ಕರ್ನಾಟಕ

karnataka

ETV Bharat / bharat

ಸುಪ್ರೀಂನಲ್ಲಿ ಅಯೋಧ್ಯೆ ವಿಚಾರಣೆ: ರಘುವಂಶಸ್ಥರ ಬಗೆಗಿನ ಪ್ರಶ್ನೆಗೆ ಅಡ್ವೋಕೇಟ್ ತಬ್ಬಿಬ್ಬು..!

ವಾರದ ಐದು ದಿನ ಅಯೋಧ್ಯೆ ಭೂ ವಿವಾದದ ನಿತ್ಯ ವಿಚಾರಣೆ ನಡೆಯಲಿದ್ದು, ಈ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.

ಸುಪ್ರೀಂನಲ್ಲಿ ಅಯೋಧ್ಯೆ ವಿಚಾರಣೆ

By

Published : Aug 13, 2019, 11:57 AM IST

ನವದೆಹಲಿ:ಅಯೋಧ್ಯೆ ಭೂವಿವಾದಕ್ಕೆ ಮಧ್ಯಸ್ಥಿಕೆ ವಿಫಲವಾದ ಹಿನ್ನೆಲೆಯಲ್ಲಿ ನಿತ್ಯ ವಿಚಾರಣೆಗೆ ಮುಂದಾಗಿರುವ ಸುಪ್ರೀಂಕೋರ್ಟ್​ ವಾದ-ವಿವಾದವನ್ನು ಆಲಿಸುತ್ತಿದೆ.

ವಾರದ ಐದು ದಿನ ಅಯೋಧ್ಯೆ ಭೂ ವಿವಾದದ ನಿತ್ಯ ವಿಚಾರಣೆ ನಡೆಯಲಿದ್ದು, ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.

ರಾಮ ಲಲ್ಲಾ ಪರವಾಗಿ ವಾದ ಮಂಡಿಸುತ್ತಿರುವ ಅಡ್ವೋಕೇಟ್ ಪರಾಶರನ್​​, ಸಂಪೂರ್ಣ ಅಯೋಧ್ಯೆ ಹಿಂದೂಗಳ ಪರವಾಗಿದೆ ಎಂದು ನಾವು ಹೇಳುತ್ತಿಲ್ಲ. ಆದರೆ, ಜನ್ಮಭೂಮಿ ಬಗ್ಗೆ ನಾವಿಲ್ಲಿ ಪ್ರಸ್ತಾಪಿಸುತ್ತೇವೆ ಎಂದಾಗ ಮಧ್ಯ ಪ್ರವೇಶಿಸಿದ ಜಸ್ಟೀಸ್ ಬೋಬ್ಡೆ, ರಘುವಂಶಸ್ಥರು ಈಗಲೂ ಇದ್ದಾರಾ ಎಂದು ಪ್ರಶ್ನಿಸಿದ್ದಾರೆ.

ಜಸ್ಟೀಸ್ ಬೋಬ್ಡೆ ಪ್ರಶ್ನೆಗೆ ಗೊತ್ತಿಲ್ಲ ಎಂದು ಅಡ್ವೋಕೇಟ್ ಪರಾಶರನ್​ ಉತ್ತರಿಸಿದ್ದಾರೆ. ಇದೇ ವೇಳೆ, ಅಡ್ವೋಕೇಟ್​ ರಾಮಾಯಣದ ಕೆಲ ವಿಚಾರಗಳನ್ನು ಕೋರ್ಟ್​ ಮುಂದೆ ಹೇಳಿದ್ದಾರೆ. ಅಯೋಧ್ಯೆ ರಾಮ ಜನ್ಮಭೂಮಿ ಮತ್ತು ಈ ಸ್ಥಳದ ಬಗ್ಗೆ ಎಲ್ಲರೂ ಅಪಾರ ಗೌರವ ಹೊಂದಿದ್ದಾರೆ ಎಂದು ಅಡ್ವೋಕೇಟ್ ತಮ್ಮ ವಾದ ಮಂಡಿಸಿದ್ದಾರೆ.

ABOUT THE AUTHOR

...view details