ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ 6 ಲಕ್ಷ ರೂ. ಕಳೆದ ವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ಡ್ರಾ ಮಾಡಲಾಗಿತ್ತು. ಆದರೆ ಇದೀಗ ಬ್ಯಾಂಕ್ನಿಂದ ಹಣವನ್ನು ಮರುಪಾವತಿ ಮಾಡಿದ್ದಾರೆ.
ಕಳೆದ ನಾಲ್ಕು ತಿಂಗಳಲ್ಲಿ ಎರಡು ಬಾರಿ ಬ್ಯಾಂಕ್ ಖಾತೆಯಿಂದ ಹಣ ಕಳ್ಳತನವಾಗಿದ್ದು, ಮೂರನೇ ಬಾರಿ ಹಣ ಡ್ರಾ ಮಾಡಲು ಬಂದಾಗ ಖದೀಮರ ಕೃತ್ಯ ಬೆಳಕಿಗೆ ಬಂದಿದೆ.
ರಾಮಮಂದಿರ ಟ್ರಸ್ಟ್ನ ಕಾರ್ಯದರ್ಶಿ ಚಂಪತ್ ರಾಜ್ ಈ ಬಗ್ಗೆ ಹೇಳಿಕೆ ನೀಡಿದ್ದು, "ಹಣವನ್ನು ಮರುಪಾವತಿ ಮಾಡುವಂತೆ ಬ್ಯಾಂಕ್ಗೆ ಒತ್ತಾಯಿಸಲಾಗಿದ್ದು, ಇದೀಗ ಹಣ ಹಿಂತಿರುಗಿಸಿದ್ದಾರೆ" ಎಂದಿದ್ದಾರೆ.
ಇನ್ನು ಅಯೋಧ್ಯೆಯ ಎಸ್‌ಬಿಐ ಬ್ಯಾಂಕ್ನ ಮ್ಯಾನೇಜರ್ ಪ್ರಿಯಾಂಶು ಶರ್ಮಾ ಮಾತನಾಡಿ, "ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ ಖದೀಮರು ಟ್ರಸ್ಟ್ನ ಹಣವನ್ನು ಕದ್ದಿದ್ದಾರೆ. ಹೀಗಾಗಿ ಟ್ರಸ್ಟ್ಗೆ ಹಣವನ್ನು ನಾವು ಹಿಂತಿರುಗಿಸಿದ್ದು, ಆ ಹಣವನ್ನು ಪಿಎನ್ಬಿಯಿಂದ ವಸೂಲಿ ಮಾಡುತ್ತೇವೆ" ಎಂದಿದ್ದಾರೆ.
ಇದನ್ನು ಓದಿ:ರಾಮಜನ್ಮ ಭೂಮಿ ಟ್ರಸ್ಟ್‌ನಿಂದ ಅಕ್ರಮವಾಗಿ 6 ಲಕ್ಷ ರೂ. ವಿತ್ಡ್ರಾ: ಕೇಸ್ ದಾಖಲು
ಕಳೆದ ವಾರ ಲಖನೌದ ಎಸ್‌ಬಿಐ ಕ್ಲಿಯರಿಂಗ್ ಹೌಸ್‌ನಲ್ಲಿ ನಡೆದ ಮೂರನೇ ನಕಲಿ ಚೆಕ್ ಪರಿಶೀಲನೆ ವೇಳೆ ಹಗರಣ ಬೆಳಕಿಗೆ ಬಂದಿತ್ತು. 10 ದಿನಗಳ ಅವಧಿಯಲ್ಲಿ ಟ್ರಸ್ಟಿಗಳ ನಕಲಿ ಸಹಿಯೊಂದಿಗೆ ಎರಡು ಚೆಕ್‌ಗಳ ಮೂಲಕ ಹಣವನ್ನು ಡ್ರಾ ಮಾಡಲಾಗಿತ್ತು.