ಕರ್ನಾಟಕ

karnataka

ETV Bharat / bharat

2013ರ ನಂತರ ದೆಹಲಿಯಲ್ಲಿ ಗರಿಷ್ಠ ತಾಪಮಾನ! ಬಿಸಿಲ ಧಗೆಗೆ ಜನ ತತ್ತರ!

ದಿಲ್ಲಿಯ ಪಾಲಮ್ ಪ್ರದೇಶದಲ್ಲಿ 46.8 ಡಿಗ್ರಿ ಉಷ್ಣಾಂಶ ದಾಖಲಾಗಿದೆ. 1998ರ ಮೇ 26 ರಂದು 48.4 ಡಿಗ್ರಿ ತಾಪಮಾನ ದಾಖಲಾಗಿದ್ದು, ಈ ವರೆಗಿನ ಗರಿಷ್ಠ ತಾಪಮಾನ ಇದಾಗಿದೆ.

ದೆಹಲಿಯಲ್ಲಿ ಗರಿಷ್ಠ ತಾಪಮಾನ ದಾಖಲು

By

Published : May 31, 2019, 10:40 AM IST

ನವದೆಹಲಿ:ದೇಶದಾದ್ಯಂತ ಬಿಸಿಲ ಬೇಗೆ ಆವರಿಸಿದ್ದು, ದೆಹಲಿಯಲ್ಲಿ ನಿನ್ನೆ ದಾಖಲೆಯ ಗರಿಷ್ಠ ತಾಪಮಾನ ದಾಖಲಾಗಿದೆ.

ನಿನ್ನೆ ದೆಹಲಿಯ ಪಾಲಮ್ ಪ್ರದೇಶದಲ್ಲಿ 46.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಮೇ ತಿಂಗಳಲ್ಲಿ ದಾಖಲಾಗಿರುವ ದಾಖಲೆಯ ಗರಿಷ್ಠ ತಾಪಮಾನ ಇದಾಗಿದೆ. 2013 ರ ಮೇ ತಿಂಗಳಲ್ಲಿ 47.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ನಂತ ರ ದೆಹಲಿಯಲ್ಲಿ 5 ವರ್ಷಗಳ ಬಳಿಕ ಗರಿಷ್ಠ ತಾಪಮಾನ ದಾಖಲಾಗಿದೆ.

1998ರ ಮೇ 26 ರಂದು 48.4 ಡಿಗ್ರಿ ತಾಪಮಾನ ದಾಖಲಾಗಿದ್ದು, ಈ ವರೆಗಿನ ಗರಿಷ್ಠ ತಾಪಮಾನ ಇದಾಗಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

ತಾಪಮಾನ ಏರಿಕೆಗೆ ಕಾರಣ:

ದೆಹಲಿಯ ಪಾಲಮ್ ವಿಮಾನ ನಿಲ್ದಾಣವಿರುವ ಪ್ರದೇಶವಾಗಿದ್ದು, ಇತರೆ ಭಾಗಗಳಿಗಿಂತಲೂ ಹೆಚ್ಚಿನ ತಾಪಮಾನವಿರುತ್ತದೆ. ಇಲ್ಲಿ ವಿಮಾನ ಹಾರಾಟ ಚಟುವಟಿಕೆಯಿಂದ ಹೊರಸೂಸುವ ಹೊಗೆಯು ವಾತಾವರಣದ ಮೇಲೆ ಪರಿಣಾಮ ಬೀರಿ ತಾಪಮಾನ ಹೆಚ್ಚಾಗುವಿಕೆಗೆ ಕಾರಣವಾಗುತ್ತದೆ ಎಂದು ಪ್ರಾದೇಶಿಕ ಹವಾಮಾನ ಸಂಸ್ಥೆಯ ಮುಖ್ಯಸ್ಥ ಕುಲ್ದೀಪ್ ಶ್ರೀವಾಸ್ತವ್ ತಿಳಿಸಿದ್ದಾರೆ.

ABOUT THE AUTHOR

...view details