ಕರ್ನಾಟಕ

karnataka

ETV Bharat / bharat

ಆಟೋ - ಮಿನಿ ಲಾರಿ ನಡುವೆ ಭೀಕರ ಅಪಘಾತ... ಆರು ಮಂದಿ ದುರ್ಮರಣ!

ಆಟೋ-ಮಿನಿ ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

Auto and Mini lorry collision Six people dead
Auto and Mini lorry collision Six people dead

By

Published : Feb 10, 2020, 12:20 PM IST

ಗುಂಟೂರು(ಆಂಧ್ರಪ್ರದೇಶ):ಆಟೋ-ಮಿನಿ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿರುವ ಪರಿಣಾಮ ಸ್ಥಳದಲ್ಲೇ ಆರು ಮಂದಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಆಟೋ-ಮಿನಿ ಲಾರಿ ನಡುವೆ ಭೀಕರ ಅಪಘಾತ

ಗುಂಟೂರಿನ ಫಿರಂಗಿಪುರಂನ ಮಂಡಲ್​​ ಗ್ರಾಮದ ಬಳಿ ಈ ಘಟನೆ ನಡೆದಿದೆ. ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದು, ಆಸ್ಪತ್ರೆಗೆ ದಾಖಲು ಮಾಡಿದ ವೇಳೆ ಇಬ್ಬರು ಇಹಲೋಕ ತ್ಯಜಿಸಿದ್ದಾರೆ.

ಸಾವನ್ನಪ್ಪಿರುವವರನ್ನ ಕಾಕಿಣಿ ರಮಾದೇವಿ, ಮಣಿಕಾಂತ್​, ಯಶಸ್ವಿನಿ, ಯಡ್ಲಾಪಡು, ಪುಟ್ಟಕುಟ್ಟ ಎಂದು ಗುರುತಿಸಲಾಗಿದೆ. ಉಳಿದವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರು.

ABOUT THE AUTHOR

...view details