ಕರ್ನಾಟಕ

karnataka

44 ವರ್ಷಗಳಲ್ಲಿ ಈ ಬಾರಿಯ ಆಗಸ್ಟ್‌ನಲ್ಲಿ ಅತಿ ಹೆಚ್ಚು ಮಳೆ: ಹವಾಮಾನ ಇಲಾಖೆ

By

Published : Aug 29, 2020, 5:41 PM IST

1976ರ ಬಳಿಕ 2020ರ ಆಗಸ್ಟ್​ನಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

IMD
ಅತಿ ಹೆಚ್ಚು ಮಳೆ

ನವದೆಹಲಿ: ಕಳೆದ 44 ವರ್ಷಗಳಲ್ಲೇ ಭಾರತದಲ್ಲಿ ಈ ಬಾರಿಯ ಆಗಸ್ಟ್‌ ತಿಂಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವರದಿ ಮಾಡಿದೆ.

ಆಗಸ್ಟ್ 1 ರಿಂದ 28 ರವರೆಗೆ ಶೇ.25 ರಷ್ಟು ಹೆಚ್ಚುವರಿ ಮಳೆಯಾಗಿದ್ದು, ದೇಶದ ಹಲವಾರು ಭಾಗಗಳು ಪ್ರವಾಹಕ್ಕೆ ಸಾಕ್ಷಿಯಾಗಿವೆ. ಇದು ಈ ಹಿಂದಿನ 44 ವರ್ಷಗಳಲ್ಲಿನ ಆಗಸ್ಟ್‌ ತಿಂಗಳಲ್ಲಿ ಇಷ್ಟೊಂದು ಪ್ರಮಾಣದ ಮಳೆಯಾಗಿರಲಿಲ್ಲ. 1976ರ ಆಗಸ್ಟ್​ನಲ್ಲಿ ಶೇ. 28.4ರಷ್ಟು ಹೆಚ್ಚುವರಿ ಮಳೆಯಾಗಿತ್ತು. ಅದರ ನಂತರ 1983ರಲ್ಲಿ ಸುರಿದ ಮಳೆಯ ದಾಖಲೆಯನ್ನು (ಶೇ.23.8) 2020ರ ಆಗಸ್ಟ್​ ಹಿಂದಿಕ್ಕಿದೆ.

ದೇಶದಲ್ಲಿ ಈ ಬಾರಿಯ ಮಳೆಗಾಲದಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಶೇ.9ರಷ್ಟು ಹೆಚ್ಚು ಮಳೆಯಾಗಿದೆ. ಬಿಹಾರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಗುಜರಾತ್, ಗೋವಾ ಮತ್ತು ಸಿಕ್ಕಿಂನಲ್ಲಿ ಹೆಚ್ಚಿನ ಮಳೆಯಾಗಿದೆ. ರಾಜ್ಯಗಳ ಪ್ರಮುಖ ನದಿಗಳು ಅಪಾಯಮಟ್ಟ ಮೀರಿ ಹರಿದು, ಪ್ರವಾಹ ಪರಿಸ್ಥಿತಿ ತಂದಿಟ್ಟಿದೆ.

ABOUT THE AUTHOR

...view details