ಕರ್ನೂಲ್: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಆಂಧ್ರದ ಕರ್ನೂಲ್ ಜಿಲ್ಲೆಯ ದೇವರಗಟ್ಟು ಗ್ರಾಮದಲ್ಲಿ ಆಚರಿಸಲಾಗುವ ಬನ್ನಿ ಹಬ್ಬವನ್ನು ಈ ವರ್ಷ ರದ್ದುಗೊಳಿಸಲಾಗಿತ್ತು. ನಿಷೇಧದ ನಡುವೆಯೂ ಭಕ್ತರು ದೊಣ್ಣೆಯಿಂದ ಪರಸ್ಪರರ ತಲೆಗೆ ಬಡಿದುಕೊಳ್ಳುವ ಬನ್ನಿ ಹಬ್ಬ ಆಚರಿಸಿ ಹಲವರು ಗಾಯಗೊಂಡಿದ್ದಾರೆ.
ದೇವರಗಟ್ಟು ಗ್ರಾಮದ ದೇಗುಲದಲ್ಲಿ ದಸರಾ ಬನ್ನಿ ಹಬ್ಬದ ನಡುರಾತ್ರಿ ವೇಳೆ ನೂರಾರು ಮಂದಿ ಭಕ್ತರು ದೊಣ್ಣೆಯಿಂದ ಪರಸ್ಪರ ತಲೆಗೆ ಬಡಿದುಕೊಳ್ಳುತ್ತಾರೆ. ಶಿವ ಅಸುರನೊಬ್ಬನನ್ನು ಸಂಹರಿಸಿದ ಪ್ರತೀಕವಾಗಿ ಈ ಆಚರಣೆಯ ವೇಳೆ ಭಕ್ತರ ನೆತ್ತಯಿಂದ ರಕ್ತ ಜಿನುಗುತ್ತಿರುತ್ತದೆ. ಪೊಲೀಸರು, ಸ್ಥಳೀಯ ಜನಪ್ರತಿನಿಧಿಗಳು ಇದೆಲ್ಲವನ್ನೂ ಮೂಕ ಪ್ರೇಕ್ಷಕರಾಗಿ ನೋಡುತ್ತಾರೆ. ಪ್ರತೀ ವರ್ಷ ತೀವ್ರ ಪೆಟ್ಟಾಗಿ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚುತಲೇ ಇದೆ. ಆದರೆ, ಆಚರಣೆ ಮಾತ್ರ ನಿಂತಿಲ್ಲ.