- ಕಿಸಾನ್ ಕ್ರೆಡಿಟ್ ಕಾರ್ಡ್ನಿಂದ ಸಾಲ ವಿತರಣೆ
- 2 ಲಕ್ಷ ಕೋಟಿ ರೂಪಾಯಿ ಸಾಲ ವಿತರಣೆ
- ಮೀನುಗಾರರಿಗೂ, ಹೈನುಗಾರರಿಗೂ ಇದರಿಂದ ಉಪಯೋಗ
ಕೋವಿಡ್ ಅನ್ನೋದು ಒಂದು ಅವಕಾಶ: ನಿರ್ಮಲಾ ಸೀತಾರಾಮನ್..
17:09 May 14
2ಲಕ್ಷ ಕೋಟಿ ರೂ. ಸಾಲ ವಿತರಣೆ
17:09 May 14
30 ಸಾವಿರ ಕೋಟಿ ಹೆಚ್ಚುವರಿ ತುರ್ತುಸಾಲ
- ರೈತರಿಗೆ 30 ಸಾವಿರ ಕೋಟಿ ಹೆಚ್ಚುವರಿ ತುರ್ತು ಸಾಲ
- ಈಗಾಗಲೇ 90 ಸಾವಿರ ಕೋಟಿ ಮೀಸಲಿಡಲಾಗಿತ್ತು
- ನಬಾರ್ಡ್ನಿಂದ ಕೃಷಿಗೆ ಹಣ ಮೀಸಲು
- ರಬಿ ಬೆಳೆಗಳನ್ನು ಬೆಳೆಯುವ ವೇಳೆ ರೈತರಿಗೆ ನೆರವು
- ಬಿತ್ತನೆ ನಂತರದಲ್ಲಿ ರೈತರಿಗೆ ನೆರವಾದ ಕೇಂದ್ರ
16:58 May 14
ಮಧ್ಯಮ ಆದಾಯ ಹೊಂದಿರುವವರಿಗೆ ಸಬ್ಸಿಡಿ ವಿಸ್ತರಣೆ
- ಮಧ್ಯಮ ಆದಾಯದವರಿಗೆ ಈಗಾಗಲೇ ಸಬ್ಸಿಡಿ ಘೋಷಣೆ
- 6 ರಿಂದ 8 ಲಕ್ಷ ವಾರ್ಷಿಕ ಆದಾಯ ಇರುವವರಿಗೆ ಸಬ್ಸಿಡಿ
- ಗೃಹ ಸಾಲದಲ್ಲಿ ಸಬ್ಸಿಡಿ ಸ್ಕೀಮ್ ವಿತರಣೆ
- ಮಾರ್ಚ್ 2020ವರೆಗೆ ಸಬ್ಸಿಡಿ ನೀಡಲಾಗಿದೆ
- ಇದನ್ನು ಒಂದು ವರ್ಷ ವಿಸ್ತರಿಸಲಾಗಿದೆ
- ಮಾರ್ಚ್ 2021ರವರೆಗೆ ಸಬ್ಸಿಡಿ ವಿಸ್ತರಣೆ
- 2.5 ಲಕ್ಷ ಕುಟುಂಬಗಳಿಗೆ ಇದರಿಂದ ಉಪಯೋಗ
- ಇದಕ್ಕಾಗಿ 70 ಸಾವಿರ ಕೋಟಿ ರೂ. ಮೀಸಲು
16:55 May 14
5 ಸಾವಿರ ಕೋಟಿ ರೂಪಾಯಿ ಸಾಲ
- ಬೀದಿ ವ್ಯಾಪಾರಿಗಳಿಗೆ ವಿಶೇಷ ಸಾಲ
- 5 ಸಾವಿರ ಕೋಟಿ ರೂಪಾಯಿ ಸಾಲ
- 50 ಲಕ್ಷ ಬೀದಿ ವ್ಯಾಪಾರಿಗಳಿಗೆ ನೆರವು
16:46 May 14
ಒನ್ ನೇಷನ್ ಒನ್ ರೇಷನ್ ಕಾರ್ಡ್
- ಒನ್ ನೇಷನ್ ಒನ್ ರೇಷನ್ ಕಾರ್ಡ್
- ದೇಶದ ಯಾವುದೇ ಭಾಗದಲ್ಲಿ ಪಡಿತರ ಪಡೆಯಬಹುದು
- ಇದರಿಂದ 67 ಕೋಟಿ ಜನರಿಗೆ ಉಪಯೋಗ
16:42 May 14
ವಲಸಿಗರಿಗೆ ಉಚಿತ ಆಹಾರ ಧಾನ್ಯ
- ವಲಸಿಗರಿಗೆ ಉಚಿತ ಆಹಾರ ಧಾನ್ಯ
- ಮುಂದಿನ ಎರಡು ತಿಂಗಳಿಗೆ ಉಚಿತ ಆಹಾರ ಧಾನ್ಯ
- ಹೆಚ್ಚುವರಿ 5 ಕೆಜಿ ಅಕ್ಕಿ ಅಥವಾ ಗೋಧಿ
- ಕ್ಯಾಂಪ್ಗಳಲ್ಲಿರುವವರಿಗೆ ರಾಜ್ಯ ಸರ್ಕಾರ ನೀಡಬೇಕು
- 8 ಕೋಟಿ ವಲಸಿಗರಿಗೆ ಇದರಿಂದ ಉಪಯೋಗ
- 3,500 ಕೋಟಿ ಕೇಂದ್ರ ಸರ್ಕಾರದಿಂದ ವೆಚ್ಚ
16:37 May 14
3 ಕೋಟಿ ಮಾಸ್ಕ್ ತಯಾರಿ
- 12 ಸಾವಿರ ಸ್ವಸಹಾಯ ಗುಂಪುಗಳಿಂದ 3 ಕೋಟಿ ಮಾಸ್ಕ್ ತಯಾರಿ
- 12 ಲಕ್ಷ ಲೀಟರ್ನಷ್ಟು ಸ್ಯಾನಿಟೈಸರ್ ಅನ್ನು ಈಗ ಉತ್ಪಾದಿಸಲಾಗಿದೆ
16:34 May 14
ಕನಿಷ್ಠ ವೇತನ ಸಿಗುವ ಕಾನೂನು
- ಎಲ್ಲಾ ಕೆಲಸಗಾರರಿಗೆ ಇಎಸ್ಐಸಿ ಸೌಲಭ್ಯ
- ಕನಿಷ್ಠ 10 ಮಂದಿ ಕೆಲಸ ಮಾಡುವ ಸ್ಥಳಗಳಿಗೆ ಈ ಸೌಲಭ್ಯ
- ಕನಿಷ್ಠ ವೇತನ ಸಿಗುವ ಕಾನೂನು ಜಾರಿಗೊಳಿಸುತ್ತೇವೆ
16:21 May 14
14.62 ಲಕ್ಷ ಮಾನವ ಕೆಲಸ ಸೃಷ್ಟಿ
- ನರೇಗಾದಲ್ಲಿ 14.62 ಲಕ್ಷ ಮಾನವ ಕೆಲಸದ ದಿನಗಳನ್ನು ಸೃಷ್ಟಿಸಿದ್ದೇವೆ
- 2.33 ಮಂದಿ ಕೆಲಸಗಾರರಿಗೆ ಮನರೇಗಾದಲ್ಲಿ ಕೆಲಸ
- 1.87 ಗ್ರಾಮ ಪಂಚಾಯಿತಿಗಳಲ್ಲಿ ಮನರೇಗಾ ಕೆಲಸ
- ಕೂಲಿಯನ್ನು 182 ರೂ.ನಿಂದ 202 ರೂ.ಗೆ ಹೆಚ್ಚಿಸಿದ್ದೇವೆ
- ಮನರೇಗಾಗೆ 10 ಸಾವಿರ ಕೋಟಿ ರೂಪಾಯಿ ಖರ್ಚು
- ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ
16:19 May 14
ವಸತಿಹೀನರಿಗೆ ಮೂರು ಹೊತ್ತಿನ ಊಟ
- ರಾಜ್ಯ ಸರ್ಕಾರಗಳಿಗೆ ರಾಜ್ಯ ವಿಪತ್ತು ನಿಧಿ ಬಳಸಿಕೊಳ್ಳಲು ಅನುಮತಿ
- ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ ಅನುಮತಿ
- ಈ ಹಣವನ್ನು ರಾಜ್ಯಗಳು ವಲಸೆ ಕಾರ್ಮಿಕರಿಗೆ ಬಳಸಿಕೊಳ್ಳಬಹುದು
- ನಗರದ ವಸತಿಹೀನರಿಗೆ ಮೂರು ಹೊತ್ತಿನ ಊಟ ನೀಡಲಾಗುತ್ತಿದೆ
- ಇದು ಪೂರ್ಣವಾಗಿ ಕೇಂದ್ರ ಸರ್ಕಾರ ವೆಚ್ಚದಲ್ಲಿ ನೀಡಲಾಗುತ್ತಿದೆ
16:15 May 14
ನಬಾರ್ಡ್ನಿಂದ ಸಾಲ
- ರೈತರಿಗಾಗಿ ಈಗಾಗಲೇ ಅನೇಕ ಯೋಜನೆಗಳನ್ನು ಘೋಷಿಸಲಾಗಿದೆ
- ಗ್ರಾಮೀಣ ಜನರಿಗೆ ಹಣಕಾಸಿನ ನೆರವು ಘೋಷಿಲಾಗುತ್ತಿದೆ
- ಮಾರ್ಚ್ 1ರಿಂದ 30 ಏಪ್ರಿಲ್ ಒಳಗೆ 62 ಲಕ್ಷ ಮಂದಿಗೆ ಸಾಲ ನೀಡಲಾಗಿದೆ
- ನಬಾರ್ಡ್ನಿಂದ ಈ ಸಾಲ ನೀಡಲಾಗಿದೆ
- ಗ್ರಾಮೀಣ ಮೂಲಸೌಕರ್ಯಕ್ಕೆ ಮಾರ್ಚ್ನಲ್ಲಿ 4,200 ಕೋಟಿ ನೀಡಲಾಗಿದೆ
- ಕೇಂದ್ರ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಹೇಳಿಕೆ
16:09 May 14
25 ಲಕ್ಷ ಕಿಸಾನ್ ಕಾರ್ಡ್
- 25 ಲಕ್ಷ ಕಿಸಾನ್ ಕಾರ್ಡ್ಗಳನ್ನು ನೀಡಲಾಗುತ್ತದೆ
- ಸುದ್ದಿಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್ ಘೋಷಣೆ
16:04 May 14
ವಲಸೆ ಕಾರ್ಮಿಕರು ಹಾಗೂ ಬೀದಿ ವ್ಯಾಪಾರಿಗಳ ಬಗ್ಗೆ ಇದು ಘೋಷಣೆ
- ವಲಸೆ ಕಾರ್ಮಿಕರು ಹಾಗೂ ಬೀದಿ ವ್ಯಾಪಾರಿಗಳಿಗೆ ನೆರವಿನ ಘೋಷಣೆ
- ಸುದ್ದಿಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್ ಹೇಳಿಕೆ
- ವಲಸೆ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಸಣ್ಣ ವರ್ತಕರು
- ಸ್ವ ಉದ್ಯೋಗ ಗುಂಪುಗಳು, ಸಣ್ಣ ರೈತರಿಗೆ ನೆರವು
- 3 ಕೋಟಿ ರೈತರಿಗೆ 4 ಲಕ್ಷ ಕೋಟಿಯಿಂದ ನೆರವು
15:35 May 14
ಕೇಂದ್ರ ಹಣಕಾಸು ಸಚಿವರ ಸುದ್ದಿಗೋಷ್ಠಿ
ನವದೆಹಲಿ: ಲಾಕ್ಡೌನ್ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಆತ್ಮ ನಿರ್ಭರ ಭಾರತ ಅಭಿಯಾನದಡಿಯಲ್ಲಿ 20 ಲಕ್ಷ ಕೋಟಿಯ ವಿಶೇಷ ಪ್ಯಾಕೇಜ್ ಅನ್ನು ಘೋಷಣೆ ಮಾಡಿದ್ದರು. ನಿನ್ನೆಯಷ್ಟೇ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೆರವು ಘೋಷಿಸಲಾಗಿತ್ತು. ಇಂದು ಕೇಂದ್ರ ವಿತ್ತ ಸಚಿವರ ಸುದ್ದಿಗೋಷ್ಠಿ ನಡೆಯಲಿದ್ದು, ಯಾವ ವಲಯಕ್ಕೆ ಎಷ್ಟು ಘೋಷಣೆ ಮಾಡಲಿದ್ದಾರೆ ಎಂಬುದು ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ.