ತಿರುವನಂತಪುರಂ: ಕೇರಳದ ಕೋಯಿಕೋಡ್ನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುರಂತದಲ್ಲಿನ ಗಾಯಾಳುಗಳಿಗೆ ಕೇರಳಿಗರು ನೆರವಾಗಿದ್ದಾರೆ.
ವಿಮಾನ ಅವಘಡದ ಗಾಯಾಳುಗಳಿಗೆ ಮಿಡಿದ ಕೇರಳಿಗರು: ಮಧ್ಯರಾತ್ರಿಯಲ್ಲಿ ಕ್ಯೂ ನಿಂತು ರಕ್ತದಾನ!
ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಕೋಯಿಕೋಡ್ ವಿಮಾನ ರನ್‌ವೇಯಿಂದ ಜಾರಿ ಎರಡು ಭಾಗಗಳಾಯಿತು. ಕೆಲವೇ ಕ್ಷಣಗಳಲ್ಲಿ ವಿಮಾನದಲ್ಲಿದ್ದ ಒಟ್ಟು ಪ್ರಯಾಣಿಕರ ಪೈಕಿ ಕನಿಷ್ಠ 17 ಜನರು (ಪೈಲಟ್ & ಸಿಬ್ಬಂದಿ ಸೇರಿ) ಸಾವನ್ನಪ್ಪಿದರು. ಗಾಯಗೊಂಡವರಿಗೆ ರಕ್ತದಾನ ಮಾಡಲು ಜನರು ಮಧ್ಯರಾತ್ರಿಯಲ್ಲಿ ಕೋಯಿಕೋಡ್‌ನ ರಕ್ತ ಬ್ಯಾಂಕ್‌ನ ಹೊರಗೆ ಸರತಿ ಸಾಲಿನಲ್ಲಿ ನಿಂತರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ವಿಮಾನ ಅಪಘಾತದಿಂದ ಬದುಕುಳಿದು ಗಾಯಗೊಂಡುವರನ್ನು ಕೋಯಕೋಡ್ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಕ್ತದ ಅವಶ್ಯಕತೆ ಕಂಡುಬಂದಿತ್ತು. ಇದನ್ನು ಮನಗಂಡ ಸ್ಥಳೀಯರು ತಮ್ಮ ರಕ್ತದಾನ ಮಾಡಲು ಬ್ಲಡ್ ಬ್ಯಾಂಕ್ಗಳ ಮುಂದೆ ಮಧ್ಯರಾತ್ರಿಯಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು.