ಅಸ್ಸೋಂ: ಕಳೆದ ಹಲವು ದಿನಗಳಿಂದ ಸುರಿದ ಭಾರೀ ಮಳೆಗೆ ಅಸ್ಸೋಂ ರಾಜ್ಯ ಅಲ್ಲೋಲ ಕಲ್ಲೋಲವಾಗಿದ್ದು, ಇಲ್ಲಿಯವರೆಗೆ 15 ಜನ ಬಲಿಯಾಗಿದ್ದಾರೆ.
ಜಲ ಪ್ರಳಯಕ್ಕೆ ಅಸ್ಸೋಂ ಅಲ್ಲೋಲ ಕಲ್ಲೋಲ... ಮಾಹಿತಿ ಪಡೆದ ಮೋದಿ - undefined
ಅಸ್ಸಾಂನಲ್ಲಿ ಭಾರೀ ಪ್ರವಾಹಕ್ಕೆ ಕಾಝಿರಂಗ ರಾಷ್ಟ್ರೀಯ ಉಧ್ಯಾನವನ ಶೇಕಡ 95 ರಷ್ಟು ಮುಳುಗಡೆಯಾಗಿದೆ.

ಜಲ ಪ್ರಳಯಕ್ಕೆ ಅಸ್ಸೋಂ ಅಲ್ಲೋಲ ಕಲ್ಲೋಲ
ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪ್ರಧಾನಿ ಮೋದಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ಗೆ ಕರೆ ಮಾಡಿ ಸದ್ಯದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಭಾರೀ ಪ್ರವಾಹಕ್ಕೆ ಕಾಝಿರಂಗ ರಾಷ್ಟ್ರೀಯ ಉಧ್ಯಾನವನ ಶೇಕಡ 95 ರಷ್ಟು ಮುಳುಗಡೆಯಾಗಿದೆ.
4,157 ಹಳ್ಳಿಗಳು ಜಲಾವೃತಗೊಂಡಿದ್ದು, 42.86 ಲಕ್ಷ ಜನ ನೆರೆ ಸಂತ್ರಸ್ಥರಾಗಿದ್ದಾರೆ. ರಾಜ್ಯದಲ್ಲಿ ಸುಮಾರು 183 ಗಂಜಿ ಕೇಂದ್ರಗಳನ್ನ ತೆರೆಯಲಾಗಿದ್ದು, 83,180 ಜನರನ್ನ ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗಿದೆ.