ನವದೆಹಲಿ:ಕೊರೊನಾ ಸೋಂಕಿಗೆ ತುತ್ತಾದ ಫ್ಲೈಟ್ ಸಿಬ್ಬಂದಿ ಕಡ್ಡಾಯವಾಗಿ 10 ದಿನಗಳ ಕಾಲ ಹೋಮ್ ಐಸೋಲೇಷನ್ಗೆ ಒಳಗಾಗಬೇಕು. ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂದು ವೈದ್ಯರು ಘೋಷಿಸಿದ ನಂತರ ಸೇವೆಗೆ ಹಾಜರಾಗಬಹುದು ಎಂದು ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎಂ) ಸೂಚಿಸಿದೆ.
ಕೋವಿಡ್ನ ಹೆಚ್ಚು ರೋಗಲಕ್ಷಣಗಳನ್ನು ಹೊಂದಿರುವ ಸಿಬ್ಬಂದಿ 14 ದಿನ ಪ್ರತ್ಯೇಕವಾಗಿರಬೇಕಾಗುತ್ತದೆ. ಅಲ್ಲದೇ ಅವರು ಡಿಜಿಸಿಎ ಎಂಪನೇಲ್ಡ್ ಕ್ಲಾಸ್ -1 ಪರೀಕ್ಷಕರಿಂದ ಪರೀಕ್ಷಿಸಬೇಕಾಗುತ್ತದೆ. ಹೀಗೆ ಪರೀಕ್ಷಿಸಿ ಗುಣಮುಖರಾಗಿದ್ದಾರೆ ಎಂದು ಘೋಷಿಸಿದ ನಂತರವೇ ಸಿಬ್ಬಂದಿ ಸೇವೆಗೆ ಮರಳಬಹುದು ಎಂದು ಡಿಜಿಸಿಎ ಸುತ್ತೋಲೆಯಲ್ಲಿ ತಿಳಿಸಲಾಗಿದೆ.