ಗುವಾಹಟಿ(ಅಸ್ಸೋಂ): ಇಲ್ಲಿನ ಬಿನೋದ್ ದುಲು ಬೋರಾ ಎಂಬ ಯುವಕನಿಗೆ "ಅರ್ಥ್ ಡೇ ನೆಟ್‌ವರ್ಕ್ ಸ್ಟಾರ್" ಪ್ರಶಸ್ತಿ ನೀಡಿ ಗೌರವಿಸಲಾಯಿತು. ವನ್ಯಜೀವಿಗಳ ಸಂರಕ್ಷಣೆಗಾಗಿ ಅವರು ಮಾಡಿರುವ ಪ್ರಯತ್ನಗಳಿಗಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಅಂತಾರಾಷ್ಟ್ರೀಯ ಸಂಸ್ಥೆಯಾಗಿರುವ ಅರ್ಥ್ ಡೇ ನೆಟ್‌ವರ್ಕ್, ವಿವಿಧ ವನ್ಯಜೀವಿ ಪ್ರಭೇದಗಳನ್ನು ರಕ್ಷಿಸಲು ಮತ್ತು ಉಳಿಸಲು ಹಾಗೂ ವನ್ಯಜೀವಿ ಪ್ರಭೇದಗಳು ಮತ್ತು ಮಾನವರ ನಡುವಣ ಘರ್ಷಣೆ ಕಡಿಮೆ ಮಾಡಲು ಬೋರಾ ಅವರು ಕೈಗೊಂಡಿರುವ ಕಾರ್ಯಗಳಿಗಾಗಿ ಈ ಗೌರವ ನೀಡಿದೆ.
ಅರ್ಥ್ ಡೇ ನೆಟ್‌ವರ್ಕ್ ಸ್ಟಾರ್ ಪ್ರಶಸ್ತಿ ಪಡೆದ ಅಸ್ಸೋಂ ಯುವಕ ಸೆಂಟ್ರಲ್ ಅಸ್ಸೋಂನ ನಾಗಾನ್ ಜಿಲ್ಲೆಯ ನಿವಾಸಿಯಾಗಿರುವ ಬೋರಾ, ಕಿಂಗ್ ಕೋಬ್ರಾ, ಇಂಡಿಯನ್ ಸ್ಲೋ ಲೋರಿಸ್, ಹಿಮಾಲಯನ್ ಪೈಥಾನ್, ಗೂಬೆ, ಕೊಕ್ಕರೆಗಳು ಸೇರಿದಂತೆ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ.
ವನ್ಯಜೀವಿಗಳ ಸಂರಕ್ಷಣೆಗಾಗಿ ಅವರು ಮಾಡಿದ ಕಾರ್ಯಗಳಿಗಾಗಿ ಸೆಂಚುರಿ ಏಷ್ಯಾದ “ಟೈಗರ್ ಡಿಫೆಂಡರ್ ಪ್ರಶಸ್ತಿ” ಮತ್ತು 2014ರಲ್ಲಿ ವನ್ಯಜೀವಿ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. “ಹಾತಿ ಬಂಧು” (ಆನೆ ಸ್ನೇಹಿತ) ಸಂಸ್ಥೆ ಸದಸ್ಯರೂ ಆಗಿರುವ ಬೋರಾ ಮಾನವ ಮತ್ತು ಆನೆ ಸಂಘರ್ಷವನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಕ್ರಮಗಳನ್ನು ಕೈಗೊಂಡಿದ್ದಾರೆ.
ಅಸ್ಸೋಂ ಸರ್ಕಾರ ಬೋರಾ ಅವರಿಗೆ “ಸಾಮೂಹಿಕ್ ಕರ್ಮ ಬೋಟಾ” ಪ್ರಶಸ್ತಿ ನೀಡಿ ಗೌರವಿಸಿದೆ.