ಹೈದರಾಬಾದ್: ಲಾಕ್ಡೌನ್ನಿಂದ ಅದೆಷ್ಟೋ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಕಂಪನಿಗಳು ಒದಗಿಸಿಕೊಟ್ಟಿವೆ. ಆದರೆ, ಇದು ಒಂದು ಸವಾಲಿನ ಕೆಲಸವೂ ಹೌದು.
ಮನೆಯಲ್ಲಿ ಒಂದೇ ಸ್ಥಳದಲ್ಲಿ ಒಂದೇ ಭಂಗಿಯಲ್ಲಿ ಕೂತು ಕೆಲಸ ಮಾಡುವುದರಿಂದ ಬೆನ್ನು ನೋವಿಗೆ ಪ್ರಮುಖ ಕಾರಣವಾಗಬಹುದು. ಹೈದರಾಬಾದ್‌ನ ಕಿಮ್ಸ್‌ನ ಹಿರಿಯ ಆರ್ಥೋಪೆಡಿಕ್ ಕನ್ಸಲ್ಟೆಂಟ್ ಡಾ. ಉದಯ್ ಕೃಷ್ಣ ಮೈನೆನಿ ಈ ಬಗ್ಗೆ ವಿವರಣೆ ನೀಡಿದ್ದಾರೆ. ಬೆನ್ನಿನ ಕೆಳ ಭಾಗ ಹೆಚ್ಚು ನೋವಿಗೆ ಒಳಗಾಗುತ್ತದೆ. ಅಲ್ಲಿ ಬೆನ್ನುಮೂಳೆಯು ಸ್ವಲ್ಪ ಮೃದುವಾಗಿರುತ್ತದೆ. ಆದ್ದರಿಂದ, ನಾವು ಕುಳಿತುಕೊಳ್ಳುವಾಗ, ನಿಂತಿರುವಾಗ, ಮಲಗುವಾಗ ಅಥವಾ ಮುಂದಕ್ಕೆ ಬಾಗುವಾಗ ಸರಿಯಾದ ಭಂಗಿಯನ್ನು ಕಾಪಾಡಿಕೊಳ್ಳದಿದ್ದರೆ ಬೆನ್ನು ನೋವಿಗೆ ಕಾರಣವಾಗುತ್ತದೆ. ಅಲ್ಲದೆ, ಸರಿಯಾದ ಭಂಗಿಯನ್ನು ನಾವು ಕಾಪಾಡಿಕೊಳ್ಳದಿದ್ದರೆ ಡಿಸ್ಕ್, ಕಶೇರುಖಂಡ, ಸ್ನಾಯು ಮತ್ತು ಬೆನ್ನುಮೂಳೆಯ ಕೀಲುಗಳಿಂದ ನೋವು ಉದ್ಭವಿಸಬಹುದು ಎಂದಿದ್ದಾರೆ.
ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ಗಳ ಮುಂದೆ ಹೆಚ್ಚು ಹೊತ್ತು ಕುಳಿತುಕೊಳ್ಳುವುದು ನೋವುಗಳಿಗೆ ಕಾರಣವಾಗಬಹುದು, ನೋವು ಸಾಮಾನ್ಯವಾಗಿ ಬೆನ್ನಿನ ಮೇಲ್ಭಾಗ ಹಾಗೂ ಕೆಳ ಭಾಗದಲ್ಲಿ ಕಂಡುಬರುತ್ತದೆ. ಅಂತಹ ಸಮಸ್ಯೆಗಳಿರುವ 95% ಜನರಿಗೆ ಶಸ್ತ್ರಚಿಕಿತ್ಸೆಯಿಲ್ಲದೆ ಚಿಕಿತ್ಸೆ ನೀಡಬಹುದು ಇದಕ್ಕಾಗಿ ಈಕೆಳಗಿ ಕ್ರಮಗಳನ್ನು ಅನುಸರಿಸಿ ಎಂದು ಡಾ. ಉದಯ್ ಹೇಳುತ್ತಾರೆ.
ಸರಿಯಾಗಿ ವಿಶ್ರಾಂತಿ ಪಡೆಯಿರಿ
ತುಂಬಾ ಗಟ್ಟಿಯಾಗು ಇರದ ಹಾಗೂ ಅತೀ ಮೃದುವಾಗಿಯೂ ಇರದ ಹಾಸಿಗೆ ಮೇಲೆ ಅಂಗಾತ ಮಲಗಿ ವಿಶ್ರಾಂತಿ ಪಡೆಯಬೇಕು. ನೆಲದ ಮೇಲೆ ಮಲಗುವುದರಿಂದ ನೋವನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ಈ ಹಿನ್ನೆಲೆ ಸರಿಯಾದ ಭಂಗಿಯಲ್ಲಿ ಮಲಗಿ ವಿಶ್ರಾಂತಿ ಪಡೆಯುವುದರಿಂದ ನೋವು ನಿವಾರಣೆ ಮಾಡಿಕೊಳ್ಳಬಹುದು.
ದೇಹಕ್ಕೆ ಚಲನೆ ಕೊಡಿ
ಒಂದೇ ಸ್ಥಳದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದು ಬಿಗಿತಕ್ಕೆ ಕಾರಣವಾಗಬಹುದು ಈ ಹಿನ್ನೆಲೆ ವಿರಾಮ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ. ಪ್ರತಿ 1 ಗಂಟೆಯ ನಂತರ, 10 ನಿಮಿಷಗಳ ವಿರಾಮ ತೆಗೆದುಕೊಂಡು ಈ ಕೆಳಗಿನವುಗಳನ್ನು ಮಾಡಿ:
( ಅಂಗಾತ ಮಲಗಿ ಎರಡೂ ಮೊಣಕಾಲುಗಳನ್ನು ಎದೆಯ ಹತ್ತಿರ ತರಬೇಕು. ಈ ವೇಳೆ ಮೊಣಕಾಲುಗಳನ್ನು ಕೈಗಳ ಸಹಾಯದಿಂದ ಎದೆಯ ಸಮೀಪ ತರಬೇಕು.)ನಿಮ್ಮ ಮನೆಯ ಸುತ್ತಲೂ ನಡೆಯಿರಿ
ಬೆನ್ನು ಮೂಳೆಯನ್ನು ಹಿಗ್ಗಿಸಿ