ಕರ್ನಾಟಕ

karnataka

ETV Bharat / bharat

ವರ್ಷದ ಆರು ತಿಂಗಳು ಈ ಪ್ರದೇಶದ ಜನರಿಗೆ ಅಟಲ್​ ಟನಲ್​ ಇದ್ದರೂ ಇಲ್ಲದಂತೆ

ಅಟಲ್ ಸುರಂಗದ ನಿರ್ಮಾಣವು ಮೂಲಸೌಕರ್ಯಕ್ಕೆ ದೊಡ್ಡ ಉತ್ತೇಜನವನ್ನು ನೀಡಿದ್ದರೂ, ಸ್ಪಿಟಿ ಪ್ರದೇಶದ ಜನತೆ ಮಾತ್ರ ಹಿಮಪಾತದ ತಿಂಗಳಲ್ಲಿ ವಿಶ್ವದ ಇತರೆ ಭಾಗದಿಂದ ದೂರವೇ ಉಳಿಯಬೇಕಾದ ಪರಿಸ್ಥಿತಿ ಎದುರಾಗಿದೆ.

Atal Tunnel
ಅಟಲ್​ ಟನಲ್

By

Published : Oct 7, 2020, 6:05 PM IST

ಲಾಹೌಲ್​:ನಾಲ್ಕು ದಿನದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ ಅಟಲ್ ಸುರಂಗ ಮಾರ್ಗ ಸದ್ಯ ಸಂಚಾರಕ್ಕೆ ಮುಕ್ತವಾಗಿದೆ. ಲಾಹೌಲ್ ವ್ಯಾಲಿಯ ಹಲವು ಪ್ರದೇಶಳಿಗೆ ಸಂಪರ್ಕ ಕೊಂಡಿಯಾಗಿ ಈ ಸುರಂಗ ಮಾರ್ಗ​ ತಲೆಎತ್ತಿದೆ. ಇದರಿಂದ ಚಳಿಗಾಳದಲ್ಲಿ ತೀವ್ರ ಮಂಜಿನ ಕಾರಣದಿಂದಾಗಿ ಸಮಸ್ಯೆ ಎದುರಿಸುತ್ತಿದ್ದ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ.

ಆದರೆ ಇಲ್ಲಿನ ಸ್ಪಿಟಿ ಪ್ರದೇಶದ ಜನರು ಮಾತ್ರ ಅಟಲ್​ ಟನಲ್​​​​ ನಿರ್ಮಾಣಗೊಂಡರೂ ದಟ್ಟ ಮಂಜಿನ ಪರಿಣಾಮ ಸುರಂಗ ಮಾರ್ಗ ಸೇವೆಯಿಂದ ದೂರ ಉಳಿಯುತ್ತಾರೆ. ಕುಂಜಮ್​ ಪಾಸ್​ ಇಲ್ಲಿನ ಲಾಹೌಲ್​​ ಹಾಗೂ ಸ್ಪಿಟಿ ಪ್ರದೇಶವನ್ನು ಸಂಪರ್ಕಿಸಲಿದೆ. ಆದರೆ ಹಿಮಪಾತದ ತಿಂಗಳುಗಳಲ್ಲಿ ಕುಂಜಮ್ ಪಾಸ್​ ಮುಚ್ಚಿರಲಿದ್ದು, ಇದರಿಂದಾಗಿ ಸ್ಪಿಟಿ ಪ್ರದೇಶಕ್ಕೆ ತಲುಪುವ ಮಾರ್ಗಗಳು ಇಲ್ಲವಾಗುತ್ತವೆ.

ಇನ್ನು ಹಿಮಾಚಲ ಪ್ರದೇಶದಲ್ಲಿ ಲಾಹೌಲ್ ಹಾಗೂ ಸ್ಪಿಟಿ ಅತ್ಯಂತ ದೊಡ್ಡ ಜಿಲ್ಲೆಗಳಾಗಿವೆ. ವರ್ಷದ ಆರು ತಿಂಗಳಲ್ಲಿ ಈ ಜಿಲ್ಲೆಗಳು ಸಂಪೂರ್ಣವಾಗಿ ಹಿಮದಿಂದ ಆವೃತವಾಗಿರುತ್ತವೆ. ಈ ಟನಲ್​​​​​​​ ನಿರ್ಮಾಣದ ಮೊದಲು ಜನರು ವ್ಯತಿರಿಕ್ತ ಸ್ಥಿತಿಯನ್ನು ಎದುರಿಸಬೇಕಾಗಿತ್ತು. 6 ತಿಂಗಳ ನಿರಂತರ ಹಿಮಪಾತದಿಂದಾಗಿ ಹೊರಜಗತ್ತಿನ ಸಂಪರ್ಕವೇ ಬಂದ್ ಆಗಿರುತ್ತಿತ್ತು. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಜನರನ್ನು ಕುಲ್ಲು ಪ್ರದೇಶಕ್ಕೆ ಕರೆತರಲು ಹೆಲಿಕಾಪ್ಟರ್​ ಸಹಾಯ ಪಡೆಯಲೇಬೇಕಿದೆ. ಈ ಸೌಲಭ್ಯ ಕೇವಲ ಹಣವಂತರ ಸ್ವತ್ತಾಗಿದೆ.

ಇದಲ್ಲದೆ ಇತಿಹಾಸ ತಜ್ಞ ಸೆರಿಂಗ್ ಡೋರ್ಜೆ ಪ್ರಕಾರ, ಈ ಸುರಂಗ ಮಾರ್ಗದ ನಿರ್ಮಾಣದಿಂದಾಗಿ ಲಡಾಖ್ ತಲುಪುವ ದೂರ ಕೇವಲ 45ರಿಂದ 50 ಕಿ.ಮೀಟರ್​​ನಷ್ಟು ಮಾತ್ರ ಕಡಿಮೆಯಾಗಿದೆ. ಅಲ್ಲದೆ ಲಡಾಖ್ ತಲುಪಲು ಮೂರು ಮಾರ್ಗಗಳಿವೆ. ಅದರಲ್ಲಿ ಬಾರಾಲಾಚ, ಲಾಚುನೋಲಾ ಮತ್ತು ಟ್ಯಾಂಗ್ಲಾಕ್​​ ಪ್ರಮುಖವೆನಿಸಿವೆ. ಈ ಪಾಸ್​ಗಳಲ್ಲಿ ಸುರಂಗ ನಿರ್ಮಿಸದಿದ್ದರೆ ಲಡಾಖ್ ತಲುಪುವುದು ಇನ್ನಷ್ಟು ಕಷ್ಟವಾಗುತ್ತಿತ್ತು ಎಂದಿದ್ದಾರೆ.

ಅಲ್ಲದೆ ಟನಲ್​ ನಿರ್ಮಾಣದಿಂದಾಗಿ ಲಾಹೌಲ್ ಪ್ರದೇಶದ ಜನರು ಸಂಪರ್ಕ ಸಾಧಿಸುವಲ್ಲಿ ಇನ್ನಷ್ಟು ಬೆಳವಣಿಗೆ ಹೊಂದಬಹುದು ಆದರೆ ಹೊರಜಗತ್ತಿನ ನಿರಂತರ ಸಂಪರ್ಕದಿಂದಾಗಿ ಅವರ ಸಂಸ್ಕೃತಿಗೆ ಮಾರಕವಾಗಬಹುದು ಎಂದಿದ್ದಾರೆ.

ABOUT THE AUTHOR

...view details