ಕರ್ನಾಟಕ

karnataka

ETV Bharat / bharat

ಶನಿವಾರದ ರಾಶಿ ಭವಿಷ್ಯ: ಸಂಘರ್ಷಗಳಿಂದ ಪಾರಾಗಲು ವೃಷಭ ರಾಶಿಯವರು ಹೀಗೆ ಮಾಡಿ - ಶನಿವಾರದ ರಾಶಿ ಭವಿಷ್ಯ

ಶನಿವಾರದ ರಾಶಿ ಫಲ ಇಲ್ಲಿದೆ

astrology

By

Published : Aug 24, 2019, 5:00 AM IST

Updated : Aug 24, 2019, 6:01 AM IST

ಮೇಷ:ನೀವು ಅನಗತ್ಯ ಸನ್ನಿವೇಶಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಯಿದೆ. ನೀವು ಕಠಿಣ ಹೋರಾಟ ನಡೆಸಿದರೂ ಅದು ನಿಮಗೆ ಪೂರಕವಾಗುವುದಿಲ್ಲವಾದ್ದರಿಂದ ಹಾಗೆ ಮಾಡಬೇಡಿ. ವಿಶ್ರಾಂತಿಗೆ ಕೊಂಚ ಸಮಯ ತೆಗೆದುಕೊಳ್ಳಿ, ಏಕೆಂದರೆ ನೀವು ಏನೇ ಮಾಡಿದರೂ ವಿಷಯಗಳು ನಿಮ್ಮತ್ತ ಸಾಗಿ ಬರುವುದಿಲ್ಲ.

ವೃಷಭ:ನಿಮ್ಮ ಚಿಂತನಾಶಕ್ತಿ ಇಂದು ಅತ್ಯಂತ ದುರ್ಬಲವಾಗಿದೆ. ನಿಮ್ಮ ಸ್ವಾಮ್ಯತೆ ಸಂಘರ್ಷಕ್ಕೆ ಕಾರಣವಾಗಬಹುದು. ಅನಗತ್ಯ ಸಂಕೀರ್ಣಗಳನ್ನು ತಪ್ಪಿಸಲು ನಿಮ್ಮ ಕೋಪವನ್ನು ನಿಯಂತ್ರಿಸಿ. ಆತ್ಮಾವಲೋಕನ ನಿಮ್ಮ ಚಿಂತನೆಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನಿಮ್ಮ ಸಮಸ್ಯೆಗಳನ್ನು ಕಂಡುಕೊಳ್ಳಲು ಮತ್ತು ಪರಿಹಾರಗಳನ್ನು ಚಿಂತಿಸಲು ಅವಕಾಶ ಕಲ್ಪಿಸುತ್ತದೆ.

ಮಿಥುನ: ನೀವು ಎಲ್ಲದರಿಂದ ವಿಮುಖರಾಗಿರುವಂತೆ ಭಾವಿಸುತ್ತೀರಿ. ಇದು ನಿಮಗೆ ಹಾಗೂ ನಿಮ್ಮ ಪ್ರೀತಿಪಾತ್ರರ ನಡುವೆ ದೂರ ಉಂಟು ಮಾಡಬಹುದು. ನಿಮ್ಮ ಕೋಪದಿಂದಾಗಿ ನೀವು ಅನಗತ್ಯ ಚರ್ಚೆಗಳಲ್ಲಿ ಸಿಲುಕಿಕೊಳ್ಳುತ್ತೀರಿ. ನೀವು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಬೇಕು.

ಕರ್ಕಾಟಕ: ಕಲ್ಪನಾಲೋಕದಲ್ಲಿ ಮುಳುಗಿಹೋಗುವ ದಿನ. ನಿಮ್ಮ ಆಲೋಚನೆಗಳು ಅದ್ಭುತವಾಗಿವೆ. ನಿಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಜನರು ನಿಮ್ಮ ಪ್ರಯತ್ನಗಳನ್ನು ಮೆಚ್ಚಿಕೊಳ್ಳುತ್ತಾರೆ.(ನಿಮ್ಮ ಪ್ರಯತ್ನಗಳಿಗೆ ಶ್ಲಾಘನೆ). ಸೃಜನಶೀಲತೆ ಮತ್ತು ಯಶಸ್ಸಿನ ದಿನವಾಗಿದ್ದು ದೇವರ ಆಶೀರ್ವಾದವೂ ಇರುತ್ತದೆ.

ಸಿಂಹ:ನಿಮ್ಮ ಕೆಲಸದಲ್ಲಿ ಪ್ರಗತಿ ಸಾಧಿಸಲು ನೀವು ತಡೆಯಿರದೆ ಶ್ರಮಿಸುತ್ತೀರಿ. ನೀವು ನಿಮ್ಮ ತೀರ್ಮಾನಗಳ ಕುರಿತಂತೆ ಅಚಲವಾಗಿರುತ್ತೀರಿ. ನಿಮ್ಮ ಕೈಕೆಳಗೆ ಕೆಲಸ ಮಾಡುವವರು ಸೋಮಾರಿಯಾಗಲು ನೀವು ಬಿಡುವುದಿಲ್ಲ. ನೀವು ಜೀವನದಲ್ಲಿ ಸಂತೋಷವಾಗಿರಲು ಅಡ್ಡಿಗಳು ಮತ್ತು ಭಯಗಳನ್ನು ಮೀರಬೇಕು. ಉನ್ನತ ಸ್ಥಾನದ ಮೇಲಧಿಕಾರಿಗಳಿಂದ ನೀವು ಅನುಕೂಲ ಪಡೆಯುತ್ತೀರಿ.

ಕನ್ಯಾ:ನಿಮ್ಮ ವ್ಯಾಪಾರ ಸಾಮರ್ಥ್ಯಗಳಿಗೆ ಸಂಬಂಧಿಸಿದ ಮುಖ್ಯವಾಗಿ ನಿಮ್ಮ ಹೂಡಿಕೆಗಳು ಮತ್ತು ಹಣಕಾಸಿನ ವಿಷಯಗಳ ಕುರಿತಾದ ಎಲ್ಲ ಸವಾಲುಗಳನ್ನು ವಿಶ್ವಾಸದಿಂದ ಎದುರಿಸಿ. ದೀರ್ಘಾವಧಿಯಿಂದ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಮಹತ್ತರ ಆಲೋಚನೆಗಳಿಂದ ಬರುತ್ತೀರಿ, ಮತ್ತು ಅದು ಅತ್ಯಂತ ಪರಿಣಾಮಕಾರಿಯಾಗಿರುತ್ತದೆ.

ತುಲಾ: ನಿಮ್ಮ ಸುತ್ತಲಿನ ಎಲ್ಲರೂ ನಿಮ್ಮ ಆಲೋಚನೆಗಳು ಮತ್ತು ಪುರಸ್ಕಾರಗಳಿಗಾಗಿ ನಿಮ್ಮನ್ನು ಶ್ಲಾಘಿಸುತ್ತಾರೆ. ನೀವು ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಸುವರ್ಣಾವಕಾಶ ಕಂಡುಕೊಳ್ಳುತ್ತೀರಿ. ನಿಮ್ಮ ಸ್ವಯಂ-ಹಣಕಾಸಿನ ಸ್ವಾವಲಂಬಿ ಗುರಿಯ ಮೂಲಕ ನೀವು ನಿಮ್ಮದೇ ಬಾಸ್ ಆಗಲು ಬಯಸಿದ್ದರೆ ಈ ಅವಧಿ ನಿಮಗೆ ಅತ್ಯಂತ ಪೂರಕವಾಗಿದೆ.

ವೃಶ್ಚಿಕ: ಪುರಸ್ಕಾರಗಳ ಕುರಿತು ಆಲೋಚಿಸದೆ ಸತತವಾಗಿ ಕಠಿಣ ಪರಿಶ್ರಮಪಡುತ್ತಿರಿ. ಕೆಲಸದ ವಿಷಯದಲ್ಲಿ ಸದಾ ಸನ್ನದ್ಧರಾಗಿರಿ. ನೀವು ಜಂಟಿ ಸಹಯೋಗದಲ್ಲಿ ಕೆಲಸ ಮಾಡಲು ಬಯಸಿದರೆ, ನೀವು ತಾಳ್ಮೆ ತಂದುಕೊಳ್ಳಬೇಕು ಮತ್ತು ನಿಮ್ಮ ಪ್ರಯತ್ನಗಳಿಗೆ ಮಾನ್ಯತೆ ದೊರೆಯಲು ಕಾಯಬೇಕು.

ಧನು:ನೀವು ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇದ್ದು ನೀವು ವಿಜಯಿಯಾಗಿ ಹೊರಹೊಮ್ಮಲು ಮರುಹೋರಾಟ ನಡೆಸಬೇಕು. ಇಡೀ ದಿನ ಯಾವುದೇ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿರಿ. ಸಂಜೆಯ ವೇಳೆಗೆ, ಅನಿರೀಕ್ಷಿತ ಫಲಿತಾಂಶಗಳು ನಿಮ್ಮನ್ನು ಆಶ್ಚರ್ಯಗೊಳಿಸುತ್ತವೆ ಮತ್ತು ನಿಮ್ಮನ್ನು ಅತ್ಯಂತ ಸಂತೋಷಗೊಳ್ಳುವಂತೆ ಮಾಡುತ್ತವೆ.

ಮಕರ:ಪ್ರತಿನಿತ್ಯ ಏನೋ ಒಂದು ಹೊಸದನ್ನು ನಿಮಗೆ ತರುತ್ತದೆ. ನೀವು ಕೊಂಚ ಗೊಂದಲದ ಭಾವನೆ ಅನುಭವಿಸುತ್ತೀರಿ, ಅದರಿಂದ ಇಡೀ ದಿನ ಕೊಂಚ ಮಂಕಾಗಿರುತ್ತೀರಿ. ಆದರೆ ಕೆಲಸದ ವಿಷಯದಲ್ಲಿ ನಿಮ್ಮ ಪ್ರಯತ್ನಗಳಿಗೆ ಪುರಸ್ಕರಿಸಲಾಗುತ್ತದೆ ಮತ್ತು ನಿಮ್ಮ ಭವಿಷ್ಯದ ಪ್ರಯತ್ನಗಳಿಗೆ ಸದೃಢ ತಳಹದಿ ನಿರ್ಮಿಸಬಹುದು.

ಕುಂಭ:ನಿಮ್ಮ ದಿನ ಅತ್ಯಂತ ಘಟನೆಗಳ ದಿನವಾಗಿದೆ. ನೀವು ಹೊಸ ಜನರನ್ನು ಭೇಟಿಯಾಗಬಹುದು, ಅರ್ಥಪೂರ್ಣ ಸಂವಹನಗಳನ್ನು ನಡೆಸಬಹುದು ಮತ್ತು ನಿಮ್ಮ ಜ್ಞಾನದ ಪರಿಧಿ ವಿಸ್ತರಿಸಿಕೊಳ್ಳಬಹುದು. ಈ ದಿನ ನಿಮಗೆ ನಿಮ್ಮ ಎಲ್ಲ ಶಕ್ತಿಯನ್ನು ಬಳಸಿಕೊಳ್ಳಲು ಮತ್ತು ನೀವು ಸುಸ್ತು ಹಾಗೂ ಆಯಾಸ ಪಡುವಂತೆ ಮಾಡಬಹುದು. ಆದರೆ ಒಟ್ಟಾರೆಯಾಗಿ ಈ ದಿನ ನಿಮಗೆ ಸಾಕಷ್ಟು ಉತ್ಸಾಹ ತರುತ್ತದೆ.

ಮೀನ:ಕೆಲಸದಲ್ಲಿ ನೀವು ಆತಂಕವನ್ನು ಎದುರಿಸುವ ಸಾಧ್ಯತೆ ಇದ್ದು, ನಿಮ್ಮಲ್ಲಿ ನೀವು ನಂಬಿಕೆ ಕಳೆದುಕೊಳ್ಳಬೇಡಿ. ನೀವು ನಿಮ್ಮದೇ ಹೋರಾಟಗಳನ್ನು ನಡೆಸಬೇಕಾಗಬಹುದು ಮತ್ತು ಫಲಿತಾಂಶದ ಕುರಿತು ತಾಳ್ಮೆಯಿಂದಿರಿ. ದಿನ ಮುಂದುವರೆದಂತೆ, ನೀವು ನಿಮ್ಮ ಪ್ರಯತ್ನಗಳಿಗೆ ಪ್ರತಿಫಲವನ್ನು ಆನಂದಿಸಲು ಶಕ್ತರಾಗುತ್ತೀರಿ.

Last Updated : Aug 24, 2019, 6:01 AM IST

ABOUT THE AUTHOR

...view details