ಕರ್ನಾಟಕ

karnataka

ETV Bharat / bharat

ಬುಧವಾರದ ಭವಿಷ್ಯ: ಅನಾವಶ್ಯಕ ವಿಷಯಗಳು ಈ ರಾಶಿಯವರನ್ನು ಕಾಡುತ್ತವೆ! - ಮಿಥುನ

ಮೇಷ: ನೀವು ಇಂದು ಆಧ್ಯಾತ್ಮಿಕ ವಿಚಾರತೆಗೆ ಮುಕ್ತವಾಗಿರುತ್ತೀರಿ. ಇದು ನಿಮ್ಮ ಭವಿಷ್ಯದ ಸಾಧನೆಗೆ ತಳಹದಿ ನಿರ್ಮಿಸಲು ನೆರವಾಗುತ್ತದೆ.

ಭವಿಷ್ಯ

By

Published : Jul 17, 2019, 5:31 AM IST

ವೃಷಭ: ಒಂದು ಸಾಧಾರಣ ದಿನ ಅಸಾಧಾರಣ ಸಂಜೆಯಾಗಿ ಅರಳುವ ಸಾಧ್ಯತೆ ಇದೆ. ಮಧ್ಯಾಹ್ನ ಒತ್ತಡ ಮತ್ತು ಆತಂಕದಿಂದ ಕೂಡಿರುತ್ತದೆ. ಆದಾಗ್ಯೂ, ಸಂಜೆ ನಿಮ್ಮ ಪ್ರೀತಿಪಾತ್ರರೊಂದಿಗೆ ಪ್ರೀತಿ ಮತ್ತು ಮಮತೆಯಲ್ಲಿ ಮುಳುಗಿಹೋಗುವುದರಿಂದ ಸಂಪೂರ್ಣ ಭಿನ್ನವಾಗಿರುತ್ತದೆ.

ಮಿಥುನ: ನೀವು ನಿಮ್ಮ ಆಹಾರದ ಅಭ್ಯಾಸಗಳಿಗೆ ವಿಶೇಷ ಗಮನ ನೀಡಬೇಕಾದ ಸೂಚನೆಗಳಿವೆ. ನೀವು ಸಭೆಗೆ ಹೋಗಬಹುದು ಅಥವಾ ದಿನದ ನಂತರ ಹೊಸ ಕಾರ್ಯ ಪ್ರಾರಂಭಿಸಬಹುದು. ಕೆಲಸದಲ್ಲಿ ಹಿರಿಯರಿಂದ ಬೆಂಬಲ ಮತ್ತು ಉತ್ತೇಜನ ಪಡೆಯುತ್ತೀರಿ.

ಕರ್ಕಾಟಕ: ದಿನದ ಮೊದಲ ಗಂಟೆಯಲ್ಲಿ ನಿಮ್ಮ ಕೋಪ ಜಾಸ್ತಿಯಾಗುತ್ತದೆ. ನಿಮ್ಮ ರಕ್ತದೊತ್ತಡ ಪರೀಕ್ಷಿಸಿಕೊಳ್ಳುವುದು ಉತ್ತಮ. ಧ್ಯಾನ ಮಾಡಿರಿ ಮತ್ತು ಕೆಲಸದಲ್ಲಿ ತಾಳ್ಮೆ ಕಳೆದುಕೊಳ್ಳಬೇಡಿ. ಪರಿಣಾಮಗಳು ನೀವು ಅನುಮಾನಿಸಿದ್ದಕ್ಕಿಂತ ತೀವ್ರವಾಗಿರುತ್ತವೆ.

ಸಿಂಹ: ನೀವು ಕಲಾತ್ಮಕತೆಯ ಕೃಪೆ ಹೊಂದಿದ್ದೀರಿ ಮತ್ತು ನಿಮ್ಮ ಸಾಮರ್ಥ್ಯ ಪ್ರದರ್ಶಿಸುತ್ತೀರಿ. ನೀವು ಸಂಪೂರ್ಣ ಉತ್ಸಾಹ ಮತ್ತು ಶಕ್ತಿಯೊಂದಿಗೆ ಬೀಗುತ್ತೀರಿ. ನಿಮ್ಮ ಟೀಕಾಕಾರರನ್ನು ಸುಮ್ಮನಾಗಿಸಲು ನೀವು ಮಾಡುತ್ತಿರುವ ಕೆಲಸವನ್ನೇ ಉತ್ತಮವಾಗಿ ಮಾಡಿ!

ಕನ್ಯಾ: ಸಾಧಾರಣ ಹಾಗೂ ದಣಿವಿನ ಬೆಳಗಿನಿಂದ ಈ ದಿನ ಕ್ರಮೇಣ ಅತ್ಯಂತ ಉತ್ಸಾಹದ ಸಂಜೆಯಾಗಿ ಬದಲಾಗುತ್ತದೆ. ಸಂಜೆಯ ವೇಳೆಗೆ ನೀವು ಅಡ್ಡಿ ಎದುರಿಸಿದರೂ ಒತ್ತಡದಿಂದ ಮುಕ್ತರಾದ ಭಾವನೆ ಹೊಂದುತ್ತೀರಿ. ಆದಾಗ್ಯೂ, ಎಲ್ಲ ಒತ್ತಡ ಸಂಜೆಯ ವೇಳೆಗೆ ನಿಮ್ಮ ಪ್ರೀತಿಪಾತ್ರರ ಜೊತೆಯಲ್ಲಿರುವಾಗ ಕರಗಿ ಹೋಗುತ್ತದೆ.

ತುಲಾ: ಅನಾವಶ್ಯಕ ವಿಷಯಗಳು ನಿಮ್ಮನ್ನು ಕಾಡುತ್ತವೆ. ಆಪ್ತರೊಂದಿಗೆ ಸಮಸ್ಯೆಗಳಿದ್ದರೆ ಅವರ ಜತೆ ಮಾತನಾಡಿ ಸರಿಪಡಿಸಿಕೊಳ್ಳಿ. ವ್ಯಾಪಾರದಲ್ಲಿ ವಿವಿಧ ಮೂಲಗಳಿಂದ ಹಣದ ಹರಿವು ನಿರೀಕ್ಷಿಸಿ.

ವೃಶ್ಚಿಕ: ಅತ್ಯಂತ ಬೆರಗುಗೊಳಿಸುವ ದಿನ ನಿಮಗಾಗಿ ಕಾದಿದೆ. ದಿನದ ಪ್ರಾಥಮಿಕ ಭಾಗವು ದೈನಂದಿನ ಕಾರ್ಯಗಳಲ್ಲಿ ತುಂಬಿದ್ದು, ನಿಮ್ಮ ಕ್ಷೇತ್ರದ ತೀವ್ರ ಸ್ಪರ್ಧೆಯ ಪೈಪೋಟಿ ಎದುರಿಸುತ್ತೀರಿ. ಆದರೆ, ನೀವು ದಿನದ ದ್ವಿತೀಯಾರ್ಧದಲ್ಲಿ ಫ್ಯಾಶನಿಸ್ಟ್​​ ಆಗಿ ಪಾರ್ಟಿಗಳಲ್ಲಿ ಭಾಗವಹಿಸುತ್ತೀರಿ.

ಧನು: ನೀವು ಮುಂದೆ ಹೋದಾಗ ಮುಖ ಊದಿಸಿಕೊಳ್ಳುವ ಜನರನ್ನು ಕಾಣಬಹುದು. ಕೆಲಸದಲ್ಲಿ ನಿಮ್ಮ ಸಹ-ಕೆಲಸಗಾರರು ನಿಮ್ಮ ಪರಿಣಿತಿ ಮತ್ತು ಕೌಶಲ್ಯಗಳಿಂದ ಲಾಭ ಪಡೆಯುತ್ತಾರೆ. ದಿನದ ಅಂತ್ಯಕ್ಕೆ ನಿಮ್ಮ ಪ್ರಿಯತಮೆಯೊಂದಿಗೆ ಗುಣಮಟ್ಟದ ಸಮಯ ಕಳೆಯುವುದರಿಂದ ನಿಮ್ಮ ಹೃದಯ ಬಡಿತ ಜೋರಾಗುತ್ತದೆ.

ಮಕರ:ಕೆಲಸದಲ್ಲಿ ಆಕರ್ಷಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ನಿಮ್ಮ ಬಹುತೇಕ ಸಮಯ ಕಬಳಿಸುತ್ತದೆ. ನೀವು ಮತ್ತೊಂದು ಯೋಜನೆ ಅಥವಾ ವ್ಯಾಪಾರೋದ್ಯಮ ಪ್ರಾರಂಭಿಸಲು ತಕ್ಕಷ್ಟು ಹಣಕಾಸಿನ ಬೆಂಬಲ ಪಡೆಯುವ ಸಾಧ್ಯತೆಗಳಿವೆ; ಈಗಿನ ಉದ್ಯಮವೂ ನಿರೀಕ್ಷೆ ಮೀರಿ ಬೆಳೆಯುತ್ತದೆ.

ಕುಂಭ: ಶ್ರೇಷ್ಠತೆ ಇಂದಿನ ಅತ್ಯಂತ ಮುಖ್ಯ ಪದ! ಆದಾಗ್ಯೂ, ಇದು ನಿಮ್ಮ ಕೆಲಸಕ್ಕೆ ಮಾತ್ರ ಅನ್ವಯಿಸುತ್ತದೆ ಹೊರತು ಫಲಿತಾಂಶಗಳಿಗಲ್ಲ. ಮಹತ್ತರ ಕ್ಷಣಗಳೇನೂ ಮುಂದೆ ಇಲ್ಲ ಆದ್ದರಿಂದ ನಿಮ್ಮ ಕೆಲಸ ಮುಂದುವರಿಸಿ.

ಮೀನ:ಉತ್ಪಾದಕ ಮತ್ತು ಫಲಪ್ರದ ದಿನ ನಿಮಗಾಗಿ ಕಾದಿದೆ. ನೀವು ಹಳೆಯ ಮಿತ್ರರು ಹಾಗೂ ಸಹೋದ್ಯೋಗಿಗಳನ್ನು ಭೇಟಿಯಾಗಬಹುದು ಅಥವಾ ಆಶ್ಚರ್ಯಕರವಾಗಿ ಹಳೆಯ ಗೆಳತಿ ಅಥವಾ ಗೆಳೆಯನೊಂದಿಗೆ ಸಂಪರ್ಕ ಪಡೆಯಬಹುದು.

ABOUT THE AUTHOR

...view details