ಮೇಷ: ಇಂದು ನೀವು ಸೂಕ್ಷ್ಮ ಕುಸುರಿ ಮತ್ತು ಸೌಂದರ್ಯಕ್ಕೆ ಗಮನ ನೀಡುತ್ತೀರಿ. ನೀವು ನಿಮ್ಮ ಸುತ್ತಲಿನ ಅಂತಹ ಸುಂದರ ವಸ್ತುಗಳ ಕುರಿತಾದ ಹೊಸ ಉದ್ಯಮ ಪ್ರಾರಂಭಿಸಲೂ ಬಯಸುತ್ತೀರಿ. ಆದರೆ ನಿರ್ಧಾರ ಕೈಗೊಳ್ಳುವುದು ಕಷ್ಟದ ಕೆಲಸ. ಆಯ್ಕೆಗಳನ್ನು ಆವಿಷ್ಕರಿಸಿ ಮತ್ತು ಮುಕ್ತ ಮನಸ್ಸಿನಲ್ಲಿರಿ.
ವೃಷಭ:ಇಂದು ನಿಮ್ಮೊಂದಿಗೆ ಕೊಂಚ ಗುಣಮಟ್ಟದ ಸಮಯ ಕಳೆಯಲು ಅತ್ಯಂತ ಸೂಕ್ತವಾದ ದಿನವಾಗಿದೆ. ಹಿಂದೆಂದೂ ಇಲ್ಲದಂತೆ ನಿರಾಳವಾಗಿ ಮತ್ತು ನವೋತ್ಸಾಹ ತುಂಬಿಕೊಳ್ಳಿರಿ. ಈ ದಿನದಲ್ಲಿ ನಿಮ್ಮ ಮಿತ್ರರು ಹಾಗೂ ಕುಟುಂಬದೊಂದಿಗೆ ಭೋಜನಕೂಟ ಹಾಗೂ ಮನರಂಜನೆ ಪಡೆಯುವ ಸಾಧ್ಯತೆ ಇದೆ. ನೀವು ಅತ್ಯಂತ ಖಾರ, ಸವಿಯಾದ ಮತ್ತು ಸ್ವಾದಿಷ್ಟ ತಿನಿಸನ್ನು ಬಯಸುತ್ತೀರಿ, ಎಷ್ಟು ಸಾಧ್ಯವೋ ಅಷ್ಟು ನಿಮ್ಮನ್ನು ನೀವು ತಣಿಸಿಕೊಳ್ಳಿ.
ಮಿಥುನ:ಇಂದು ನೀವು ಸಂಪೂರ್ಣ ಚೈತನ್ಯ ಮತ್ತು ಅತ್ಯಂತ ಉತ್ಸಾಹದಲ್ಲಿರುತ್ತೀರಿ. ನೀವು ವಿಷಯಗಳನ್ನು ಸಕಾರಾತ್ಮಕತೆ ಬೆಳಕಲ್ಲಿ ನೋಡುತ್ತೀರಿ ಅದು ನಿಮ್ಮನ್ನು ಯಶಸ್ಸಿನತ್ತ ನಡೆಯಲು ನೆರವಾಗುತ್ತದೆ. ನೀವು ಸಂಪೂರ್ಣ ಮುಕ್ತವಾಗಿ ಕಾರ್ಯ ನಿರ್ವಹಿಸಲು ಶಕ್ತರಾಗುತ್ತೀರಿ, ಆದ್ದರಿಂದ ನಿಮಗೆ ಇಷ್ಟವಾಗುವ ವಿಷಯಗಳನ್ನು ತೆಗೆದುಕೊಳ್ಳುತ್ತೀರಿ. ನಿಮಗೆ ಅತ್ಯಂತ ಒತ್ತಡವಿರಬಹುದು, ಆದರೆ ಅದು ಶಾಂತಿಯುತ ಮತ್ತು ಪುರಸ್ಕಾರಯುತ ಫಲಿತಾಂಶಗಳನ್ನು ನೀಡುತ್ತದೆ.
ಕರ್ಕಾಟಕ:ನಿಮ್ಮ ಕುಟುಂಬ ನೆರವಿನ ಹಸ್ತ ಚಾಚದೇ ಇರಬಹುದು. ಆದ್ದರಿಂದ ನಿಮ್ಮ ಪ್ರಯತ್ನಗಳು ವಿಫಲವಾಗುತ್ತವೆ. ನಿಮ್ಮ ಮಕ್ಕಳು ಕೂಡಾ ನಿಮ್ಮನ್ನು ನಿರುತ್ಸಾಹಗೊಳಿಸುತ್ತಾರೆ. ನೀವು ನಿಮ್ಮ ಕುಟುಂಬದ ನಡುವೆ ಭಿನ್ನಾಭಿಪ್ರಾಯ ಎದುರಿಸಬಹುದು. ನೆರೆಹೊರೆಯವರ ಬಗ್ಗೆ ಎಚ್ಚರದಿಂದಿರಿ ಮತ್ತು ನಿಮ್ಮ ಸನ್ನಿವೇಶಗಳನ್ನು ಘನತೆ ಮತ್ತು ಸಮಚಿತ್ತತೆಯಿಂದ ಎದುರಿಸಿ.
ಸಿಂಹ: ಇಂದು ನಿರ್ಧಾರಗಳನ್ನು ಕೈಗೊಳ್ಳಲು ಇತರರ ಅಭಿಪ್ರಾಯಗಳನ್ನು ನಿರೀಕ್ಷಿಸುತ್ತೀರಿ. ನೀವು ಸಂವಹನದಲ್ಲಿ ಇತರರನ್ನು ತಾಳ್ಮೆಯಿಂದ ಆಲಿಸಬೇಕು. ನಿಮ್ಮ ಆತ್ಮವಿಶ್ವಾಸ ಕುಸಿಯುತ್ತಿದೆ, ಆದ್ದರಿಂದ, ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.
ಕನ್ಯಾ: ನಿಮ್ಮತ್ತ ಎಸೆಯಲಾಗಿರುವ ಹಣಕಾಸಿನ ಸವಾಲುಗಳನ್ನು ನೀವು ಪ್ರೀತಿಸುವುದು ಖಂಡಿತವಾಗಿಯೂ ಸಾಧ್ಯ, ಏಕೆಂದರೆ ಅವು ನಿಮ್ಮ ಯಶಸ್ಸಿಗೆ ನಿಮ್ಮನ್ನು ಮತ್ತಷ್ಟು ಸಾಣೆ ಹಿಡಿಯುತ್ತವೆ. ನೀವು ಸಮಸ್ಯೆ ಪರಿಹಾರದ ಆವಿಷ್ಕಾರಕ ಆಲೋಚನೆಗಳು ಮತ್ತು ಸುಧಾರಿತ ವಿಧಾನಗಳನ್ನು ಕಂಡುಕೊಳ್ಳುತ್ತೀರಿ. ನಿಮ್ಮ ಪ್ರಸ್ತುತದ ವ್ಯಾಪಾರದ ಆಲೋಚನೆಗಳು ಅದ್ಭುತಗಳನ್ನು ಉಂಟು ಮಾಡಲಿವೆ.