ನವದೆಹಲಿ: 26ನೇ ದಿನವೂ ಅಯೋಧ್ಯಾ ಭೂ ವಿವಾದ ವಿಚಾರಣೆ ಸುಪ್ರೀಂಕೋರ್ಟ್ ಪಂಚ ಸದಸ್ಯಪೀಠದಲ್ಲಿ ಮುಂದುವರಿದಿದೆ. ಪ್ರಕರಣದ ವಿಚಾರಣೆ ಮುಗಿಸಲು ಅಕ್ಟೋಬರ್ 18ರ ವರೆಗೂ ಆಗಬಹುದು. ಅಲ್ಲಿವರೆಗೂ ಎಲ್ಲ ವಾದ- ಪ್ರತಿವಾದಗಳು ಮುಗಿಯಬಹುದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹೇಳಿದ್ದಾರೆ.
ಸಂಧಾನ ಈಗ ಸಾಧ್ಯವೇ? ನವೆಂಬರ್ನಲ್ಲಿ ಹೊರ ಬರುತ್ತಾ ಅಯೋಧ್ಯಾ ತೀರ್ಪು - ಅಯೋಧ್ಯಾ- ಬಾಬ್ರಿ ಮಸೀದಿ ವಿವಾದ
ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸಂಧಾನದ ಮೂಲಕ ಸೌಹಾರ್ದಯುತ ಇತ್ಯರ್ಥಕ್ಕೆ ಬಂದರೆ ಆ ನಿರ್ಧಾರವನ್ನ ಸುಪ್ರೀಂಕೋರ್ಟ್ ಮುಂದೆ ಮಂಡಿಸಬಹುದು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್
ಈ ನಡುವೆ ಸಂಧಾನಕ್ಕೆ ಅವಕಾಶ ಕಲ್ಪಿಸುವಂತೆ ಕೋರಿ ಸಲ್ಲಿಕೆ ಮಾಡಿರುವ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ ಮುಖ್ಯ ನ್ಯಾಯಮೂರ್ತಿಗಳು. "ಏಕಕಾಲದಲ್ಲಿಯೇ ವಿಚಾರಣೆ ಹಾಗೂ ಮಧ್ಯಸ್ಥಿಕೆ ಪ್ರಕ್ರಿಯೆಯೂ ನಡೆಯಬಹುದು. ಸಂಧಾನದ ಮೂಲಕ ಸೌಹಾರ್ದಯುತ ಇತ್ಯರ್ಥಕ್ಕೆ ಬಂದರೆ ಆ ನಿರ್ಧಾರವನ್ನ ಸುಪ್ರೀಂಕೋರ್ಟ್ ಮುಂದೆ ಮಂಡಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ 26 ದಿನಗಳಿಂದ ನಿತ್ಯ ಅಯೋಧ್ಯಾ- ಬಾಬ್ರಿ ಮಸೀದಿ ವಿವಾದದ ವಿಚಾರಣೆ ನಡೆಯುತ್ತಿದೆ. ಅತಿರಥ ಮಹಾರಥ ವಕೀಲರು ವಾದ - ಪ್ರತಿವಾದ, ಇತಿಹಾಸ ಹಾಗೂ ಐತಿಹಾಸಿಕ ದಾಖಲೆಗಳ ಮೂಲಕ ತಮ್ಮ ವಾದ ಮಂಡನೆ ಮಾಡುತ್ತಿದ್ದಾರೆ.