ಮುಂಬೈ:ಮೆಟ್ರೋ ಕಾಮಗಾರಿಗಾಗಿ ಮುಂಬೈನ ಆರೆ ಕಾಲೋನಿಯಲ್ಲಿ ಮರಗಳನ್ನ ಕಡಿಯುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆನಡೆಸುತಿದ್ದು, 29 ಜನರನ್ನ ಬಂಧಿಸಲಾಗಿದೆ.
ಮೆಟ್ರೋ ಕಾಮಗಾರಿಗಾಗಿ ಅರೆ ಕಾಲೊನಿಯಲ್ಲಿನ 2,600 ಮರಗಳನ್ನ ಕಡಿಯಲು ಮುಂಬೈ ಮೆಟ್ರೋ ಕಾರ್ಪೋರೇಷನ್ ಮುಂದಾಗಿತ್ತು. ಬಾಂಬೆ ಹೈಕೋರ್ಟ್ ಕೂಡ ಮರ ಕಡಿಯುವುದಕ್ಕೆ ತಡೆ ನೀಡಲು ನಿರಾಕರಿಸಿತ್ತು. ಹೀಗಾಗಿ ರಾತ್ರಿಯಿಂದ ಮರ ಕಡಿಯುವ ಕೆಲಸ ಶುರುವಾಗಿತ್ತು. ಆದ್ರೆ ವಿಷಯ ತಿಳಿದ ಸ್ಥಳಿಯರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದು.