ಕರ್ನಾಟಕ

karnataka

ETV Bharat / bharat

ಭೂಮಿ ಪೂಜೆ:  ಮಧ್ಯಸ್ಥಿಕೆ ಸಮಿತಿಯಲ್ಲಿದ್ದ ಆರ್ಟ್​ ಆಫ್​ ಲಿವಿಂಗ್​ ಮುಖ್ಯಸ್ಥರಿಗಿಲ್ಲ ಆಹ್ವಾನ! - ರವಿಶಂಕರ್ ಗುರೂಜಿ

ಅಯೋಧ್ಯಾ ರಾಮಮಂದಿರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ರಚಿಸಿದ ಮಧ್ಯಸ್ಥಿಕೆ ಸಮಿತಿಯಲ್ಲಿದ್ದ ರವಿಶಂಕರ್ ಗುರೂಜಿ ಅವರನ್ನು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಆರ್ಟ್​ ಆಫ್​ ಲಿವಿಂಗ್​ ಸ್ಪಷ್ಟಪಡಿಸಿದೆ.

Sri Sri Ravi Shankar
ರವಿಶಂಕರ್ ಗುರೂಜಿ

By

Published : Aug 5, 2020, 11:20 AM IST

ನವದೆಹಲಿ: ಶ್ರೀ ಶ್ರೀ ರವಿಶಂಕರ ಗುರೂಜಿಯನ್ನು ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ಸಮಾರಂಭಕ್ಕೆ ಆಹ್ವಾನಿಸಿಲ್ಲ ಎಂದು ಆರ್ಟ್​ ಆಫ್​ ಲಿವಿಂಗ್​​​​ ಫೌಂಡೇಷನ್​ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಅಯೋಧ್ಯಾದ ರಾಮ ದೇವಾಲಯದ ಶಿಲಾನ್ಯಾಸ ಸಮಾರಂಭ ಇಂದು ನಡೆಯುತ್ತಿದ್ದು, ಸಮಾರಂಭದ ನಂತರ ಶ್ರೀರಾಮ ದೇವಾಲಯದ ನಿರ್ಮಾಣ ಪ್ರಾರಂಭವಾಗಲಿದ್ದು, ಇದರಲ್ಲಿ ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿರುವ ಸ್ಥಳವನ್ನು ಹಸ್ತಾಂತರಿಸುವಂತೆ ಸುಪ್ರೀಂಕೋರ್ಟ್ ಕಳೆದ ವರ್ಷ ನವೆಂಬರ್ 9ರಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆರ್ಟ್ ಆಫ್​ ಲಿವಿಂಗ್​ನ ಶ್ರೀ ಶ್ರೀ ರವಿಶಂಕರ್ ಸುಪ್ರೀಂಕೋರ್ಟ್ ನೇಮಿಸಿದ ಮಧ್ಯಸ್ಥಿಕೆ ಸಮಿತಿಯ ಭಾಗವಾಗಿದ್ದರು.

ಮಧ್ಯಸ್ಥಿಕೆ ಸಮಿತಿ ಸಂಧಾನ ವಿಫಲವಾದ ನಂತರ ಸುಪ್ರೀಂಕೋರ್ಟ್​ನ ವಿಶೇಷ ನ್ಯಾಯಪೀಠ ಅಯೋಧ್ಯೆಗೆ ಸಂಬಂಧಿಸಿದ ವಿಚಾರಣೆಗಳನ್ನು ನಡೆಸಿ ಫೆಬ್ರವರಿ 5ರಂದು ರಾಮಂದಿರ ನಿರ್ಮಾಣದ ಪರವಾಗಿ ತೀರ್ಪು ನೀಡಲಾಗಿತ್ತು.

ಇದಾದ ನಂತರದಲ್ಲಿ ಶ್ರೀ ರಾಮ್ ಜನಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಚನೆಯಾಗಿ ರಾಮಮಂದಿರ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದೆ. ಈ ಸಮಿತಿ, ಆರ್ಟ್​ ಆಫ್​ ಲಿವಿಂಗ್​ನ ರವಿಶಂಕರ್ ಗುರೂಜಿಯನ್ನು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ತಿಳಿದು ಬಂದಿದೆ.

ABOUT THE AUTHOR

...view details