ಕರ್ನಾಟಕ

karnataka

ETV Bharat / bharat

ಶನಿವಾರದ ನಿಮ್ಮ ರಾಶಿ ಫಲ ಹೀಗಿದೆ ನೋಡಿ

ಮೇಷ : ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟ. ಆದರೆ, ಕಠಿಣ ನಿರ್ಧಾರ ನಿಮಗೆ ಬದ್ಧರಾಗಿರಲು ನೆರವಾಗುತ್ತದೆ. ಭಾವನಾತ್ಮಕತೆ ನಿಮ್ಮ ಉದ್ದೇಶವನ್ನು ಅಲ್ಲಾಡಿಸುತ್ತದೆ, ಆದರೆ, ಒಮ್ಮೆ ನಿರ್ಧರಿಸಿದ ನಂತರ ನೀವು ಅದಕ್ಕೆ ಅಂಟಿಕೊಳ್ಳುವುದು ಅಗತ್ಯ. ಅಲ್ಲದೆ, ನೀವು ದಾಪುಗಾಲು ಇಡುವಲ್ಲಿ ಆಘಾತವನ್ನು ತಡೆದುಕೊಳ್ಳಲು ಕಲಿಯಿರಿ.

ರಾಶಿ ಫಲ

By

Published : Jun 1, 2019, 4:30 AM IST

ವೃಷಭ : ನೀವು ಹೊಸ ಯೋಜನೆ ಪ್ರಾರಂಭಿಸುವುದನ್ನು ತಡ ಮಾಡಬಹುದು. ನಿಮ್ಮ ಪ್ರಿಯತಮೆಯೊಂದಿಗೆ ರೊಮ್ಯಾಂಟಿಕ್ ಪ್ರಯಾಣ ಅಥವಾ ನಿಮ್ಮನ್ನು ಸ್ಪಾದಲ್ಲಿ ದುಬಾರಿ ಮೇಕೋವರ್ ನಲ್ಲಿ ದಿನ ನಿಮ್ಮ ಇಂದಿನ ಜಡತ್ವವನ್ನು ಮೌಲ್ಯೀಕರಿಸುತ್ತದೆ. ಏನೆ ಆದರೂ ಇದು ನಿಮ್ಮ ಜೇಬಿಗೆ ಭಾರವೇ ಸರಿ.

ಮಿಥುನ : ನೀವು ತರ್ಕ ಮತ್ತು ಭಾವನೆಗಳ ನಡುವೆ ಸಮತೋಲನ ಸಾಧಿಸಲು ಬಹಳ ಕಷ್ಟಪಡುತ್ತೀರಿ. ಜಗತ್ತಿನ ಮುಂದೆ ನೀವು ಯಶಸ್ವಿಯಾದರೂ, ನೀವು ನಿಮ್ಮ ಮಿತ್ರರೊಂದಿಗೆ ವಿವೇಚನಾಯುಕ್ತರಾಗಿರುವುದಿಲ್ಲ. ನಿಮ್ಮ ಪ್ರಿಯತಮೆಯೊಂದಿಗೆ ನಿಮಗೆ ಅದ್ಭುತ ಸಮಯ ಕಳೆಯುತ್ತೀರಿ. ಆದರೆ, ನಿಮ್ಮ ದೈಹಿಕ ಹೊರನೋಟ ನಿಮಗೆ ಕಾಳಜಿ ಉಂಟು ಮಾಡುತ್ತದೆ.

ಕರ್ಕಾಟಕ:ನೀವು ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತೀರಿ. ಆದ್ದರಿಂದ ನೀವು ನಿಮ್ಮ ಕೆಲಸದಲ್ಲಿ ವ್ಯಸ್ತರಾಗಿರುತ್ತೀರಿ. ಬಿಡುವಿಲ್ಲದ ಕೆಲಸದಿಂದ ನಿತ್ರಾಣಗೊಳ್ಳುತ್ತೀರಿ. ಆದ್ದರಿಂದ ಅದು ನಿಮಗೆ ಸಾಕಷ್ಟು ಒತ್ತಡ ಮತ್ತು ಆತಂಕ ಉಂಟು ಮಾಡುವ ಸಾಧ್ಯತೆಯಿದೆ.

ಸಿಂಹ :ನೀವು ಇಂದು ಅತ್ಯಂತ ಭಾವನಾತ್ಮಕ ಮತ್ತು ಉದ್ವೇಗಕ್ಕೆ ಒಳಗಾಗುತ್ತೀರಿ. ನಿಮ್ಮ ಅಹಂ ಸರಿಯಾದ ಸಮಯದಲ್ಲಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸದಂತೆ ತಡೆಯುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಂವಹನದ ಪ್ರಯತ್ನ ನಡೆಸುವಾಗ ನೀವು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದು ಪ್ರಣಯಕ್ಕೆ ಮತ್ತು ಪ್ರೀತಿಯ ನಿರೀಕ್ಷೆ ಮಾಡುವವರಿಗೆ ಒಳ್ಳೆಯ ದಿನವಾಗಿದೆ.

ಕನ್ಯಾ :ಅಗೋಚರ ಭಯವೊಂದು ನಿಮ್ಮ ಮನಸ್ಸನ್ನು ಇಂದು ಕಾಡುತ್ತಿರುತ್ತದೆ. ದಿನ ಪ್ರಗತಿಯಾದಂತೆ ಈ ನೆರಳು ಮತ್ತಷ್ಟು ಹೆಚ್ಚಾಗಿ ಬೆಳೆಯುತ್ತದೆ. ನಿಮ್ಮ ವಿದೇಶಿ ಮಿತ್ರರಿಗೆ ನೀವು ಅತಿಯಾಗಿ ಖರ್ಚು ಮಾಡುತ್ತಿರುವುದನ್ನು ನೀವು ಕಾಣುತ್ತೀರಿ. ಈ ನಿಟ್ಟಿನಲ್ಲಿ ಇಂದು ನೀವು ಎಚ್ಚರಿಕೆಯಿಂದ ಇರುವುದು ಉತ್ತಮ.

ತುಲಾ :ನಿಮ್ಮ ವ್ಯಕ್ತಿತ್ವ ಉನ್ನತಗೊಳಿಸಲು ಮತ್ತು ನಿಮ್ಮ ಪ್ರತಿಭೆಗಳನ್ನು ವಿಶ್ವಕ್ಕೆ ಸಾಬೀತುಪಡಿಸಲು ಇದು ಅತ್ಯಂತ ಸೂಕ್ತ ಕಾಲ. ಇಂದು, ನೀವು ಹೊಸ ಬಟ್ಟೆಗಳನ್ನು ಕೂಡಾ ಕೊಳ್ಳುತ್ತೀರಿ. ನಿಮಗೆ ಹತ್ತಿರವಿರುವ ಜನರಿಗೆ ಗಮನ ನೀಡುತ್ತೀರಿ. ಇಂದು ನೀವು ನಿಮ್ಮ ಕನಸಿನ ವಿಶ್ವದಲ್ಲಿ ದಿನವನ್ನು ಕಳೆಯುತ್ತೀರಿ.

ವೃಶ್ಚಿಕ :ನಿಮ್ಮ ದಿನ ನಿಮಗೆ ಕಿರಿಕಿರಿ ಮತ್ತು ಆಕ್ರಮಣಶೀಲತೆ ತರಬಹುದು. ಅದು ನಿಮ್ಮ ಅದೃಷ್ಟವನ್ನೂ ದೂರ ಮಾಡಬಹುದು. ನಿಮಗೆ ತೊಂದರೆ ಉಂಟು ಮಾಡುವ ಯಾವುದೇ ವಿವಾದಗಳಿಂದ ದೂರವಿರುವುದು ಉತ್ತಮ. ಆದರೆ, ಸಂಜೆಯ ವೇಳೆಗೆ, ನಿಮ್ಮ ಅದೃಷ್ಟ ಬದಲಾಗುತ್ತದೆ ಮತ್ತು ನೀವು ಶಾಂತಿ ಮತ್ತು ನಿರಾಳತೆಯನ್ನು ಎದುರು ನೋಡಬಹುದು.

ಧನು: ನಿಮ್ಮ ದಿನ ಸಂಪೂರ್ಣ ಭರವಸೆ ಮತ್ತು ಸಂತೋಷದಿಂದ ಕೂಡಿದೆ. ಹೆಚ್ಚು ಪರಿಶೀಲನೆ ಅಗತ್ಯವಾಗಿದ್ದ ಕೆಲಸವೂ ಬಹಳ ಬೇಗನೆ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ನೀವು ದೀರ್ಘಾವಧಿ ವಿವಾದಗಳನ್ನು ಕೂಡಾ ತಾರ್ಕಿಕ ವಿವರಣೆಯೊಂದಿಗೆ ಪರಿಹರಿಸಲು ನೆರವಾಗುತ್ತೀರಿ.

ಮಕರ : ಕಳೆದ ಕೆಲ ತಿಂಗಳು ಕಠಿಣವಾಗಿದ್ದು, ನೀವು ನಿಮ್ಮ ಬಂಧುಮಿತ್ರರೊಂದಿಗೆ ಸಂತೋಷಪಡುವುದನ್ನು ಕಳೆದುಕೊಂಡಿದ್ದೀರಿ. ನಿಮ್ಮ ಬದ್ಧತೆ ಮತ್ತು ಶ್ರಮ ನಿಮಗೆ ನೀವು ಬಯಸಿದ ಹಂತಕ್ಕೆ ತಂದಿದೆ. ನೀವು ಈಗ ಕುಳಿತುಕೊಂಡು, ಅದರ ಪ್ರತಿಫಲ ಪಡೆಯುವುದು ಮತ್ತು ವೈಭವ ಅನುಭವಿಸುವ ಕಾಲ.

ಕುಂಭ:ಇಂದು ನೀವು ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಲು ಸುಲಭ ಎಂದು ಕಾಣುವ ದಿನವಾಗಿದೆ. ಜನರು ಸುಲಭವಾಗಿ ಜವಾಬ್ದಾರಿಯನ್ನು ನಿಮ್ಮ ಹೆಗಲ ಮೇಲೆ ಸರಿಸುವ ಜನರನ್ನು ಕಾಣುತ್ತೀರಿ. ಎಚ್ಚರದಿಂದಿರಿ, ಕಿರಿಕಿರಿ ಅನುಭವಿಸಬೇಡಿ, ನಿಮ್ಮ ದೌರ್ಬಲ್ಯಗಳೇ ನಿಮ್ಮ ಬಲವಾದ ಅಂಶಗಳಾಗುವ ಸುವರ್ಣಾವಕಾಶ ನಿಮಗಾಗಿ ಕಾದಿದೆ.

ಮೀನ :ಇಂದು ನಿಮ್ಮ ತಾರೆಗಳು ಪೂರಕವಾಗಿಲ್ಲದೇ ಇರುವುದರಿಂದ ನಿಮ್ಮ ಹಣಕಾಸು ವ್ಯವಹಾರಗಳ ಮೇಲೆ ಒಂದು ಕಣ್ಣಿಡಿ. ಹಣಕಾಸಿಗೆ ಸಂಬಂಧಿಸಿದ ವಿಷಯಗಳ ಕುರಿತು ನೀವು ಜಾಗರೂಕತೆಯಿಂದ ಇರುವುದು ಉತ್ತಮ.

ABOUT THE AUTHOR

...view details