ಕರ್ನಾಟಕ

karnataka

ETV Bharat / bharat

ಅಯೋಧ್ಯ ಭೂ ವಿವಾದ ವಿಚಾರಣೆ ನೇರ ಪ್ರಸಾರ:  ಈ​ ಬಗ್ಗೆ ಸುಪ್ರೀಂ ಹೇಳಿದ್ದಿಷ್ಟು! - ಅಯೋಧ್ಯ ಭೂ ವಿವಾದ ಸುದ್ದಿ,

ಆಗಸ್ಟ್​ 6ರಿಂದ ಅಯೋಧ್ಯ ಭೂ ವಿವಾದದ ವಾದ - ಪ್ರತಿವಾದ ಸುಪ್ರೀಂಕೋರ್ಟ್​​​ನಲ್ಲಿ ದಿನವೂ ವಿಚಾರಣೆ ನಡೆದಿದೆ. ಈ ಬಗ್ಗೆ ಲೈವ್​ ಸ್ಟ್ರೀಮಿಂಗ್​ ಅರ್ಜಿ ಕೈಗೆತ್ತಿಕೊಂಡಿದ್ದ ಐದು ಸದಸ್ಯರ ಪೀಠ ಈ ಸಂಬಂಧ ಅದು ರಿಜಿಸ್ಟ್ರಿ ಅವರ ಪ್ರತಿಕ್ರಿಯೆ ಕೇಳಿದೆ.

ಅಯೋಧ್ಯ ಭೂ ವಿವಾದ

By

Published : Sep 16, 2019, 2:56 PM IST

Updated : Sep 16, 2019, 3:04 PM IST

ನವದೆಹಲಿ:ಅಯೋಧ್ಯೆ ವಿವಾದದ ವಿಚಾರಣೆಯನ್ನು ನೇರ ಪ್ರಸಾರ ಮಾಡಲು ಕೆ.ಎನ್​ ಗೋವಿಂದಾಚಾರ್ಯ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳಿಗೆ ಸುದೀರ್ಘ ಪತ್ರ ಬರೆದಿದ್ದರು. ಈ ಸಂಬಂಧ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ತ್ರಿ ಸದಸ್ಯಪೀಠ ಈ ಸಂಬಂಧ ಸುಪ್ರೀಂಕೋರ್ಟ್ ರಿಜಿಸ್ಟ್ರಿಯ ಪ್ರತಿಕ್ರಿಯ ಕೇಳಿದೆ.

ಹಿರಿಯ ವಕೀಲ ವಿಕಾಸ್​ ಸಿಂಗ್​ ಅರ್ಜಿದಾರರ ಕೆ .ಎನ್​ ಗೋವಿಂದಾಚಾರ್ಯ ಅವರ ಪರವಾಗಿ ಕೋರ್ಟ್​ಗೆ ಹಾಜರಾಗಿ, ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯಿ, ಎಸ್​ಎ ಬೊಬ್ಡೆ, ಎಸ್​ ನಜೀರ್​ ಅಬ್ದುಲ್​​ ಪೀಠದ ಎದುರು ತಮ್ಮ ವಾದ ಮಂಡನೆ ಮಾಡಿದರು. ಸದ್ಯ ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ನಲ್ಲಿ ನಡೆಯುತ್ತಿರುವ ವಿಚಾರಣೆ ಪ್ರಕ್ರಿಯೆಗಳನ್ನ ಬಹಳಷ್ಟು ಜನರಿಗೆ ನೇರವಾಗಿ ಭಾಗವಹಿಸಲು ಆಗುವುದಿಲ್ಲ ಎಂದರು.

ಹಲವು ಜನರಿಗೆ ಕೋರ್ಟ್​​​ ರೂಮ್​ಗೆ ಎಂಟ್ರಿ ಕೊಡಲೂ ಸಹ ಅನುಮತಿ ಇರುವುದಿಲ್ಲ. ಹೀಗಾಗಿ ಘನ ನ್ಯಾಯಾಲಯ ಪ್ರಕರಣದ ತೀವ್ರತೆ ಹಾಗೂ ಇದು ರಾಷ್ಟ್ರದ ಬಹುಸಂಖ್ಯಾತರ ಗಮನ ಸೆಳೆದಿರುವ ಪ್ರಕರಣ ಆಗಿರುವ ಹಿನ್ನೆಲೆಯಲ್ಲಿ ಒಪನ್​ ಕೋರ್ಟ್​ ವಿಚಾರಣೆ( ತೆರೆದ) ನಡೆಸಬೇಕು ಎಂದು ವಾದ ಮಂಡನೆ ಮಾಡಿದರು.

ಒಂದೊಮ್ಮೆ ಲೈವ್​ ಸ್ಟ್ರೀಮಿಂಗ್​ (ನೇರ ಪ್ರಸಾರ) ಸಾಧ್ಯವಾಗದಿದ್ದರೆ, ವಿಚಾರಣೆ ಆರಂಭವಾಗುತ್ತಿದ್ದಂತೆ ರೆಕಾರ್ಡಿಂಗ್​ ಅನ್ನಾದರೂ ಮಾಡಿ ಎಂದು ಪೀಠದ ಮುಂದೆ ಮನವಿ ಮಾಡಿದರು. ವಿಕಾಸ್​ ಸಿಂಗ್​ ಮನವಿ ಆಲಿಸಿದ ಮೂವರು ಸದಸ್ಯರ ಪೀಠ, ಈ ಸಂಬಂಧ ರಿಜಿಸ್ಟ್ರಿಯಿಂದ ವರದಿ ಕೇಳುವುದಾಗಿ ಹೇಳಿತು. ಅದರ ಪ್ರತಿಕ್ರಿಯೆ ಪಡೆಯಲು ತೀರ್ಮಾನಿಸಿತು.

ಆರ್​ಎಸ್​ಎಸ್​​ನ ಮಾಜಿ ಪ್ರಚಾರಕ ಹಾಗೂ ಚಿಂತಕ ಕೆ ಎನ್​ ಗೋವಿಂದಾಚಾರ್ಯ ಈ ಬಗ್ಗೆ ಕಳೆದ ತಿಂಗಳು ಸುಪ್ರೀಂಕೋರ್ಟ್​ಗೆ ಫಿಟಿಷನ್​ ಒಂದನ್ನು ಸಲ್ಲಿಸಿ ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ ಮಾಡಿದ್ದರು. ಈ ಸಂಬಂಧ ಗೋವಿಂದಾಚಾರ್ಯ ಸಿಜೆಐಗೆ ಪತ್ರವನ್ನೂ ಬರೆದಿದ್ದರು.

Last Updated : Sep 16, 2019, 3:04 PM IST

ABOUT THE AUTHOR

...view details