ನವದೆಹಲಿ:ಪ್ಯಾರಿಸ್ನಲ್ಲಿರಫೇಲ್ ಯುದ್ಧವಿಮಾನಗಳ ತಯಾರಿಕೆಯ ಮೇಲ್ವಿಚಾರಣೆ ಮಾಡುತ್ತಿರುವ ಭಾರತೀಯ ವಾಯುಪಡೆ ತಂಡದ ಕಚೇರಿಯನ್ನು ಲೂಟಿ ಮಾಡುವ ಯತ್ನ ನಡೆದಿದೆ ಎಂದು ತಿಳಿದುಬಂದಿದೆ.
ಪ್ಯಾರಿಸ್ನ ರಫೇಲ್ ಮೇಲ್ವಿಚಾರಣೆ ಕಚೇರಿಯಲ್ಲಿ ಲೂಟಿ ಯತ್ನ! - undefined
ಪ್ಯಾರಿಸ್ನಲ್ಲಿರುವ ವಾಯುಪಡೆಯ ನಿರ್ವಹಣಾ ತಂಡದ ಕಚೇರಿಯನ್ನು ಕಳೆದ ಭಾನುವಾರ ಲೂಟಿ ಮಾಡುವ ಯತ್ನ ನಡೆದಿದೆ. ಇದು ಗೂಢಚಾರರ ಕೆಲಸವೇ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ.

ವಾಯುಪಡೆಯ ನಿರ್ವಹಣಾ ತಂಡದ ಕಚೇರಿಯನ್ನು ಕಳೆದ ಭಾನುವಾರ ಲೂಟಿ ಮಾಡುವ ಯತ್ನ ನಡೆದಿದೆ. ಇದು ಗೂಢಚಾರರ ಕೆಲಸವೇ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಆದರೆ ವಾಯುಪಡೆ ಇದನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸುತ್ತಿದೆ.
36 ರಫೇಲ್ ಯುದ್ಧ ವಿಮಾನಗಳ ತಯಾರಿಕೆ ಒಪ್ಪಂದ ಮಾಡಿಕೊಂಡಿರುವ ಭಾರತ, ಇದರ ಮೇಲ್ವಿಚಾರಣೆಗಾಗಿ ವಾಯುಪಡೆಯ ವ್ಯವಸ್ಥಾಪಕರ ತಂಡವನ್ನು ಪ್ಯಾರಿಸ್ನಲ್ಲಿರುವ ಡಸಾಲ್ಟ್ ಕಾಂಪ್ಲೆಕ್ಸ್ನಲ್ಲಿ ಇರಿಸಿದೆ. ಇಷ್ಟೂ ಕಚೇರಿಗಳನ್ನು ಲೂಟಿ ಮಾಡಲು ಯತ್ನ ನಡೆದಿದ್ದು, ಒಂದು ಕಚೇರಿಯಲ್ಲಿ ಹಣವನ್ನು ಲೂಟಿ ಮಾಡಲಾಗಿದೆ. ಪೊಲೀಸರು ಸಹ ತನಿಖೆ ನಡೆಸುತ್ತಿದ್ದು, ಈ ಬಗ್ಗೆ ಯಾವುದೇ ಮಾಹಿತಿ ತಿಳಿಸಿಲ್ಲ.