ಕರ್ನಾಟಕ

karnataka

ETV Bharat / bharat

ಮೋಸ್ಟ್‌ ವಾಂಟೆಡ್‌ ಉಗ್ರನ ಬಂಧನ; ಅಸ್ಸೋಂ ಪೊಲೀಸರ ಭರ್ಜರಿ ಬೇಟೆ - ಜೆಎಂಬಿ ಭಯೋತ್ಪಾದಕ ಅಜರುದ್ದೀನ್ ಅರೆಸ್ಟ್

ಅಸ್ಸೋಂನ ಬಾರ್ಪೆಟಾ ಜಿಲ್ಲೆಯ ರೌಮಾರಿಯಲ್ಲಿ ತಲೆಮರೆಸಿಕೊಂಡಿದ್ದ ಜೆಎಂಬಿ ಉಗ್ರ ಅಜರುದ್ದೀನ್ ಅಹ್ಮದ್​​, ಬುರ್ಧ್ವಾನ್ ಸ್ಪೋಟದಲ್ಲಿ​ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.

ಜೆಎಂಬಿ ಉಗ್ರನನ್ನು ಬಂಧಿಸಿದ ಅಸ್ಸೋಂ ಪೊಲೀಸರು

By

Published : Oct 17, 2019, 1:33 PM IST

ಬಾರ್ಪೆಟಾ(ಅಸ್ಸೋಂ):ಜಮಾತ್​-ಉಲ್​-ಮುಜಾಹಿದ್ದೀನ್ ಬಾಂಗ್ಲಾದೇಶ್(ಜೆಎಂಬಿ)​ ಉಗ್ರಸಂಘಟನೆಗೆ ಸೇರಿದ ಭಯೋತ್ಪಾದಕನನ್ನು ಅಸ್ಸೋಂ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ

ಅಸ್ಸೋಂನ ಬಾರ್ಪೆಟಾ ಜಿಲ್ಲೆಯ ರೌಮಾರಿಯಲ್ಲಿ ತಲೆಮರೆಸಿಕೊಂಡಿದ್ದ ಜೆಎಂಬಿ ಉಗ್ರ ಅಜರುದ್ದೀನ್ ಅಹ್ಮದ್​​, ಬುರ್ಧ್ವಾನ್​ ಬ್ಲಾಸ್ಟ್​​ನಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.

ಜೆಎಂಬಿ ಉಗ್ರನ ಬಂಧನ

2013ರಲ್ಲಿ ಅಜರುದ್ದೀನ್, ಜೆಎಂಬಿ ಭಯೋತ್ಪಾದಕ ಸಂಘಟನೆ ಸೇರಿಕೊಂಡಿದ್ದ. ಅಸ್ಸೋಂ ಪೊಲೀಸ್ ಹಾಗೂ ಎನ್​ಐಎಯ ಮೋಸ್ಟ್ ವಾಟೆಂಡ್ ಉಗ್ರರ ಲಿಸ್ಟ್​​ನಲ್ಲಿದ್ದ ಅಜರುದ್ದೀನ್​ನನ್ನು ಕೊನೆಗೂ ಬಂಧಿಸಲಾಗಿದೆ.

ಗುಪ್ತಚರ ಇಲಾಖೆಯ ಖಚಿತ ಮಾಹಿತಿಯ ಮೇರೆಗೆ ಅಜರುದ್ದೀನ್​ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಉಗ್ರನನ್ನು ಬಂಧಿಸಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಏಳು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ABOUT THE AUTHOR

...view details