆ ತೀರ್ಪು ಮತ್ತು ದೇಶದ ಭದ್ರತೆ ಸೇರಿದಂತೆ ಇನ್ನಷ್ಟು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details