ಔರಂಗಾಬಾದ್:ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಹಾಗೂ ಕ್ವಾರಂಟೈನ್ ಮಾಡಲು ಸರಿಯಾದ ಸೌಲಭ್ಯವಿಲ್ಲದೇ ಸರ್ಕಾರ ಕಷ್ಟಪಡುವಂತಾಗಿದೆ. ಇದರ ಮಧ್ಯೆ ಔರಂಗಾಬಾದ್ನ ಯುವಕನೋರ್ವ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು ತನ್ನ ಮನೆ ಕ್ವಾರಂಟೈನ್ ಸೆಂಟರ್ ಆಗಿ ಬಳಸಿಕೊಳ್ಳುವಂತೆ ತಿಳಿಸಿದ್ದಾನೆ.
ನಾಲ್ಕು ರೂಂ ಹೊಂದಿರುವ ಮನೆಯನ್ನ ಕೋವಿಡ್ ಶಂಕಿತರಿಗೋಸ್ಕರ ಮೀಸಲಿಡಲು ಕಿರಣ್ ಡೊರ್ಲೆ ಮುಂದಾಗಿದ್ದಾನೆ. ಹೋಂ ಕ್ವಾರಂಟೈನ್ಗೋಸ್ಕರ ಇದರ ಬಳಕೆ ಮಾಡಿಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾನೆ. ಮನೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಟೀ, ಉಪಹಾರ ಸೇರಿದಂತೆ ಮಧ್ಯಾಹ್ನ ಹಾಗೂ ರಾತ್ರಿಯ ಊಟ ನೀಡಲು ಆತ ನಿರ್ಧರಿಸಿದ್ದಾನೆ. ಪಲ್ಸಿ ಗ್ರಾಮದಲ್ಲಿ ಕೋವಿಡ್ ಶಂಕಿತರು ಇಲ್ಲಿ ಉಳಿದುಕೊಳ್ಳಬಹುದು ಎಂದು ತಿಳಿಸಿದ್ದಾನೆ.