ಕರ್ನಾಟಕ

karnataka

ETV Bharat / bharat

ಯಾರಿಗುಂಟು ಯಾರಿಗಿಲ್ಲ.. ಎಟಿಎಂನಲ್ಲಿ ಪಿನ್​ ನಂಬರ್​ ಒತ್ತೋ ಮೊದ್ಲೇ ₹96,000 ಬಂತು.. - ಡೆಬಿಟ್​ ಕಾರ್ಡ್​

ಕೆಲಸಾರಿ ಬೇಡ ಬೇಡ ಅಂದ್ರೂ ಅದೃಷ್ಟ ಲಕ್ಷ್ಮಿ ಕೈ ಸೇರಿಬಿಡುತ್ತಾಳೆ. ಅದು ಕೂಡಾ ಸಖತ್​ ಗ್ರ್ಯಾಂಡ್​ ಆಗಿ. ಹಣ ಡ್ರಾ ಮಾಡಲೆಂದು ಎಟಿಎಂಗೆ ಹೋದ ಮಹಿಳೆಯೊಬ್ಬರಿಗೆ ಶಾಕ್​ ಕಾದಿತ್ತು. ಕಾರ್ಡ್​ ಹಾಕಿ ಪಿನ್​ ನಂಬರ್​ ಒತ್ತೋ ಮೊದಲೇ ಎಟಿಎಂನಿಂದ ಗರಿಗರಿ ನೋಟುಗಳು ಹೊರ ಬಂದಿವೆ.

ಪಿನ್​ ನಂಬರ್​ ಒತ್ತೋ ಮುಂಚೆಯೇ 96000 ರೂ. ಹೊರಹಾಕಿದ ಎಟಿಎಂ

By

Published : Aug 26, 2019, 1:03 PM IST

ಮುಂಬೈ:ನೀವು ಒಂದು ಎಟಿಎಂಗೆ ಹೋಗ್ತೀರಾ ಅಂತಾ ಅಂದುಕೊಳ್ಳಿ. ಕಾರ್ಡ್​ ಹಾಕಿ ಪಿನ್​ ನಂಬರ್‌ ನಮೂದಿಸುವ ಮುನ್ನವೇ ಹಣ ಹೊರಬಂದರೆ ನಿಮಗೇನನ್ನಿಸಬಹುದು. ಈ ಮಹಿಳೆಗೆ ಎದುರಾಗಿದ್ದು ಕೂಡಾ ಇದೇ ಸನ್ನಿವೇಶ.

ತಾಂತ್ರಿಕ ದೋಷದಿಂದಾಗಿ ನಡೆದ ಘಟನೆಯೊಂದರಲ್ಲಿ ಮಹಿಳೆಯೊಬ್ಬರಿಗೆ 96,000 ರೂ. ಸಿಕ್ಕಿದೆ. ಎಟಿಎಂಗೆ ಹೋಗಿ ಮಹಿಳೆಯೊಬ್ಬರು ಹಣ ಡ್ರಾ ಮಾಡಲು ಮುಂದಾಗಿದ್ದಾರೆ. ಆದರೆ, ಎಟಿಎಂಗೆ ಹೋದ ಆ ಮಹಿಳೆಗೆ ಅರೆಕ್ಷಣ ಶಾಕ್​​ ಆಗಿತ್ತು. ಯಾಕಂದ್ರೆ, ಎಟಿಎಂಗೆ ಕಾರ್ಡ್​ ಹಾಕಿ ಇನ್ನೇನು ಪಿನ್​ ನಂಬರ್​ ನಮೂದಿಸಬೇಕು ಎನ್ನುವಷ್ಟರಲ್ಲಿ ಎಟಿಎಂನಿಂದ 500 ರೂ. ಮುಖಬೆಲೆಯ ಗರಿಗರಿ ನೋಟುಗಳು ಹೊರಬಂದಿವೆ. ಅದು ಕೂಡಾ ಒಂದೆರಡೇನಲ್ಲ. ಬರೋಬ್ಬರಿ 96,000 ರೂ. ಮಷಿನ್​ನಿಂದ ಹೊರ ಬಂದು ಮಹಿಳೆ ಕೈ ಸೇರಿದೆ.

ಈ ಘಟನೆ ನಡೆದಿರೋದು ಮುಂಬೈ ನಗರದ ಪೂರ್ವ ಅಂಧೇರಿಯಲ್ಲಿ. ಚಾರ್ಟಡ್​ ಅಕೌಂಟೆಂಟ್​ ಆಗಿರುವ ರಫಿಕಾ ಮಹದಿವಾಲ, ಎಟಿಎಂ ಟ್ರಾನ್ಸಾಕ್ಷನ್​ ಮಾಡಲು ಹೋದಾಗ ಈ ಘಟನೆ ನಡೆದಿದೆ. ಹಣ ಹೊರ ಬಂದ ತಕ್ಷಣ ತಮ್ಮ ಡೆಬಿಟ್​ ಕಾರ್ಡ್‌ನ ರಫಿಕಾ ಹೊರತೆಗೆದಿದ್ದಾರೆ. ಆದರೂ ಹಣವನ್ನು ನೋಡಿ ರಫಿಕಾಗೆ ಆಶ್ಚರ್ಯವಾಗಿದೆ. ಇದೇನಪ್ಪ ನನ್ನ ಅಕೌಂಟ್​ನಿಂದ ಇಷ್ಟೊಂದು ದುಡ್ಡು ಡೆಬಿಟ್​ ಆಯ್ತಾ ಅಂತಾ ಮಹಿಳೆ ಗೊಂದಲಕ್ಕೊಳಗಾಗಿದಾರೆ. ಆದರೆ, ಅದೃಷ್ಟಕ್ಕೆ ಮಹಿಳೆ ಅಕೌಂಟ್​ನಿಂದ ಯಾವುದೇ ಮೊತ್ತ ಡೆಬಿಟ್​ ಆಗಿರಲಿಲ್ಲ.

ಖಾತೆಯಿಂದ ಹಣ ಡೆಬಿಟ್​ ಆಗದಿರುವುದನ್ನು ಖಚಿತಪಡಿಸಿಕೊಂಡ ರಫಿಕಾ, ಮಷಿನ್​ನಿಂದ ಹೊರಬಂದ 96,000 ರೂ. ಮೊತ್ತವನ್ನು ಎಟಿಎಂ ಭದ್ರತಾ ಸಿಬ್ಬಂದಿ ಕೈಗೆ ಕೊಟ್ಟಿದ್ದಾರೆ.ಇಲ್ಲಿ ಮಹಿಳೆಗೆ ಉಂಟಾದ ಗೊಂದಲವೇನೆಂದರೆ, ಆ ಹಣ ಅವರಿಗೆ ಸೇರಿದ್ದಾಗಿರಲಿಲ್ಲ. ಮತ್ತೆ ಆ ಹಣ ಯಾರದ್ದು ಎಂಬ ಗೊಂದಲ ಉದ್ಭವವಾಗಿತ್ತು. ಅಷ್ಟಕ್ಕೂ ಎಟಿಎಂನಿಂದ ಹಣ ಡ್ರಾ ಮಾಡಲು ಮಿತಿ ಇದೆ. ಒಂದು ದಿನಕ್ಕೆ ಗರಿಷ್ಟ 25,000ದಿಂದ 50000 ರೂ. ಡ್ರಾ ಮಾಡಬಹುದು. ಹೀಗಾಗಿ ಇಷ್ಟೊಂದು ಹಣ ಬರಲು ಹೇಗೆ ಸಾಧ್ಯ ಎಂಬ ಗೊಂದಲ ಸೃಷ್ಟಿಯಾಗಿತ್ತು. ಕಡೆಗೆ ಒಂದು ನಿರ್ಧಾರಕ್ಕೆ ಬಂದ ಮಹಿಳೆ, ಆ ಮೊದಲು ಎಟಿಎಂಗೆ ಬಂದವರ ಟ್ರಾನ್ಸಾಕ್ಷನ್ ಫೇಲ್​ ಆಗಿ ಹಣ ಡಿಸ್ಪಾಚ್​ ಆಗಿ, ಹಣ ಅಲ್ಲೇ ಬಾಕಿಯಾಗಿದೆ. ಮತ್ತು ಮೆಷಿನ್​ ಕೆಟ್ಟೋಗಿರಬೇಕೆಂಬ ತೀರ್ಮಾನಕ್ಕೆ ಬಂದು ಮಹಿಳೆ ಹೊರ ನಡೆದಿದ್ದಾರೆ.

ABOUT THE AUTHOR

...view details