ಕರ್ನಾಟಕ

karnataka

ETV Bharat / bharat

10 ನಿಮಿಷಗಳಲ್ಲಿ ರೈಲು ಸ್ವಚ್ಛಗೊಳಿಸುವ ಘಟಕದ ಕಾರ್ಯವೈಖರಿ ಹೀಗಿದೆ.. - Vishakha -patanam rail coaching depot

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಹೊಸದಾಗಿ ಆರಂಭಗೊಂಡಿರುವ ರೈಲ್ವೆ ಕೋಚ್​​​ ಸ್ವಚ್ಛಗೊಳಿಸುವ ಘಟಕವು 7 ರಿಂದ 10 ನಿಮಿಷಗಳಲ್ಲಿ ರೈಲನ್ನು ಸ್ವಚ್ಛಗೊಳಿಸುತ್ತದೆ.

Automatic Plant cleanses Rail Coaches in 10 minutes
ರೈಲು ಸ್ವಚ್ಛಗೊಳಿಸುವ ಘಟಕದ ಕಾರ್ಯವೈಖರಿ

By

Published : Nov 2, 2020, 5:23 PM IST

ವಿಶಾಖಪಟ್ಟಣಂ (ಆಂಧ್ರಪ್ರದೇಶ): ಸಾಮಾನ್ಯವಾಗಿ 24 ಬೋಗಿಗಳನ್ನು ಒಳಗೊಂಡಿರುವ ರೈಲನ್ನು ಸ್ವಚ್ಛಗೊಳಿಸಲು 3 ರಿಂದ 4 ಗಂಟೆಗಳ ಸಮಯ ಬೇಕಾಗುತ್ತದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಹೊಸದಾಗಿ ಆರಂಭಗೊಂಡಿರುವ ರೈಲ್ವೆ ಕೋಚ್​​​ ಸ್ವಚ್ಛಗೊಳಿಸುವ ಘಟಕವು ಈ ಕೆಲಸವನ್ನು ಕೇವಲ 10 ನಿಮಿಷಗಳಲ್ಲಿ ಮುಗಿಸುತ್ತದೆ.

ಕೋವಿಡ್​ ಭೀತಿಯಿಂದ ಮುಕ್ತವಾಗಿ ಜನರು ರೈಲಿನಲ್ಲಿ ಪ್ರಯಾಣಿಸಲು ಆಂಧ್ರದ ರೈಲ್ವೆ ಇಲಾಖೆ ಈ ಕ್ರಮ ಕೈಗೊಂಡಿದೆ. ಇದು ಸ್ವಯಂಚಾಲಿತ ಬೋಗಿ ತೊಳೆಯುವ ಘಟಕವಾಗಿದ್ದು, ವಿಶಾಖಪಟ್ಟಣಂ ರೈಲ್ವೆ ಕೋಚಿಂಗ್ ಡಿಪೋ ಬಳಿ ಇದು ಕಾರ್ಯನಿರ್ವಹಿಸುತ್ತಿದೆ.

ರೈಲು ಸ್ವಚ್ಛಗೊಳಿಸುವ ಘಟಕದ ಕಾರ್ಯವೈಖರಿ

ವಿಶೇಷತೆಗಳು:

  • 2 ಕೋಟಿ ರೂ. ವೆಚ್ಚದಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿದ್ದು, ರೈಲಿನ ಎರಡೂ ಬದಿಗಳಲ್ಲಿ ವೇಗವಾಗಿ 7 ರಿಂದ 10 ನಿಮಿಷಗಳಲ್ಲಿ ಸ್ವಚ್ಛಗೊಳಿಸುತ್ತದೆ.
  • ಒಂದು ತಿಂಗಳಿನಲ್ಲಿ 8000 ಬೋಗಿಗಳನ್ನು ಕ್ಲೀನ್​ ಮಾಡುವ ಸಾಮರ್ಥ್ಯ ಹೊಂದಿದೆ.
  • ಸೋಡಿಯಂ ಹೈಡ್ರಾಕ್ಸೈಡ್​​ ರಾಸಾಯನಿಕವನ್ನು ಕ್ಲೀನಿಂಗ್​ಗೆ ಬಳಸುವುದರಿಂದ ಇದು ವೈರಸ್ ಮತ್ತು ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ.
  • ಪ್ರತಿ ಕೋಚ್ ಅನ್ನು ಸ್ವಚ್ಛಗೊಳಿಸಲು ಸಾಮಾನ್ಯವಾಗಿ 850 ಲೀಟರ್ ನೀರು ಬೇಕಾಗುತ್ತದೆ. ಆದರೆ ಇಲ್ಲಿ ಕೇವಲ 400 ಲೀಟರ್ ನೀರು ಸಾಕು.
  • ಸಾಮಾನ್ಯವಾಗಿ ಬೋಗಿ ಸ್ವಚ್ಛಗೊಳಿಸಲು 24 ಕಾರ್ಮಿಕರು ಬೇಕಾಗುತ್ತದೆ. ಇದರ ನಿರ್ವಹಣೆಗೆ ಒಬ್ಬ ಕಾರ್ಮಿಕ ಮಾತ್ರ ಸಾಕು.

ABOUT THE AUTHOR

...view details