ಕರ್ನಾಟಕ

karnataka

ETV Bharat / bharat

ರಾಮ ಮಂದಿರ ನಿರ್ಮಾಣ ಕಾರ್ಯ ಜೂನ್.​ 10 ರಿಂದ ಆರಂಭ

ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮುಖ್ಯಸ್ಥ ಮಹಂತ್ ನೃತ್ಯ ಗೋಪಾಲ್ ದಾಸ್ ವಕ್ತಾರ ಮಹಂತ್ ಕಮಲ್ ನಯನ್ ದಾಸ್ ಮಾತನಾಡಿ, ಅಯೋಧ್ಯೆಯಲ್ಲಿ ರಾಮ್ ದೇವಾಲಯದ ನಿರ್ಮಾಣ ಕಾರ್ಯವೂ ಜೂನ್ 10 ರಿಂದ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದರು.

ರಾಮ ಮಂದಿರ ನಿರ್ಮಾಣ ಕಾರ್ಯ
ರಾಮ ಮಂದಿರ ನಿರ್ಮಾಣ ಕಾರ್ಯ

By

Published : Jun 8, 2020, 6:15 PM IST

ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಬುಧವಾರದಿಂದ ಪ್ರಾರಂಭವಾಗಲಿದ್ದು, ಅದರ ಅಡಿಪಾಯಕ್ಕಾಗಿ ಮೊದಲ ಕಲ್ಲುಗಳನ್ನು ಅಂದೇ ಹಾಕಲಾಗುವುದು ಎಂದು ದೇವಾಲಯದ ಟ್ರಸ್ಟ್ ಮುಖ್ಯಸ್ಥರ ವಕ್ತಾರರು ತಿಳಿಸಿದ್ದಾರೆ.

ಕಳೆದ ನವೆಂಬರ್‌ನಲ್ಲಿ ಸುಪ್ರೀಂಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನಲ್ಲಿ ದೇವಾಲಯ ನೀರ್ಮಾಣಕ್ಕೆ ಭೂಮಿಯನ್ನು ಹಂಚಿಕೆ ಮಾಡಲಾಗಿತ್ತು.

ಈ ಜಾಗದಲ್ಲಿರುವ ಕುಬರ್ ತಿಲಾ ದೇಗುಲದಲ್ಲಿ ಶಿವನಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಲಂಕಾ ಮೇಲೆ ದಾಳಿ ನಡೆಸುವ ಮೊದಲು ರಾಮ ಶಿವನನ್ನು ಪ್ರಾರ್ಥಿಸುವ ಸಲುವಾಗಿ ಇಲ್ಲಿ ರುದ್ರಾಭಿಷೇಕವನ್ನು ಮಾಡುತ್ತಾನೆ. ಈ ಸಂಪ್ರದಾಯವನ್ನು ಅಂದು ಅನುಸರಿಸಲಾಗುತ್ತದೆ ಎಂದು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮುಖ್ಯಸ್ಥ ಮಹಂತ್​​ ನೃತ್ಯ ಗೋಪಾಲ್ ದಾಸ್ ವಕ್ತಾರ ಮಹಂತ್ ಕಮಲ್ ನಯನ್ ದಾಸ್ ಹೇಳಿದ್ದಾರೆ. ಈ ವಿಶೇಷ ಪ್ರಾರ್ಥನೆಯ ನಂತರ ದೇವಾಲಯದ ಅಡಿಪಾಯ ಹಾಕುವ ಕೆಲಸ ಪ್ರಾರಂಭವಾಗುತ್ತದೆ.

ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿದ ಮಹಂತ್ ನೃತ್ಯ ಗೋಪಾಲ್ ದಾಸ್ ಪರವಾಗಿ ಕಮಲ್ ನಯನ್ ದಾಸ್ ಮತ್ತು ಇತರ ಪುರೋಹಿತರು ಪೂಜೆ ಸಲ್ಲಿಸಲಿದ್ದಾರೆ. ಬೆಳಗ್ಗೆ 8 ಗಂಟೆ ಸುಮಾರಿಗೆ ಪೂಜೆ ಪ್ರಾರಂಭವಾಗಲಿದೆ. "ಈ ಧಾರ್ಮಿಕ ಸಮಾರಂಭವು ಕನಿಷ್ಠ ಎರಡು ಗಂಟೆಗಳ ಕಾಲ ನಡೆಯುತ್ತದೆ ಮತ್ತು ನಂತರ ರಾಮ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗುತ್ತದೆ ಎಂದು ಕಮಲ್ ನಯನ್ ದಾಸ್ ಹೇಳಿದರು.

ABOUT THE AUTHOR

...view details