ಹೈದರಾಬಾದ್ (ತೆಲಂಗಾಣ):ಆಟೋ ರಿಕ್ಷಾ ಚಾಲಕನೊಬ್ಬ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ನಿವಾಸ ಪ್ರಗತಿ ಭವನದ ಎದುರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ.
ಆಟೋ ರಿಕ್ಷಾ ಚಾಲಕರಿಗಾಗಿ ತರಲಾಗಿರುವ ಹೊಸ ಯೋಜನೆಯನ್ವಯ ತನಗೆ ಮನೆ ನೀಡಿಲ್ಲ ಎಂದು ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಆಟೋ ಚಾಲಕನನ್ನು ಚಂದರ್ ಎಂದು ಗುರುತಿಸಲಾಗಿದೆ. ಆತ ತನ್ನ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತೆಲಂಗಾಣ ರಾಜ್ಯ ರಚನೆಗೆ 2010ರಲ್ಲಿಯೂ ನಾನು ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದು ಚಂದರ್ ಹೇಳಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.