ಗುವಾಹಟಿ (ಅಸ್ಸೋಂ):ತೀವ್ರ ಪ್ರವಾಹಕ್ಕೀಡಾಗಿದ್ದ ಇಲ್ಲಿನ ನಾಲ್ಕೂ ಜಿಲ್ಲೆಗಳ ನೀರಿನ ಮಟ್ಟ ಸದ್ಯ ತಗ್ಗಿದ್ದು, ಪ್ರವಾಹ ಪರಿಸ್ಥಿತಿ ಸುಧಾರಿಸಿದೆ. ಪ್ರಸ್ತುತ ಆರು ಜಿಲ್ಲೆಗಳಲ್ಲಿ 10,000 ಕ್ಕೂ ಹೆಚ್ಚು ಜನರು ಮತ್ತು 5,375 ಹೆಕ್ಟೇರ್ ಬೆಳೆಭೂಮಿ ಹಾನಿಗೀಡಾಗಿದೆ ಎಂದು ಸರ್ಕಾರದ ಬುಲೆಟಿನ್ ತಿಳಿಸಿದೆ.
ಗುರುವಾರದಿಂದ ಬೊಂಗೈಗಾಂವ್, ಗೋಲ್ಪಾರ, ಕಮ್ರೂಪ್ ಮತ್ತು ನಾಗಾನ್ ಜಿಲ್ಲೆಗಳ ನಂದಿಗಳಿಂದ ಪ್ರವಾಹ ಬಂದಿದ್ದು, 10 ಜಿಲ್ಲೆಗಳ 177 ಹಳ್ಳಿಗಳಲ್ಲಿನ 84,100 ಜನರು ಹಾನಿಗೊಳಗಾಗಿದ್ದಾರೆ. ಅದರಲ್ಲೂ ಗೋಲ್ಪಾರ ಕಳೆದ ಹಲವು ದಿನಗಳಿಂದ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದೆ.