ಸಿಲ್ಚಾರ್: ಮಾರ್ಚ್ 24ರಿಂದ ಇಡೀ ದೇಶವೇ ಸ್ತಬ್ಧವಾಗಿದೆ. ಕೂಲಿ ಕಾರ್ಮಿಕರು ನೂರಾರು ಕಿ.ಮೀ ನಡೆದುಕೊಂಡು ತಮ್ಮ ಸ್ವಗ್ರಾಮ ಸೇರಿದ್ದಾರೆ. ಕೋವಿಡ್ 19ಗೆ ದೇಶವೇ ತತ್ತರಿಸುತ್ತಿದೆ. ರಾಜ್ಯ ಸರ್ಕಾರಗಳು ಆದಷ್ಟು ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚಿದೆ. ಹೀಗೆ ಅಸ್ಸೋಂ ಸರ್ಕಾರ ಈಗ ಲೈಂಗಿಕ ಕಾರ್ಯಕರ್ತೆಯರಿಗೆ ಸಹಾಯ ಮಾಡುತ್ತಿದೆ.
ಹೌದು, ಲಾಕ್ಡೌನ್ ಬಳಿಕ ದಿನಗೂಲಿ ಪಡೆಯುತ್ತಿರುವ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದೇ ರೀತಿ ಸಿಲ್ಚಾರದ ರೆಡ್ಲೈಟ್ ನಗರವೆಂದೇ ಫೇಮಸ್ ಆಗಿರುವ ರಾಧಾಮಧಾಬ್ನಲ್ಲಿರುವ ಲೈಂಗಿಕ ಕಾರ್ಯಕರ್ತೆಯರು ಸಂಕಷ್ಟಕ್ಕೆ ಸಿಲುಕಿದ್ದರು. ಇಲ್ಲಿರುವ 200ಕ್ಕೂ ಹೆಚ್ಚು ಕುಟುಂಬಗಳ ಜನರಿಗೆ ಆರೋಗ್ಯ ತಪಾಸಣೆ ನಡೆಸಿ ಅಕ್ಕಿ, ಬೆಳೆಕಾಳು ಮತ್ತು ಎಣ್ಣೆ ನೀಡಿದ್ದಾರೆ.