ಕರ್ನಾಟಕ

karnataka

ETV Bharat / bharat

'ಅಯೋಧ್ಯೆ ತೀರ್ಪಿನ ಬಗ್ಗೆ ಅನಗತ್ಯ ಹೇಳಿಕೆ ಬೇಡ': ಸಚಿವರಿಗೆ ಮೋದಿ ಕಟ್ಟಪ್ಪಣೆ

ಅಯೋಧ್ಯೆ ಭೂವಿವಾದ ಎರಡು ಕೋಮಿಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ವಿಚಾರ. ಈ ಬಗ್ಗೆ ತೀರ್ಪಿನ ಮುನ್ನ ಅಥವಾ ನಂತರದಲ್ಲಿ ಅನಗತ್ಯ ಹೇಳಿಕೆಯನ್ನು ನೀಡಬಾರದು ಎಂದು ಸಚಿವರಿಗೆ ಪ್ರಧಾನಿ ಮೋದಿ ಆದೇಶ ಮಾಡಿದ್ದಾರೆ.

ಪ್ರಧಾನಿ ಮೋದಿ

By

Published : Nov 7, 2019, 8:32 AM IST

ನವದೆಹಲಿ: ಅಯೋಧ್ಯೆ ಭೂವಿವಾದದ ಐತಿಹಾಸಿಕ ತೀರ್ಪು ಇನ್ನು ಕೆಲವೇ ದಿನಗಳಲ್ಲಿ ಹೊರಬೀಳಲಿದ್ದು, ಇದಕ್ಕೂ ಮುನ್ನ ಪ್ರಧಾನಿ ಮೋದಿ ತಮ್ಮ ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಕಟ್ಟಪ್ಪಣೆಯೊಂದನ್ನು ಹೊರಡಿಸಿದ್ದಾರೆ.

ಅಯೋಧ್ಯೆ ಭೂವಿವಾದ ಎರಡು ಕೋಮಿಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ವಿಚಾರ. ಈ ಬಗ್ಗೆ ತೀರ್ಪಿನ ಮುನ್ನ ಅಥವಾ ನಂತರದಲ್ಲಿ ಅನಗತ್ಯ ಹೇಳಿಕೆಯನ್ನು ನೀಡಬಾರದು ಎಂದು ಸಚಿವರಿಗೆ ಪ್ರಧಾನಿ ಮೋದಿ ಆದೇಶ ಮಾಡಿದ್ದಾರೆ.

ದೇಶದಲ್ಲಿ ಶಾಂತಿ, ಸಾಮರಸ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಅನಗತ್ಯ ಹೇಳಿಕೆಗಳಿಂದ ಸಚಿವರುಗಳು ದೂರ ಇರಬೇಕು ಎಂದು ಮೋದಿ ಹೇಳಿದ್ದಾರೆ. ಅ.27ರ ಮನ್​​ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲೂ 2010ರಲ್ಲಿ ಅಲಹಾಬಾದ್ ತೀರ್ಪಿನ ಸಂದರ್ಭದಲ್ಲಿ ಸರ್ಕಾರ ಹಾಗೂ ಸಂಘಟನೆಗಳು ನಡೆದುಕೊಂಡ ರೀತಿಯನ್ನು ಶ್ಲಾಘಿಸಿದ್ದರು.

2010ರ ಅಲಹಾಬಾದ್ ತೀರ್ಪಿನ ದಿನ ನೆನಪಿಸಿ ಕಿವಿಮಾತು ಹೇಳಿದ್ರು ಮೋದಿ

40 ದಿನಗಳ ನಿತ್ಯ ವಿಚಾರಣೆ ನಡೆದು ಸದ್ಯ ತೀರ್ಪನ್ನು ಕಾಯ್ದಿರಿಸಲಾಗಿದೆ. ನ.17ರಂದು ಸುಪ್ರೀಂಕೋರ್ಟ್​ ಹಾಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಕಾರ್ಯಾವಧಿ ಮುಕ್ತಾಯವಾಗಲಿದೆ. ಇದಕ್ಕೂ ಮುಂಚಿತವಾಗಿ ಐತಿಹಾಸಿಕ ತೀರ್ಪು ಪ್ರಕಟವಾಗಲಿದೆ.

ABOUT THE AUTHOR

...view details