ಕರ್ನಾಟಕ

karnataka

ETV Bharat / bharat

ಚಂದ್ರನೂರಲ್ಲಿ ಕಾಲಿಟ್ಟ ಆರ್ಮ್‌ಸ್ಟ್ರಾಂಗ್ ಮುಂಬೈಗೆ ಬಂದಿದ್ರು, ಅಲ್ಲಿ ಸಿಕ್ಕ ಗಿಫ್ಟ್‌ ಏನು ಗೊತ್ತೇ? - undefined

50 ವರ್ಷಗಳ ಹಿಂದೆ ಗಗನಯಾತ್ರಿ ನೀಲ್ ಆರ್ಮ್‌ಸ್ಟ್ರಾಂಗ್ ಅಪೋಲೊ 11 ನೌಕೆಯಿಂದಿಳಿದು ಚಂದ್ರನ ನೆಲ ಮುಟ್ಟಿದ ಮೊದಲ ಮಾನವ ಎಂಬ ಖ್ಯಾತಿಗೆ ಪಾತ್ರರಾದರು. ನೀಲ್ ಆರ್ಮ್‌ಸ್ಟ್ರಾಂಗ್ ಜೊತೆಯಲ್ಲಿ ಎಡ್ವಿನ್​ ಅಲಡ್ರಿನ್​ ಹಾಗೂ ಮೈಕಲ್​​ ಕಾಲಿನ್ಸ್​ ಕೂಡ ಅಪೋಲೊ 11ರಲ್ಲಿ ಚಂದ್ರನ ಮೇಲೆ ಕಾಲಿರಿಸಿದ ಸಾಧನೆಗೆ ಪಾತ್ರರಾಗಿದ್ದರು.

ಚಂದ್ರ

By

Published : Jul 20, 2019, 10:54 AM IST

ಹೈದರಾಬಾದ್​:ಅದು ಜುಲೈ 20, 1969ರ ಜುಲೈ 20, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಜಗತ್ತು ಹೆಮ್ಮೆ ಪಡುವ ದಿನ. ಗಗನಯಾತ್ರಿಗಳನ್ನು ಹೊತ್ತ ನಾಸಾದ ಅಪೋಲೊ 11 ನೌಕೆ, ಚಂದ್ರನ ಮೇಲ್ಮೈ ಮೇಲೆ ಇಳಿದು ಇತಿಹಾಸ ಸೃಷ್ಟಿಸಿದ ದಿನ. ಹೀಗೆ ಈ ಅಭೂತಪೂರ್ವ ಸಾಧನೆಗೆ ಇಂದಿಗೆ 50ನೇ ವರ್ಷ ತುಂಬಿದೆ.

ಇಂದಿಗೆ 50 ವರ್ಷಗಳ ಹಿಂದೆ ಗಗನಯಾತ್ರಿ ನೀಲ್ ಆರ್ಮ್‌ಸ್ಟ್ರಾಂಗ್ ಅಪೋಲೊ 11 ನೌಕೆಯಿಂದ ಇಳಿದು ಚಂದ್ರನ ನೆಲ ಮುಟ್ಟಿದ ಮೊದಲ ಮಾನವ ಎಂಬ ಖ್ಯಾತಿಗೆ ಪಾತ್ರರಾದರು. ನೀಲ್ ಆರ್ಮ್‌ಸ್ಟ್ರಾಂಗ್ ಅಲ್ಲದೆ ಎಡ್ವಿನ್​ ಅಲಡ್ರಿನ್​ ಹಾಗೂ ಮೈಕಲ್​​ ಕಾಲಿನ್ಸ್​ ಕೂಡ ಅಪೋಲೊ 11ರಲ್ಲಿ ಚಂದ್ರನ ಮೇಲೆ ಕಾಲಿರಿಸಿದ ಸಾಧನೆಗೆ ಪಾತ್ರರಾಗಿದ್ದರು. ಈ ಮೂವರ ಸಾಧನೆಗೆ ಜಗತ್ತಿನಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಯಿತು.

ಮರಳಿ ಭೂಮಿಗೆ ಬಂದ ಬಳಿಕ ಮೂವರೂ ಗಗನಯಾತ್ರಿಗಳು ವಿಶ್ವದ ಹಲವೆಡೆಗಳಲ್ಲಿ ವಿಜಯಯಾತ್ರೆ ಕೈಗೊಂಡಿದ್ದು, 1369ರ ಅಕ್ಟೋಬರ್​ನಲ್ಲಿ ಭಾರತಕ್ಕೆ ಆಗಮಿಸಿದ್ದರು. ಆಗ ಮೂವರಿಗೂ ಕೂಡ ಬಾಂಬೆ ಲಾಟರಿ ಟಿಕೆಟ್​ ನೀಡಲಾಗಿತ್ತು. ಈ ಟಿಕೆಟ್​ ನೀಡಿದವರು ನವಿನಚಂದ್ರ ಕಜಾರಿಯಾ. ಹೀಗೆ ಚಂದ್ರನ ಮೇಲೆ ಕಾಲಿಟ್ಟ ಗಗನಯಾತ್ರಿಗಳ ಸಾಧನೆ ಹಾಗೂ ಮಹಾರಾಷ್ಟ್ರ ಲಾಟರಿಯ ಮೂಲಕ 3 ಲಕ್ಷ ರೂ. ದೀಪಾವಳಿ ಜಾಕ್​ಪಾಟ್​ ಗೆಲ್ಲಲೂ ಅದೃಷ್ಟಶಾಲಿಯಾಗಿರಬೇಕು ಎಂದು ನವಿನಚಂದ್ರ ಹೇಳಿದ್ದರು. ಹೀಗೆ ಗಗನಯಾತ್ರಿಗಳ ಸಾಧನೆಗೆ ಎಂತಹ ಅದ್ಧೂರಿ ಸ್ವಾಗತ ಸಿಕ್ಕಿತೆಂಬುದಕ್ಕೆ ಈ ಬಾಂಬೆ ಲಾಟರಿ ಟಿಕೆಟ್​ ನೀಡಿರುವುದೇ ಸಾಕ್ಷಿ ಎನ್ನಬಹುದು.

ಅಂದು ಆಜಾದ್​ ಮೈದಾನದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮಕ್ಕೆ ಗಗನಯಾತ್ರಿಗಳು ವಿಮಾನ ನಿಲ್ದಾಣದಿಂದ ತೆರೆದ ಕಾರಿನಲ್ಲಿ ನೆರೆದಿದ್ದ ಜನಸಾಗರದತ್ತ ಕೈಬೀಸುತ್ತ ತೆರಳಿದ್ದರು. ವಿಶೇಷವೆಂಬಂತೆ ಚಂದ್ರಯಾನ ಕೈಗೊಂಡಿದ್ದ ಈಗಲ್' ಮಾಡ್ಯೂಲ್ ಮಾದರಿಯಲ್ಲೇ ಕಾರ್ಯಕ್ರಮದ ಸ್ಟೇಜ್​ ​ರೆಡಿ ಮಾಡಲಾಗಿತ್ತು. ಇದನ್ನು ಕಂಡ ಆರ್ಮ್‌ಸ್ಟ್ರಾಂಗ್ ಮತ್ತೊಮ್ಮೆ ನಮ್ಮ ಸ್ನೇಹಿತ ಈಗಲ್​ನ್ನು​ ನೋಡುತ್ತಿರುವುದು ಬಹಳ ಸಂತಸವಾಗುತ್ತಿದೆ. 'ಬಾಹ್ಯಾಕಾಶ ತಂತ್ರಜ್ಞಾನಕ್ಕೆ 14 ದೇಶಗಳು ಸಹಕರಿಸಿವೆ. ಭಾರತೀಯ ವಿಜ್ಞಾನಿಗಳು ಕೊಡುಗೆಯೂ ಕೂಡ ಮಹತ್ತರವಾದುದು ಎಂದು ಹೇಳಿದ್ದರು. ಅಲ್ಲದೆ 1969ರಲ್ಲಿ ಜಗತ್ತಿಗಿಂತ ಅಲ್ಲಿನ ದೇಶಗಳಿಂದ ಮೂಡಿಬಂದ ಅಂತಾರಾಷ್ಟ್ರೀಯ ಸಹಕಾರವೇ ದೊಡ್ಡದು ಎಂಬುದನ್ನು ತೋರಿಸಿತು ಎಂದಿದ್ದರು ಎಡ್ವಿನ್​ ಅಲಡ್ರಿನ್​.

ಬಳಿಕ ಮರುದಿನ ಬೆಳಗ್ಗೆ ಆರ್ಮ್‌ಸ್ಟ್ರಾಂಗ್ ಹಾಗೂ ಇತರ ಸಾಧಕರು ಬಾಂಬೆಯಿಂದ ಹೊರಟರು. ಕಾರಿನಲ್ಲಿ ತೆರಳುತ್ತಿದ್ದ ಮೂವರಿಗೂ ಕೂಡ ಹೂಮಳೆಗರೆಯಲಾಯ್ತು. ಅಲ್ಲದೆ ನೂರಾರು ಪೋಟೋಗ್ರಾಫರ್​ಗಳು ಕ್ಯಾಮರಾದಲ್ಲಿ ಸೆರೆಹಿಡಿಯಲು ತವಕಿಸುತ್ತಿದ್ದರು. ಅಲ್ಲದೆ ಈ ಕಾರ್ಯಕ್ರಮವು ನಡೆದಿದ್ದು, ಅಮೆರಿಕಾ ಹಾಗೂ ಸೋವಿಯತ್​ ಯೂನಿಯನ್​ ನಡುವಿನ ಶೀತಲ ಸಮರದ ಸಮಯದಲ್ಲಿ. ಈ ಗಗನಯಾತ್ರಿಗಳು ಅಂದು ಅಮೆರಿಕದ ಶಕ್ತಿ ಸಾಮರ್ಥ್ಯಕ್ಕೆ ರಾಯಭಾರಿಗಳಂತಾಗಿದ್ದರು. ಒಂದೆಡೆ ರಷ್ಯಾದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ವ್ಯತಿರಿಕ್ತತೆ ಕಂಡುಬಂದರೆ, ಇನ್ನೊಂದೆಡೆ ಉಪಗ್ರಹ ತಂತ್ರಜ್ಞಾನದಲ್ಲಿ ಆರಂಭಿಕ ಯಶಸ್ಸು ಪಡೆದ ಅಮೆರಿಕ, ತದನಂತರ ಬಾಹ್ಯಾಕಾಶಕ್ಕೆ ಮಾನವ ಸಹಿತ ಕಾರ್ಯಾಚರಣೆಯ ಭಾಗವಾಗಿ ಮಾನವರನ್ನು ಚಂದ್ರನಲ್ಲಿಗೆ ಕಳುಹಿಸುವಷ್ಟರ ಮಟ್ಟಕ್ಕೆ ಬೆಳೆಯಿತು. ಇನ್ನೊಂದೆಡೆ ರಷ್ಯಾ ಈ ವಿಚಾರದಲ್ಲಿ ಹಿಂದೆಬಿದ್ದಿತ್ತು.

ಬಳಿಕ ಮರುವರ್ಷ ಅಂದರೆ 1970ರಲ್ಲಿ ಆರ್ಮ್‌ಸ್ಟ್ರಾಂಗ್ ಅಪೋಲೋ 12ರ ಚಾರ್ಲ್ಸ್​ ಕೊನ್ರಾಟ್​ ಜೊತೆ ಭಾರತಕ್ಕೆ ಆಗಮಿಸಿದ್ದರು. ಆಗ ಫೆಡರೇಶನ್ ಏರೋನಾಟಿಕ್ ಇಂಟರ್​ ನ್ಯಾಷನಲ್ (ಎಫ್​ಎಐ) ವತಿಯಿಂದ ರಾಷ್ಟ್ರಪತಿ ವಿವಿ ಗಿರಿಯವರು ಪದಕ ನೀಡಿ ಗೌರವಿಸಿದ್ದರು. ಆದರೆ ಇದೇ ವೇಳೆ ಎಫ್‌ಐಐ ಪದಕಗಳನ್ನು ಪಡೆಯಲು ನಾಲ್ಕು ಸೋವಿಯತ್ ಗಗನಯಾತ್ರಿಗಳು ಕೂಡ ಇದ್ದರು. ಆದರೆ ಅದೆಲ್ಲೂ ಕೂಡ ವರದಿಯಾಗಲಿಲ್ಲ. 1970ರ ದಶಕದಲ್ಲಿ ಗಗನಯಾತ್ರಿಗಳು ನಿಯಮಿತ ಜಗತ್ತಿನಾದ್ಯಂತ ಪ್ರವಾಸ ಕೈಗೊಂಡರು.

For All Latest Updates

TAGGED:

ABOUT THE AUTHOR

...view details