ನವದೆಹಲಿ :ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರು ಅಸಂಸದೀಯವಾಗಿ ನಡೆದುಕೊಂಡಿರುವುದಕ್ಕೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಆರ್‌ಪಿಐ) ಪಕ್ಷ ನಾಯಕ ಹಾಗೂ ಕೇಂದ್ರ ಸಚಿವ ರಾಮ್‌ದಾಸ್ ಅಠಾವಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸತ್‌ನಲ್ಲಿ ಗದ್ದಲ ಎಬ್ಬಿಸುವವರನ್ನು ಅಮಾನತು ಮಾಡುವ ಸಂಬಂಧ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಲಾಪದಲ್ಲಿ ಗದ್ದಲ, ಕೋಲಾಹಲ ಎಬ್ಬಿಸಿ ಕಾನೂನು ಬಾಹಿರ ನಡೆದುಕೊಂಡವರನ್ನು ಕೇವಲ ಈ ಅಧಿವೇಶನಕ್ಕಷ್ಟೇ ಅಲ್ಲ, 1 ವರ್ಷ ಇವರನ್ನು ಅಮಾನತಿನಲ್ಲಿಡಬೇಕು ಎಂದಿದ್ದಾರೆ. ಸಂಸದರನ್ನ ಅಮಾನತಿನಲ್ಲಿರಿಸುವ ಸಂಬಂಧ ಕಾನೂನು ರೂಪಿಸುವಂತೆ ಸಚಿವ ರಾಮ್‌ದಾಸ್, ಈಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ನಾಯಕರಿಗೆ ಪತ್ರ ಬರೆದಿದ್ದರು.