ಗುವಾಹಟಿ(ಅಸ್ಸೋಂ): ತಿನಸುಕಿಯಾ ಜಿಲ್ಲೆಯ ಬಾಘ್ಜನ್ ಬಳಿಯಿರುವ ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ ಅನಿಲ ಬಾವಿಗೆ ತಗುಲಿರುವ ಬೆಂಕಿ ಇನ್ನೂ ಆರುವ ಲಕ್ಷಣಗಳು ಕಾಣಿಸುತ್ತಿಲ್ಲ.
ಅಸ್ಸೋಂನ ಆಯಿಲ್ ಇಂಡಿಯಾ ಲಿಮಿಟೆಡ್ ಬಾವಿಯಲ್ಲಿ ಬುಧವಾರ ಮತ್ತೆ ಹೊಸದಾಗಿ ಬೆಂಕಿ ಕಾಣಿಸಿಕೊಂಡಿದ್ದು, ಒಂದು ತಿಂಗಳಿನಿಂದ ಹೊತ್ತಿ ಉರಿಯುತ್ತಿದೆ. ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಿರತವಾಗಿದ್ದ ಮೂವರು ವಿದೇಶಿ ತಜ್ಞರು ಗಾಯಗೊಂಡಿದ್ದಾರೆ. ಗಾಯಗೊಂಡ ತಂತ್ರಜ್ಞರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಒಐಎಲ್ ಮೂಲಗಳು ತಿಳಿಸಿವೆ. ಇಡೀ ಪ್ರದೇಶವನ್ನು ಅಗ್ನಿಶಾಮಕ ಸಿಬ್ಬಂದಿ ಸುತ್ತುವರಿದಿದ್ದಾರೆ.
ಗುವಾಹಟಿಯಿಂದ 500 ಕಿ.ಮೀ ದೂರದಲ್ಲಿರುವ ಬಾಘ್ಜನ್ ತಿನಸುಕಿಯಾದಲ್ಲಿನ ತೈಲ ಬಾವಿ ಮೇ 27ರಂದು ಸ್ಫೋಟಗೊಂಡು ಅನಿಲ ಸೋರಿಕೆಯಾಗಿತ್ತು. ಈ ಪ್ರದೇಶದಲ್ಲಿರುವ ಬೆಳೆಗಳು ಮತ್ತು ಜೀವವೈವಿಧ್ಯತೆಗೆ ಹಾನಿಯುಂಟು ಮಾಡುತ್ತಿದೆ.