ಟೋಕಿಯೋ(ಜಪಾನ್): ಕೊರೊನಾ ವೈರಸ್ನಿಂದ ತಪ್ಪಿಸಿಕೊಳ್ಳೋದಕ್ಕಾಗಿ ಜನರು ಗುಂಪುಗೂಡಬಾರದು ಹಾಗೂ ಜನಸಂದಣಿಯಿಂದ ದೂರವಿರಬೇಕು ಎಂದು ಜಪಾನ್ ಸರ್ಕಾರ ತನ್ನ ಪ್ರಜೆಗಳಿಗೆ ಸೂಚಿಸಿದೆ. ಅನಗತ್ಯ ರೈಲು ಪ್ರಯಾಣದಿಂದಲೂ ಕೂಡಾ ದೂರವಿರಬೇಕೆಂದು ಈ ವೇಳೆ ಎಚ್ಚರಿಕೆ ನೀಡಿದೆ.
ಗುಂಪು ಸೇರಬೇಡಿ, ಅನಗತ್ಯ ರೈಲು ಪ್ರಯಾಣ ಬೇಡವೇ ಬೇಡ ಎಂದ ಜಪಾನ್ ಸರ್ಕಾರ: ಕಾರಣ? - ಜಪಾನ್ ಸರ್ಕಾರ
ಕೊರೊನಾ ವೈರಸ್ನಿಂದ ತಪ್ಪಿಸಿಕೊಳ್ಳೋದಕ್ಕಾಗಿ ಜನರು ಗುಂಪುಗೂಡಬಾರದು ಹಾಗೂ ಜನಸಂದಣಿಯಿಂದ ದೂರವಿರಬೇಕು ಎಂದು ಜಪಾನ್ ಸರ್ಕಾರ ತನ್ನ ಪ್ರಜೆಗಳಿಗೆ ಸೂಚಿಸಿದೆ.
ಇದುವರೆಗೆ ಜಪಾನ್‌ನಲ್ಲಿ ಸುಮಾರು 60 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಇದೇ ಕಾರಣದಿಂದ ನಾವು ಕಿಕ್ಕಿರಿದ ಸ್ಥಳಗಳಿಂದ ದೂರವಿರಬೇಕು ಎಂದು ಜಪಾನ್ ಆರೋಗ್ಯ ಸಚಿವ ಕಟ್ಸುನೊಬು ಕ್ಯಾಟೊ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಬೇಸಿಗೆಯಲ್ಲಿ ನಡೆಯುವ ಟೋಕಿಯೋ ಒಲಿಂಪಿಕ್ನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ವೈರಸ್ ಹರಡುವುದನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಜಪಾನ್ನ ಸಾಂಕ್ರಾಮಿಕ ರೋಗಗಳ ರಾಷ್ಟ್ರೀಯ ಸಂಸ್ಥೆಯ ಮುಖ್ಯಸ್ಥರಾದ ತಕಾಜಿ ವಕಿತಾ ''ಈಗ ಕೊರೊನಾ ಸೋಂಕಿಗೆ ಒಳಗಾಗುತ್ತಿರುವವರೂ ಕೂಡಾ ಸಾಮಾನ್ಯ ವ್ಯಕ್ತಿಗಳಂತೆ ನೆಗಡಿ, ಶೀತದ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಮೇಲ್ನೋಟಕ್ಕೆ ಅವರಿಗೆ ಕೊರೊನಾ ಸೋಂಕು ಇರುವುದು ಗೊತ್ತಾಗುವುದಿಲ್ಲ'' ಎಂದು ಎಚ್ಚರಿಕೆ ನೀಡಿದ್ದಾರೆ.