ಕರ್ನಾಟಕ

karnataka

ETV Bharat / bharat

ಅಯೋಧ್ಯಾ ಭೂ ವಿವಾದ : ಜು.18ರೊಳಗೆ ವರದಿ ಸಲ್ಲಿಸುವಂತೆ ಸಂಧಾನ ಸಮಿತಿಗೆ ಸುಪ್ರೀಂ ಸೂಚನೆ - ಅಯೋಧ್ಯ ಭೂ ವಿವಾದ, ಸುಪ್ರೀಂ ಆದೇಶ, ಸಂಧಾನ ಸಮಿತಿ ವರದಿ , ಜುಲೈ 18ಕ್ಕೆ ವರದಿ ಸಲ್ಲಿಸಲು ಸೂಚನೆ, ಸುಪ್ರೀಂ ಸೂಚನೆ,

ಜುಲೈ 18ರೊಳಗೆ ಸಂಧಾನ ಪ್ರಗತಿಯ ವರದಿಯನ್ನು ಸಲ್ಲಿಸಬೇಕು. ಸಂಧಾನ ಪ್ರಕ್ರಿಯೆಯನ್ನು ಗೌಪ್ಯವಾಗಿ ನಡೆಸಬೇಕು ಎಂದು ಅಯೋಧ್ಯೆ ಭೂ ವಿವಾದದ ಸಂಧಾನ ಸಮಿತಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಸಂಧಾನ ಸಮಿತಿಯ ವರದಿ ಬರುವವರೆಗೆ ಕಾಯುವಂತೆ ಅರ್ಜಿದಾರ ಗೋಪಾಲ್ ಸಿಂಗ್ ಗೆ ಸುಪ್ರೀಂ ಕೋರ್ಟ್​​​ ಹೇಳಿದೆ.

ವರದಿ ಸಲ್ಲಿಸವರದಿ ಸಲ್ಲಿಸಲು ಸಂಧಾನ ಸಮಿತಿಗೆ ಸುಪ್ರೀಂ ಸೂಚನೆಲು ಸಂಧಾನ ಸಮಿತಿಗೆ ಸುಪ್ರೀಂ ವರದಿ

By

Published : Jul 11, 2019, 1:58 PM IST

ನವದೆಹಲಿ: ಅಯೋಧ್ಯಾ ರಾಮಜನ್ಮ ಭೂಮಿ- ಬಾಬರಿ ಮಸೀದಿ ಭೂ ವಿವಾದ ಬಗೆಹರಿಸಲು ರಚಿಸಿರುವ ಸಂಧಾನ ಸಮಿತಿ ವರದಿಯನ್ನು ಜುಲೈ 18 ರೊಳಗೆ ಸಲ್ಲಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ವಿಚಾರಣೆಯನ್ನು ಜುಲೈ 25ಕ್ಕೆ ಮುಂದೂಡಿದೆ.

ಭೂ ವಿವಾದ ಬಗೆಹರಿಸಲು ಸುಪ್ರೀಂಕೋರ್ಟ್ ರಚಿಸಿದ ಸಂಧಾನ ಸಮಿತಿ ಯಾವುದೇ ಪ್ರಗತಿ ಸಾಧಿಸಿಲ್ಲ, ಎಂದು ಮೂಲ ಅರ್ಜಿದಾರರಲ್ಲಿ ಒಬ್ಬರಾದ ಗೋಪಾಲ್ ಸಿಂಗ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ನ್ಯಾಯಾಲಯ ಸಂಧಾನ ಸಮಿತಿಯ ವರದಿ ಬರುವವರೆಗೆ ಕಾದು ನೊಡುವಂತೆ ತಿಳಿಸಿದ್ದು, ಜುಲೈ 18ರ ಮುಂಚಿತವಾಗಿ ಸಂಧಾನ ಪ್ರಗತಿಯ ವರದಿ ಸಲ್ಲಿಸುವಂತೆ ಸಮಿತಿಗೆ ಆದೇಶ ನೀಡಿದೆ.

ಭೂ ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸುವ ಸಲುವಾಗಿ ನ್ಯಾಯಾಲಯವು ಮಾರ್ಚ್ 8ರಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಫಕೀರ್​ ಮೊಹಮ್ಮದ್ ಇಬ್ರಾಹಿಂ ಕಲಿಫುಲ್ಲಾ ಅವರ ಅಧ್ಯಕ್ಷತೆಯಲ್ಲಿ ಮೂರು ಜನರ ಮಧ್ಯಸ್ಥಿಕೆ ಸಮಿತಿಯನ್ನು ರಚಿಸಿತ್ತು. ಸಮಿತಿಯಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಮತ್ತು ಮದ್ರಾಸ್ ಹೈಕೋರ್ಟ್​​​ನ ಹಿರಿಯ ವಕೀಲ ಶ್ರೀರಾಮ್ ಪಂಚು ಅವರನ್ನು ಸದಸ್ಯರಾಗಿ ಆಯ್ಕೆ ಮಾಡಲಾಗಿತ್ತು.

ವಿವಾದವನ್ನು ಸೌಹಾರ್ಧಯುತವಾಗಿ ಬಗೆಹರಿಸುವ ಸಲುವಾಗಿ ಸಂಧಾನ ಪ್ರಕ್ರಿಯೆಯನ್ನು "ಅತ್ಯಂತ ಗೌಪ್ಯತೆಯಿಂದ" ನಡೆಸಬೇಕು ಎಂದು ಸಮಿತಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.

ವಿವಾದಕ್ಕೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳಲು ಆಗಸ್ಟ್ 15 ರವರೆಗೆ ಸಮಿತಿಗೆ ಸುಪ್ರೀಂಕೋರ್ಟ್ ಸಮಯ ನೀಡಿದೆ.

For All Latest Updates

TAGGED:

ABOUT THE AUTHOR

...view details