ಕರ್ನಾಟಕ

karnataka

ETV Bharat / bharat

ಗುರುವಾರದ ರಾಶಿ ಭವಿಷ್ಯ: ಮಿಥುನ ರಾಶಿಯವರಿಂದು ಎಚ್ಚರದಿಂದಿರಿ - ಮೀನ

ಗುರುವಾರದ ರಾಶಿಫಲ ಇಲ್ಲಿದೆ ನೋಡಿ

astrology

By

Published : Aug 22, 2019, 5:09 AM IST

Updated : Aug 22, 2019, 6:00 AM IST

ಮೇಷ: ಇಂದು, ನೀವು ನಿಮ್ಮ ಸ್ಮರಣೆಗಳಲ್ಲಿ ಮುಳುಗಿ ಹೋಗುತ್ತೀರಿ. ನಿಮ್ಮ ಮಧುರವಾದ ಭಾಗ ಎಲ್ಲ ಕಡೆ ಹರಡಿದ್ದು, ಕೆಲಸದಲ್ಲಿ ಅದು ಎಲ್ಲರಿಗೂ ಕಾಣುತ್ತದೆ. ನಿಮ್ಮ ವೆಚ್ಚಗಳ ಕುರಿತು ನೀವು ಕೊಂಚ ಎಚ್ಚರಿಕೆ ವಹಿಸಬೇಕು ಮತ್ತು ಭವಿಷ್ಯಕ್ಕೆ ಉಳಿತಾಯ ಮಾಡಲು ಹೆಚ್ಚು ಗಮನ ನೀಡಬೇಕು.

ವೃಷಭ: ಈ ದಿನ ಸುದೀರ್ಘ ಶಾಪಿಂಗ್​ನಲ್ಲಿ ತೊಡಗಿಕೊಳ್ಳುವ ದಿನದಂತೆ ಕಾಣುತ್ತದೆ. ನೀವು ಮಾಲ್​ಗಳು, ಮಾರ್ಕೆಟ್​​ಗಳಿಗೆ ತೆರಳುತ್ತೀರಿ. ಬೆಲೆಗಳ ಕುರಿತು ಚೌಕಾಸಿ ಮಾಡುವಲ್ಲಿ, ನಿಮ್ಮ ಕೊಳ್ಳುವಿಕೆಗೆ ಅತ್ಯುತ್ತಮ ಡೀಲ್​ಗಳನ್ನು ಪಡೆಯುವಲ್ಲಿ ನೀವು ಸಂತೋಷವಾಗಿ ತೊಡಗಿಕೊಳ್ಳುತ್ತೀರಿ.

ಮಿಥುನ: ನಿಮ್ಮ ಆಕ್ರಮಣಕಾರಿ ಸ್ವಭಾವದಿಂದ ನೀವು ಜನರೊಂದಿಗೆ ವಾದವಿವಾದದಲ್ಲಿ ಸಿಲುಕಿಕೊಳ್ಳುತ್ತೀರಿ. ಈ ಜನರು ನಿಮ್ಮ ಶತೃತ್ವದಿಂದಾಗಿ ನಿಮ್ಮ ಪ್ರತಿಷ್ಠೆಗೆ ಧಕ್ಕೆ ತರುತ್ತಾರೆ. ಆದಾಗ್ಯೂ, ನೀವು ಅವರನ್ನು ಸೋಲಿಸುವಲ್ಲಿ ಯಶಸ್ವಿಯಾಗುತ್ತೀರಿ. ಅವರು ನಿಮ್ಮ ಬೌದ್ಧಿಕ ಔನ್ನತ್ಯದಿಂದ ಕೈ ಚೆಲ್ಲಬೇಕಾಗುತ್ತದೆ. ಹಾಗಾಗಿ ಎಚ್ಚರದಿಂದಿರಿ.

ಕರ್ಕಾಟಕ:ನೀವು ಹೊಸ ಮಿತ್ರರನ್ನು ಮಾಡಿಕೊಳ್ಳುತ್ತೀರಿ. ಅವರೊಂದಿಗೆ ಸಂತೋಷದ ಸಮಯ ನಿಮ್ಮದಾಗುತ್ತದೆ. ಆದರೆ ಕೆಲ ಚಿಂತೆ ಅಥವಾ ಒತ್ತಡ ನಿಮ್ಮನ್ನು ಹಿಂದಕ್ಕೆಳೆಯುತ್ತದೆ. ಆದಾಗ್ಯೂ, ಈ ಎಲ್ಲ ಚಿಂತೆಗಳು ನೀವು ಸಂಜೆ ನಿಮ್ಮ ಮಿತ್ರರೊಂದಿಗೆ ನಿರಾಳತೆ ಅನುಭವಿಸುವಾಗ ದೂರ ಹೋಗುತ್ತವೆ.

ಸಿಂಹ:ಇಂದು, ನಿಮ್ಮ ಜೀವನವಿಡೀ ನೀವು ಕಾಯುತ್ತಿದ್ದ ವಿಶೇಷ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶವಿದೆ. ನಿಮ್ಮ ಸಂಗಾತಿಗೆ ಸುಂದರ ಉಡುಗೊರೆ ನೀಡುವ ಸಾಧ್ಯತೆಯಿದೆ. ನೀವು ಕಲೆಯ ಕುರಿತು ಹೆಚ್ಚು ಗಮನ ನೀಡುತ್ತೀರಿ ಮತ್ತು ಈ ಹೊಸದಾಗಿ ಬಂದಿರುವ ಶ್ಲಾಘನೆಯನ್ನು ಗರಿಷ್ಠ ಮಟ್ಟದಲ್ಲಿ ಪ್ರದರ್ಶಿಸಲು ಸಮರ್ಥರಾಗುತ್ತೀರಿ.

ಕನ್ಯಾ:ಹಣಕಾಸಿನ ವಿಷಯದಲ್ಲಿ ನೀವು ಕೆಲ ಅಡೆತಡೆಗಳನ್ನು ಎದುರಿಸಬಹುದು. ನಿಮ್ಮ ಹೃದಯವನ್ನಲ್ಲ, ಮನಸ್ಸಿಗೆ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲು ಅವಕಾಶ ನೀಡಿ. ನಿಮ್ಮ ಬೆಲೆಬಾಳುವ ಸ್ವತ್ತುಗಳ ಕುರಿತು ಜಾಗರೂಕರಾಗಿರಿ. ಹೊಸ ಯೋಜನೆಗಳು ಮತ್ತು ಕಾನೂನು ಕರ್ತವ್ಯಗಳ ಕುರಿತು ಮಾತನಾಡುವಾಗ, ನೀವು ಏನು ಮಾಡಲು ನಿರ್ಧರಿಸಿದ್ದೀರಿ ಎಂದು ತಿಳಿದಿರಿ ಏಕೆಂದರೆ ಅದು ನಿಮ್ಮ ಮೇಲೆ ಸುದೀರ್ಘ ಪರಿಣಾಮ ಬೀರಬಹುದು.

ತುಲಾ: ಇಂದು ನೀವು ಎಷ್ಟು ಪ್ರತಿಭಾವಂತರು ಎಂದು ಜಗತ್ತಿನ ಎದುರು ಪ್ರದರ್ಶಿಸಲು ಇಂದು ಪರಿಪೂರ್ಣ ದಿನದಂತೆ ಕಾಣುತ್ತದೆ. ಬಟ್ಟೆಗಳನ್ನು ಕೊಳ್ಳುವಲ್ಲಿ ಸಂತೋಷ ಪಡುವವರು, ಇಂದು ಅವುಗಳನ್ನು ಕೊಳ್ಳಲು ಅವಕಾಶ ಪಡೆಯಬಹುದು. ನಿಮಗೆ ಸಂಬಂಧಿಸಿದ ವಿಷಯಕ್ಕೆ ಮಾಡಲು ಮತ್ತು ಹೇಳಲು ಲಕ್ಷ್ಯ ನೀಡುವುದು ಅಗತ್ಯ. ನೀವು ಇಂದಿನ ಬಹುತೇಕ ದಿನವನ್ನು ಹಗಲುಗನಸಿನಲ್ಲಿ ಕಳೆಯಬಹುದು. ಆದರೆ ಒಟ್ಟಾರೆ ಪ್ರತಿಯೊಂದು ಕೂಡಾ ನಿಮಗೆ ಸುಸೂತ್ರವಾಗಿರುತ್ತದೆ.

ವೃಶ್ಚಿಕ:ನಿಮ್ಮ ಜೀವನದಲ್ಲಿ ಮತ್ತೊಂದು ಸಾಧಾರಣ ದಿನವಾಗಿದ್ದು, ಉತ್ಸಾಹ ಹುಟ್ಟಿಸುವ ಯಾವುದೂ ನಿಮಗಾಗಿ ಇಲ್ಲ. ಆದಾಗ್ಯೂ, ಉತ್ಸಾಹದಿಂದಿರಿ ಮತ್ತು ಜೀವನಕ್ಕೆ ಕೊಂಚ ಮಸಾಲೆ ತರಲು ಪ್ರಯತ್ನ ನಡೆಸುತ್ತಲೇ ಇರಿ. ಗ್ರಹಗಳು ತಮ್ಮ ಮನಸ್ಥಿತಿ ಎಂದು ಬದಲಾಯಿಸಿಕೊಳ್ಳುತ್ತವೆ ಹಾಗೂ ಉತ್ಸಾಹದ ಭವಿಷ್ಯ ರೂಪಿಸುತ್ತವೆ ಎಂದು ನಿಮಗೆ ಗೊತ್ತಿಲ್ಲ. ಭರವಸೆಯನ್ನು ಜೀವಂತವಾಗಿರಿಸಿ.

ಧನು: ಕಷ್ಟಪಡದೇ ಇದ್ದರೆ ಫಲ ದೊರೆಯುವುದಿಲ್ಲ. ಆದ್ದರಿಂದ, ನಿಮ್ಮ ಕೆಲಸದಲ್ಲಿ ನೀವು ಅಪಾರ ತಳಮಳ ಎದುರಿಸಿದರೆ ಮತ್ತು ಕಷ್ಟಪಟ್ಟರೆ, ಅದಕ್ಕೆ ಪ್ರತಿಫಲ ಖಂಡಿತವಾಗಿಯೂ ಉತ್ತಮವಾಗಿರುತ್ತದೆ. ಎಲ್ಲರೂ ಒಟ್ಟಿಗೆ ಸೇರಲು ಮತ್ತು ಬಂಧುಮಿತ್ರರೊಂದಿಗೆ ಸಂಜೆಯ ಸಂತೋಷ ಕೂಟ ನಡೆಸಲು ಇದು ಸಕಾಲ! ಒಟ್ಟಿನಲ್ಲಿ, ಸಾಕಷ್ಟು ವಿನೋದಮಯ ಚಟುವಟಿಕೆಗಳ ದಿನವಾಗಿದೆ.

ಮಕರ:ಯಶಸ್ಸಿನ ಬಾಗಿಲುಗಳನ್ನು ತೆರೆಯಲು ವಿಶ್ವಾಸವೇ ಮುಖ್ಯ. ಇಂದು, ನಿಮ್ಮ ಧನಾತ್ಮಕ ಪ್ರವೃತ್ತಿಯಿಂದ ನೀವು ನಿಮ್ಮ ಅಸ್ತಿತ್ವ ಸಾಬೀತುಪಡಿಸುತ್ತೀರಿ ಮತ್ತು ಯಶಸ್ಸಿಗೆ ಒಂದು ಹೆಜ್ಜೆ ಮುಂದೆ ಬರುತ್ತೀರಿ. ನೀವು ಉದಾಸೀನದ ವ್ಯಕ್ತಿಯಲ್ಲ. ನಿಮ್ಮ ಸಾಧನೆಗಳಿಗೆ ನೀವು ಮೌಲ್ಯ ನೀಡುತ್ತೀರಿ ಮತ್ತು ಪ್ರತಿ ನಿರ್ಧಾರವನ್ನೂ ಜಾಣ್ಮೆಯಿಂದ ಕೈಗೊಳ್ಳುತ್ತೀರಿ.

ಕುಂಭ: ನಿಮಗೆ ಇಂದು ಪಾರ್ಟಿ ಮಾಡಲು ಕಾರಣ ಬೇಕಿಲ್ಲ. ಅದು ನಿಮ್ಮ ಮಿತ್ರನ ವಿವಾಹವಾಗಿರಬಹುದು ಅಥವಾ ಹೊಸ ಕಾರು ಕೊಳ್ಳುವುದಿರಬಹುದು; ನೀವು ಜೀವನವನ್ನು ಇನ್ನಿಲ್ಲದಂತೆ ಸಂಭ್ರಮಿಸುವ ಮನಸ್ಥಿತಿಯಲ್ಲಿದ್ದೀರಿ. ಇದಲ್ಲದೆ, ಇಡೀ ದಿನ ನೀವು ಸರಾಗವಾಗಿ ಮುನ್ನಡೆಯುತ್ತೀರಿ. ನೀವು ವ್ಯಾಪಾರಿ ಅಥವಾ ವೃತ್ತಿಪರರಾಗಿರಲಿ, ನೀವು ನಿಮ್ಮ ಗುರಿಗೆ ಒಂದು ಹೆಜ್ಜೆ ಮುಂದೆ ಸಾಗುತ್ತೀರಿ.

ಮೀನ:ಗೊಂದಲ ಮತ್ತು ಅನಿಶ್ಚಿತತೆ ಕಪ್ಪುಮೋಡಗಳ ಹಾಗೆ ಇಂದಿನ ಆಕಾಶದಲ್ಲಿ ಮೂಡುತ್ತವೆ ಅವು ನಿಮ್ಮ ನಿರ್ಧಾರ ಕೈಗೊಳ್ಳುವ ನಡೆಯಲ್ಲಿ ಮಳೆ ಸುರಿಸುತ್ತವೆ ಮತ್ತು ನಿಮಗೆ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವುದನ್ನು ಕಷ್ಟವಾಗಿಸುತ್ತವೆ. ಗೊಂದಲದಿಂದ ದೂರವಿರಿ ಮತ್ತು ಯಾವುದೇ ಪ್ರಮುಖ ನಿರ್ಧಾರಗಳನ್ನು ಪ್ರಯತ್ನಿಸಿ ಮತ್ತು ನಿಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಿಗೆ ಬದ್ಧರಾಗಿರಿ.

Last Updated : Aug 22, 2019, 6:00 AM IST

ABOUT THE AUTHOR

...view details