ಸಿಡ್ನಿ :ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಆರ್ಥಿಕತೆಯ ಮೇಲಿನ ಪರಿಣಾಮವನ್ನು ನಿಗ್ರಹಿಸಲು ಮತ್ತು 29 ವರ್ಷಗಳಲ್ಲಿ ದೇಶದ ಮೊದಲ ಆರ್ಥಿಕ ಕುಸಿತವನ್ನು ತಪ್ಪಿಸಲು ಆಸ್ಟ್ರೇಲಿಯಾ ಗುರುವಾರ 11 ಬಿಲಿಯನ್ ಯುಎಸ್ ಡಾಲರ್( 81 ,683 ಕೋಟಿ) ವೆಚ್ಚದ ಯೋಜನೆಯನ್ನು ಅನಾವರಣಗೊಳಿಸಿದೆ.
ಕೊರೊನಾ ತಡೆಗಟ್ಟಲು ಆಸ್ಟ್ರೇಲಿಯಾದಿಂದ 81 ಸಾವಿರ ಕೋಟಿಯ ಯೋಜನೆ ಸಿದ್ಧ - Australia
29 ವರ್ಷಗಳಲ್ಲಿ ದೇಶದ ಮೊದಲ ಆರ್ಥಿಕ ಕುಸಿತ ತಪ್ಪಿಸಲು ಆಸ್ಟ್ರೇಲಿಯಾ ಗುರುವಾರ 11 ಬಿಲಿಯನ್ ಯುಎಸ್ ಡಾಲರ್ ವೆಚ್ಚದ ಯೋಜನೆಯನ್ನು ಅನಾವರಣಗೊಳಿಸಿದೆ.
ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ 18 ಬಿಲಿಯನ್ ಆಸ್ಟ್ರೇಲಿಯನ್ ಡಾಲರ್ ಪ್ಯಾಕೇಜ್ ಸಹ ಘೋಷಿಸಿದ್ದಾರೆ. ಇದು ಜಿಡಿಪಿಯ ಶೇ ಒಂದಕ್ಕಿಂತ ಕಡಿಮೆಯಂತೆ. ಈ ಯೋಜನೆಯ ಉದ್ದೇಶ ಎಂದರೆ ಆಸ್ಟ್ರೇಲಿಯನ್ನರಿಗೆ ಉದ್ಯೋಗ ನೀಡುವುದು ಹಾಗೂ ವ್ಯವಹಾರವನ್ನ ಸುಗಮಗೊಳಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ ಎಂದು ಪ್ರಧಾನಿ ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಕೊರೊನಾ ವೈರಸ್ನಿಂದ ಮೂರು ಸಾವುಗಳು ಸಂಭವಿಸಿದ್ದು, 136 ಪ್ರಕರಣಗಳು ದೃಢಪಟ್ಟಿದೆ. ಹೀಗಾಗಿ ಮುಂಬರುವ ತಿಂಗಳುಗಳಲ್ಲಿ ವೈರಸ್ ಹರಡುವುದಬನ್ನ ತಡೆಗಟ್ಟಲು ಪ್ರತ್ಯೇಕವಾಗಿ 1.6 ಬಿಲಿಯನ್ ಹಣವನ್ನ ಪ್ರಧಾನಿ ಇದೇ ವೇಳೆ ಘೋಷಿಸಿದ್ದಾರೆ. COVID-19ನ್ನು ಎದುರಿಸುತ್ತಿರುವ ಸವಾಲುಗಳನ್ನ ಎದುರಿಸುವ ಬಗ್ಗೆ ಹಾಗೂ ದೇಶದ ಜನರಿಗೆ ಧೈರ್ಯ ತುಂಬಲು ದೂರದರ್ಶನದ ಮೂಲಕ ಭಾಷಣ ಮಾಡುವ ನಿರೀಕ್ಷೆಯಿದೆ.