ಬಿಹಾರದಲ್ಲಿ ಟ್ರಕ್-ಬಸ್ ಡಿಕ್ಕಿ: 9 ಕಾರ್ಮಿಕರು ಸಾವು, ಹಲವರಿಗೆ ಗಾಯ - ಬಿಹಾರದಲ್ಲಿ 9 ಕಾರ್ಮಿಕರು ಸಾವು
09:43 May 19
ಬಿಹಾರದಲ್ಲಿ ಟ್ರಕ್-ಬಸ್ ಡಿಕ್ಕಿ: 9 ಕಾರ್ಮಿಕರು ಸಾವು, ಹಲವರಿಗೆ ಗಾಯ
ಬಿಹಾರ:ಕಾರ್ಮಿಕರು ಪ್ರಯಾಣಿಸುತ್ತಿದ್ದ ಟ್ರಕ್ಗೆ ಬಸ್ವೊಂದು ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ 9 ಮಂದಿ ಕಾರ್ಮಿಕರು ಮೃತಪಟ್ಟು ಹಲವರಿಗೆ ಗಾಯಗಳಾಗಿವೆ.
ಬಿಹಾರದ ಭಾಗಲ್ಪುರ್ ಜಿಲ್ಲೆಯ ನೌಗಾಚಿಯಾದಲ್ಲಿ ಘಟನೆ ನಡೆದಿದ್ದು, ಟ್ರಕ್ನಲ್ಲಿದ್ದ ಕಾರ್ಮಿಕರೆಲ್ಲಾ ರಸ್ತೆ ಮೇಲೆ ಬಿದ್ದಿದ್ದಾರೆ. ಕಾರ್ಮಿಕರೆಲ್ಲರೂ ದರ್ಬಂಗಾದಿಂದ ಬಂಕಾಗೆ ತೆರಳುತ್ತಿದ್ದರು. ಈ ಟ್ರಕ್ನಲ್ಲಿ ಕಬ್ಬಿಣದ ಸರಳುಗಳನ್ನು ಸಹ ತುಂಬಲಾಗಿದ್ದು, ಜೆಸಿಬಿ ಯಂತ್ರದ ಮೂಲಕ ಮೃತದೇಹಗಳನ್ನು ಹೊರ ತೆಗೆಯಲಾಗಿದೆ.
ಮೃತರು ವಲಸೆ ಕಾರ್ಮಿಕರು ಹೌದೋ ಅಲ್ಲವೋ ಎನ್ನುವುದು ನಿಖರವಾಗಿ ತಿಳಿದು ಬಂದಿಲ್ಲ. ಅವರ ಕುಟುಂಬಸ್ಥರನ್ನು ಸಂಪರ್ಕಿಸಿ ಮಾಹಿತಿ ಕಲೆಹಾಕಲು ಪ್ರಯತ್ನಿಸುತ್ತಿದ್ದೇವೆ ಎಂದು ನೌಗಾಚಿಯಾದ ಎಸ್ಪಿ ನಿಧಿ ರಾಣಿ ತಿಳಿಸಿದ್ದಾರೆ.