ಕರ್ನಾಟಕ

karnataka

ETV Bharat / bharat

ಆಟೋ ಹತ್ತಿದ್ದ ಮಂಗಳಮುಖಿ ಮೇಲೆ ಅತ್ಯಾಚಾರಕ್ಕೆ ಯತ್ನ... ಆಕೆ ಮಾಡಿದ್ದೇನು ಗೊತ್ತಾ!? - ಹೈದರಾಬಾದ್​​ನ ಕುತುಬುಲ್ಲಾಪುರ್ ಮಂಗಳಮುಖಿ

ಕಾಮುಕ ಆಟೋ ಡ್ರೈವರ್​ನೋರ್ವ ಮಂಗಳಮುಖಿ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸಿರುವ ಘಟನೆ ಹೈದರಾಬಾದ್​​ನಲ್ಲಿ ನಡೆದಿದೆ.

Auto driver attempted rape on transgender in hyderabad
ಮಂಗಳಮುಖಿ ಮೇಲೆ ಅತ್ಯಾಚಾರ ಯತ್ನ

By

Published : Dec 26, 2019, 9:06 PM IST

ಹೈದರಾಬಾದ್​​:ದೇಶಾದ್ಯಂತ ಪ್ರತಿದಿನ ಒಂದಿಲ್ಲೊಂದು ಅತ್ಯಾಚಾರದಂತಹ ಅಮಾನವೀಯ ಘಟನೆ ನಡೆಯುತ್ತಿರುವುದು ಬೆಳಕಿಗೆ ಬರುತ್ತಿದ್ದು, ಇದರ ಮಧ್ಯೆ ಹೈದರಾಬಾದ್​​ನಲ್ಲಿ ಇನ್ನೊಂದು ಅಸಹ್ಯಕರ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಹೈದರಾಬಾದ್​​ನ ಕುತುಬುಲ್ಲಾಪುರ್​​ದಲ್ಲಿ ಮಂಗಳಮುಖಿ ಮೇಲೆ ಆಟೋ ಚಾಲಕನೋರ್ವ ಅತ್ಯಾಚಾರ ಯತ್ನ ನಡೆಸಿದ್ದು, ಇದರಿಂದ ಆಕೆ ತಪ್ಪಿಸಿಕೊಂಡಿದ್ದಾಗಿ ತಿಳಿದು ಬಂದಿದೆ.

ಡ್ರೈವರ್​ ಮಹೇಶ್​ ಎಂಬಾತನ ಆಟೋದಲ್ಲಿ ಮಂಗಳಮುಖಿ ಹತ್ತಿಕೊಂಡಿದ್ದಾಳೆ. ಈ ವೇಳೆ ಆಕೆಯನ್ನ ನಿರ್ದಿಷ್ಟ ಜಾಗಕ್ಕೆ ಕರೆದುಕೊಂಡು ಹೋಗುವ ಬದಲು ಬೇರೆ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಲು ಮುಂದಾಗಿದ್ದಾನೆ. ಆದರೆ ಆತನಿಂದ ಮಂಗಳಮುಖಿ ತಪ್ಪಿಸಿಕೊಂಡಿದ್ದಾಳೆ.

ಇದಾದ ಮರುದಿನ ಸ್ನೇಹಿತರ ಜತೆ ಮಹೇಶ್​ ವಾಸವಾಗಿದ್ದ ಸ್ಥಳಕ್ಕೆ ಆಗಮಿಸಿ ಆತನ ಮೇಲೆ ಹಲ್ಲೆ ನಡೆಸಿದ್ದು, ತದನಂತರ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾಳೆ. ಇದೀಗ ಆಟೋ ಡ್ರೈವರ್ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details