ಹಲ್ದ್ವಾನಿ (ಉತ್ತರಾಖಂಡ್):ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಗಿಂತ ಭರ್ಜರಿ ಗೆಲುವು ಸಾಧಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ಎನ್ಡಿಎ ಮೈತ್ರಿಕೂಟ, ಅವರ ಅಭಿಮಾನಿಗಳು ಒಂದಾಲ್ಲ ಒಂದು ಸೇವೆಯ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ.
ಉತ್ತರಾಖಂಡ್ನ ಆಟೋ ಚಾಲಕ ಜಮುನ ಪ್ರಸಾದ್ ಅವರು ಪ್ರಯಾಣಿಕರಿಗೆ ಉಚಿತ ಸೇವೆ ನೀಡಲು ಮುಂದಾಗಿದ್ದಾರೆ. ಹಲ್ದ್ವಾನಿ ನಿವಾಸಿ ಜಮುನಾ ಪ್ರಸಾದ್, ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಪ್ರಯಾಣಿಕರಿಗೆ ಯಾವುದೇ ಶುಲ್ಕವಿಲ್ಲದೆ ಅವರು ಹೇಳಿದ ಸ್ಥಳಕ್ಕೆ ಕರೆದೊಯುತ್ತೇನೆ ಎಂದು ಹೇಳಿದ್ದಾರೆ.