ನವದೆಹಲಿ: ಕೇಂದ್ರ ಸರ್ಕಾರ ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ಸಿ) ಪಟ್ಟಿಯನ್ನ ಇಂದು ಬಿಡುಗಡೆ ಮಾಡಿದೆ.
ಎನ್ ಆರ್ಸಿಯ ಕಾರ್ಯನಿರ್ವಾಹಕ ಅಧಿಕಾರ ಪ್ರತೀಕ ಹಜೆಲಾ ಪಟ್ಟಿ ಬಿಡುಗಡೆ ಮಾಡಿದ್ದಾರೆ.( 3,11,21,004 ) 3.11 ಕೋಟಿ ಮಂದಿ ಪಟ್ಟಿಯಲ್ಲಿ ಅರ್ಹತೆ ಪಡೆದುಕೊಂಡಿದ್ದಾರೆ. ಉಳಿದಂತೆ 19.06 ಲಕ್ಷ ಮಂದಿ ಎನ್ಆರ್ಸಿಯಲ್ಲಿ ಅರ್ಹತೆ ಪಡೆದುಕೊಂಡಿಲ್ಲ. ಇವರ್ಯಾರು ಎನ್ಆರ್ಸಿ ಸಂಬಂಧ ದಾಖಲೆ ಸಲ್ಲಿಸಿಲ್ಲ ಎಂದು ಪ್ರತೀಕ್ ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ರಾಷ್ಟ್ರೀಯ ಪೌರ ನೋಂದಣಿ ಪಟ್ಟಿಯಲ್ಲಿ ತಮ್ಮ ಹೆಸರು ತಿಳಿದುಕೊಳ್ಳಲು ಅಸ್ಸೋನಾದ್ಯಂತ ಸೇವಾ ಕೇಂದ್ರಗಳನ್ನ ತೆರೆದಿದೆ. ಅಷ್ಟೇ ಅಲ್ಲ ತಮ್ಮ ಮೊಬೈಲ್ನಲ್ಲಿ ನೋಂದಣಿಯನ್ನ ಕನ್ಫರ್ಮ್ ಮಾಡಿಕೊಳ್ಳಬಹುದು. www.nrcassam.nic.in or www.assam.mygov.in online. ಗೆ ಭೇಟಿ ನೀಡಿ ನೋಂದಣಿಯ ಮಾಹಿತಿ ಪಡೆಯಬಹುದು.
ಇದೇ ವೇಳೆ ಕೇಂದ್ರ ಸರ್ಕಾರ, ವಿದೇಶಿಗರಿಗೆ ಮೇಲ್ಮನವಿ ಸಲ್ಲಿಸಲು 60 ರಿಂದ 120 ದಿನಗಳ ಕಾಲಾವಕಾಶವನ್ನೂ ನೀಡಿದೆ. ಇವರು ವಿದೇಶಿ ನ್ಯಾಯಮಂಡಳಿಯಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದ್ದು,ಐದು ಅಂಶಗಳ ಸಲಹೆಯನ್ನ ಹೊರಡಿಸಲಾಗಿದೆ.
ಎನ್ಆರ್ಸಿ ಪಟ್ಟಿ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಅಸ್ಸೋನಾದ್ಯಂತ ಭಾರಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.