ಕರ್ನಾಟಕ

karnataka

ETV Bharat / bharat

ಅಯೋಧ್ಯೆ ವಿಚಾರಣೆ ವೇಳೆ ನಕ್ಷೆ ಹರಿದ ವಕೀಲ, ಸುಪ್ರೀಂಕೋರ್ಟ್‌ನಲ್ಲಿ ನಾಟಕೀಯ ವಿದ್ಯಮಾನ - ಅಯೋಧ್ಯೆ ಭೂವಿವಾದ

ಅಯೋಧ್ಯೆ ನಕ್ಷೆ ಪ್ರದರ್ಶನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ರಾಜೀವ್ ಧವನ್​ ಅದನ್ನು ಹರಿದು ಹಾಕಿದ್ದಾರೆ. ಈ ವೇಳೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಕುಪಿತರಾಗಿ ನೀವು ಏನು ಬೇಕಿದ್ದರೂ ಮಾಡಿ, ಇನ್ನಷ್ಟು ಹರಿಯಿರಿ ಎಂದು ಆಕ್ರೋಶ ಭರಿತರಾಗಿ ನುಡಿದರು.

ಅಯೋಧ್ಯೆ ವಿಚಾರಣೆ

By

Published : Oct 16, 2019, 12:50 PM IST

ನವದೆಹಲಿ:ಅಯೋಧ್ಯೆ ಭೂವಿವಾದದ ಕೊನೆಯ ದಿನದ ವಿಚಾರಣೆ ನಾಟಕೀಯ ಬೆಳವಣಿಗೆಯೊಂದಕ್ಕೆ ಸಾಕ್ಷಿಯಾಗಿದೆ.

ವಿಚಾರಣೆ ಸಂದರ್ಭದಲ್ಲಿ ವಾದ ಮಂಡಿಸುವ ವೇಳೆ ಹಿಂದೂ ಮಹಾಸಭಾ ಪರ ವಕೀಲ ವಿಕಾಸ್ ಸಿಂಗ್, ರಾಮಜನ್ಮ ಭೂಮಿ ಬಗೆಗಿನ ಪುಸ್ತಕ(ಅಯೋಧ್ಯ ರಿವಿಸಿಟೆಡ್) ಉಲ್ಲೇಖ ಮಾಡಿದ್ದಲ್ಲದೆ, ಸ್ಥಳದ ನಕ್ಷೆಯನ್ನು ಕೋರ್ಟ್​ ಮುಂದಿಟ್ಟರು. ಈ ವೇಳೆ ಏಕಾಏಕಿ ಸುನ್ನಿ ವಕ್ಫ್​ಬೋರ್ಡ್​ ಪರ ವಕೀಲ ರಾಜೀವ್ ಧವನ್ ಮಧ್ಯಪ್ರವೇಶಿಸಿ ನಕ್ಷೆಯನ್ನು ಹರಿದು ಹಾಕಿದ್ದಾರೆ.

ಅಯೋಧ್ಯೆ ವಿಚಾರಣೆ: "ಸಂಜೆ 5 ಗಂಟೆಗೆ ಎಲ್ಲವೂ ಮುಕ್ತಾಯವಾಗಬೇಕು"- ಸುಪ್ರೀಂ

ನಕ್ಷೆ ಪ್ರದರ್ಶನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ರಾಜೀವ್ ಧವನ್​ ಅದನ್ನು ಹರಿದು ಹಾಕಿದ್ದಾರೆ. ಈ ವೇಳೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಕುಪಿತರಾಗಿ, ನೀವು ಏನು ಬೇಕಿದ್ದರೂ ಮಾಡಿ, ಇನ್ನಷ್ಟು ಹರಿಯಿರಿ ಎಂದು ಆಕ್ರೋಶ ಭರಿತರಾಗಿ ಹೇಳಿದ್ದಾರೆ.

ನಿತ್ಯ ವಿಚಾರಣೆಯ 40ನೇ ದಿನವಾದ ಇಂದು ಈ ನಾಟಕೀಯ ಬೆಳವಣಿಗೆ ಸಾಕಷ್ಟು ಅಚ್ಚರಿಗೂ ಕಾರಣವಾಗಿದೆ. ಇಂದು ಸಂಜೆ 5 ಗಂಟೆಗೆ ವಿಚಾರಣೆ ಮುಕ್ತಾಯವಾಗಲಿದೆ.

ABOUT THE AUTHOR

...view details